ಬಿ.ಸಿ.ರೋಡು ಯುವಕನ ಕೊಲೆಯತ್ನ ಪ್ರಕರಣ, ನೈಜ ಆರೋಪಿಗಳ ಪತ್ತೆಗೆ ಪೋಷಕರ ಆಗ್ರಹ

Wednesday, April 7th, 2021
Ajjibettu

ಬಂಟ್ವಾಳ:  ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಬಳಿ ಇದೇ 4ರಂದು ರಾತ್ರಿ ಸುಮಾರು 7.30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳಿಂದ ತಲೆಗೆ ಸೇರಿದಂತೆ ಕೆನ್ನೆ ಮತ್ತು ಕೈಗಳಿಗೆ ಹರಿತವಾದ ಕತ್ತಿಯಿಂದ ಹಲ್ಲೆಗೀಡಾದ ಮನೋಜ್ ಗಾಣಿಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಈ ಕೃತ್ಯದ ಹಿಂದಿರುವ ನೈಜ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಗಾಯಾಳುವಿನ ತಂದೆ ಭೋಜ ಸಪಲ್ಯ ಬ್ರಹ್ಮರಕೂಟ್ಲು ಇವರು ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಕಳೆದ 10 ವರ್ಷಗಳಿಂದ ವಿದೇಶದಲ್ಲಿ ಎಂಜಿನಿಯರ್ […]

ಬಿ.ಸಿ.ರೋಡು-ಪುಂಜಾಲಕಟ್ಟೆಯಲ್ಲಿ ಹೆದ್ದಾರಿಗೆ ಕುಸಿಯುತ್ತಿರುವ ಗುಡ್ಡಗಳು

Wednesday, September 2nd, 2020
poonjalakatte Road

ಬಂಟ್ವಾಳ : ಬಿ.ಸಿ.ರೋಡು-ಪುಂಜಾಲಕಟ್ಟೆ 19.85 ಕಿ.ಮೀ.ಹೆದ್ದಾರಿ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಲಾದ ಪ್ರದೇಶಗಳನ್ನು ಅಗೆದು ರಸ್ತೆ ನಿರ್ಮಿಸಲಾದ ನಾವೂರು ಗ್ರಾಮದ ಬಡಗುಂಡಿ ಪ್ರದೇಶಗಳಲ್ಲಿ ಹೆದ್ದಾರಿ ಸುಮಾರು 50 ಅಡಿ ಎತ್ತರದ ಗುಡ್ಡಗಳು ಕುಸಿಯಲಾರಂಭಿಸಿದೆ. ಹೆದ್ದಾರಿಯಲ್ಲಿ ಧರ್ಮಸ್ಥಳ ಭಾಗಕ್ಕೆ ತೆರಳುವ ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ರಾತ್ರಿ-ಹಗಲು ಸಂಚರಿಸುತ್ತಿದ್ದು, ಒಂದು ವೇಳೆ ವಾಹನಗಳು ಸಾಗುವ ವೇಳೆ ಈ ಗುಡ್ಡ ಕುಸಿತವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳು ಕೂಡ ಇದ್ದು, ಮಳೆಯ ಕಾರಣದಿಂದ ಮರಗಳು […]

ಬಂಟ್ವಾಳ ವಲಯದ ನೂತನ ಅರಣ್ಯಾಧಿಕಾರಿ ಕಚೇರಿ ಉದ್ಘಾಟನೆ

Tuesday, September 24th, 2019
aranya-kacheri

ಬಂಟ್ವಾಳ : ಬಿ.ಸಿ.ರೋಡು ಸಮೀಪದ ಗಾಣದಪಡುನಲ್ಲಿರುವ ಅರಣ್ಯ ಇಲಾಖೆಯ ನಿವೇಶನದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡವು ಸೆ. 24ರಂದು ಉದ್ಘಾಟನೆಗೊಳ್ಳಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸರಳ ಸಮಾರಂಭದಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ವಲಯ ಅರಣ್ಯಾಧಿಕಾರಿ ಹಳೆ ಕಚೇರಿಯು ಗಾಣದಪಡುವಿನಲ್ಲಿ ಹಾಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡದ ಸ್ಥಳದಲ್ಲೇ ನಿರ್ಮಾಣಗೊಂಡಿದ್ದು, ಹಳೆ ಕಟ್ಟಡವನ್ನು ಕೆಡವಿ ಅರಣ್ಯ ಇಲಾಖೆ ಯಿಂದ ಮಂಜೂರಾದ 25 […]

ತುಟ್ಟಿಭತ್ತೆಯಲ್ಲಿ ಕಡಿತ ಮಾಡಿ ವಂಚಿಸಲು ಪ್ರಯತ್ನ-ಕಾರ್ಮಿಕರ ಆಕ್ರೋಶ

Wednesday, August 13th, 2014
CITU bantwal

ಬಂಟ್ವಾಳ : ಕಳೆದ ವರ್ಷ ಏರಿಕೆಯಾದ ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರಕಾರವು 2014 ಎಪ್ರಿಲ್ 1 ರಿಂದ ಅನ್ವಯವಾಗುವಂತೆ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ರೂ.21.15 ಪ್ರಕಟಿಸಿ ಕಾರ್ಮಿಕರಿಗೆ ಪಾವತಿಸುವಂತೆ ಮಾಲಕರಿಗೆ ಸೂಚಿಸಿದ್ದರೂ ಬೀಡಿ ಮಾಲಕರು ತುಟ್ಟಿಭತ್ತೆಯನ್ನು ಈವರೆಗೆ ಪಾವತಿಸಿರುವುದಿಲ್ಲ, ಅದನ್ನು ಬಿಟ್ಟು ಮಾಲಕರು ಆಗಸ್ಟ್ 1 ರಿಂದ ಅನ್ವಯವಾಗುವಂತೆ ಪೂರ್ತಿ ಮೊತ್ತ ಪಾವತಿಸುವ ಬದಲಾಗಿ ಕೇವಲ ರೂ.15 ನೀಡಿ ರೂ.6.15 ಪೈಸೆ ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಮಾಲಕರ ಈ ವಂಚನಾ ನೀತಿ ಖಂಡನೀಯ, ಬೀಡಿ […]