ವೀಕೆಂಡ್ ಕರ್ಫ್ಯೂನಲ್ಲಿ ಏನೆಲ್ಲಾ ಇದೆ ಎಂಬ ಮಾಹಿತಿ ಇಲ್ಲಿದೆ

Wednesday, January 5th, 2022
weekend-curfew

ಮಂಗಳೂರು : ಐಟಿ ಕೈಗಾರಿಕೆಗಳು, ಇತರ ಕೈಗಾರಿಕೆಗಳು, ಬೀದಿಬದಿ ವ್ಯಾಪಾರ, ಆಹಾರ ದಿನಸಿ, ಹಣ್ಣುಹಂಪಲುಗಳು, ಡೈರಿ, ಹಾಲಿನ ಬೂತ್ ಗಳು, ಪಡಿತರ, ಆಹಾರ ಪೂರೈಕೆ ಮಾಡುವ ಸಂಸ್ಥೆಗಳು ವೀಕೆಂಡ್ ಕರ್ಫ್ಯೂನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು  ದ.ಕ. ಜಿಲ್ಲೆಯಲ್ಲಿ ಈ ವಾರದ ವೀಕೆಂಡ್‌ನಲ್ಲಿ ಹೊರಾಂಗಣದಲ್ಲಿ 200 ಜನರಿಗೆ (ಒಳಾಂಗಣ 100) ಸೀಮಿತಗೊಳಿಸಿ ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರಲಿದೆ ಎಂದರು. ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ […]

ಪುಟಪಾತ್ ಗೆ ಅಡ್ಡಲಾಗಿ ವ್ಯಾಪಾರ, ವ್ಯಾಪಾರಿಗಳ ಸಾಮಾಗ್ರಿ ಮತ್ತು ಅಂಗಡಿ ತೆರವು

Friday, December 24th, 2021
petty Shop

ಮಂಗಳೂರು : ನಗರದ ಸ್ಟೇಟ್‌ಬ್ಯಾಂಕ್‌ನ ಬಳಿ ಪುಟಪಾತ್ ಗೆ ಅಡ್ಡಲಾಗಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಸಾಮಾಗ್ರಿಗಳನ್ನು ಮತ್ತು ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶುಕ್ರವಾರ ಬೆಳಿಗ್ಗೆ  ಪಾಲಿಕೆ ಅಧಿಕಾರಿಗಳು ನಡೆಸಿದರು. ಬುಧವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಗೂಡಂಗಡಿ ಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಗುರುವಾರ ಬೆಳಗ್ಗಿನಿಂದಲೇ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಕಾರ್ಯಾಚರಣೆ  ನಡೆಸಿದ್ದಾರೆ. ಸಾರ್ವಜನಿಕರು ನಡೆದಾಡುವ ಫುಟ್‌ಪಾತ್ ಅತಿಕ್ರಮಿಸಿ, ಗೂಡಂಗಡಿ ನಿರ್ಮಿಸಲಾಗಿದೆ […]