‘ಕಲೆಯಿಂದ ಸಹಜೀವನ ಸಾಧ್ಯ’

Tuesday, April 3rd, 2018
natyanikethana

ಮಂಗಳೂರು: ‘ಭಾರತೀಯ ಲಲಿತಕಲೆಗಳ ಅಭ್ಯಾಸ, ಅಸ್ವಾದನೆಯಿಂದ ಸಹಜೀವನ, ಸಹಬಾಳ್ವೆಗೆ ಸಹಕಾರಿ ಎಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಹೇಳಿದರು.ಮಂಗಳಾದೇವಿಯ ಮಾತೃ ಕೃಪಾ ಸಭಾಂಗಣದಲ್ಲಿ ಈಚೆಗೆ ನಡೆದ ಕೊಲ್ಯ ನಾಟ್ಯನಿಕೇತನ ಇದರ 60ರ ಸಂಭ್ರಮದ ಮಾಸಿಕ ನೃತ್ಯ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ‘ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲಾ ಮಕ್ಕಳನ್ನು ಒಂದೇ ಸೂರಿನಡಿ ತಯಾರು ಮಾಡುವಾಗ ಅವರಲ್ಲಿ ಪರಸ್ಪರ ಪ್ರೀತಿ ಅನ್ಯೋನ್ಯತೆ ಬೆಳೆಯುತ್ತದೆ. ಆಗ ಸಮಾಜದಲ್ಲಿ ಸಾಮರಸ್ಯ ಉಂಟಾಗಲು ಸಾಧ್ಯ. […]