ಅತ್ತಾವರದ ಐವರಿ ಟವರ್‌ ನ 12 ನೇ ಮಹಡಿಯಲ್ಲಿ ಬೆಂಕಿ, ಓರ್ವ ಮಹಿಳೆ ಮೃತ್ಯು

Tuesday, November 28th, 2023
Ivory-tower

ಮಂಗಳೂರು : ನಗರದ ಅತ್ತಾವರದ ಐವರಿ ಟವರ್‌ ಫ್ಲ್ಯಾಟ್ ನಲ್ಲಿ ನಡೆದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ. ಮಂಗಳವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ಬಹುಮಹಡಿ ಫ್ಲ್ಯಾಟ್ ನ 12 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ, ಮನೆಯಲ್ಲಿದ್ದ ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ […]

ಬಲ್ಮಠ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಬೆಂಕಿ ಅವಘಡ

Wednesday, September 30th, 2020
Bankof Baroda

ಮಂಗಳೂರು : ನಗರದ ಬಲ್ಮಠದಲ್ಲಿರುವ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ  ಬೆಂಕಿ‌ ಅನಾಹುತದಲ್ಲಿ ಐದು ಹವಾನಿಯಂತ್ರಣ ಯಂತ್ರ, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ. ಮುಂಜಾನೆ ‌5:30ರಿಂದ 6 ಗಂಟೆಯ‌ ಮಧ್ಯೆ‌ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಕೂಡಲೇ  ಅಗ್ನಿಶಾಮಕ ದಳ ಸ್ಥಳಕ್ಕೆಆಗಮಿಸಿ ಬೆಂಕಿಯನ್ನು ನಂದಿಸಲು ಸಫಲವಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ‌ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ. ದುರಂತದ ಬಗ್ಗೆ ‌ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ‌ […]

ಬೆಂಕಿ ಅವಘಡ : ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮನವಿ

Tuesday, December 17th, 2019
chandan

ಮಡಿಕೇರಿ : ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಗಿಡ ಮರಗಳ ಎಲೆ ಉದುರುವಿಕೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಉದುರುತ್ತಿರುವ ಎಲೆಗಳು ಬೇಗ ಬೆಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಚಳಿಗಾಲದ ಬೀಸುವ ಗಾಳಿಯು ಬೆಂಕಿಯ ಕಿಡಿಯನ್ನು ಬಹಳಷ್ಟು ಸಮಯ ಆರದಂತೆ ಕಾಯ್ದುಕೊಂಡು ಅರಣ್ಯ ಪ್ರದೇಶಕ್ಕೆ ಪಸರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಸಕ್ಕೆ ಬೆಂಕಿ ಹಾಕುವುದು, ಒಲೆಯ ಬೂದಿಯನ್ನು ಬಯಲಿನಲ್ಲಿ ಸುರಿಯುವುದು, ಬೀಡಿ-ಸಿಗರೇಟು ಸೇದಿ ನಿರ್ಲಕ್ಷ್ಯದಿಂದ ಬಿಸಾಡುವುದು, ಖಾಲಿ ಬಾಟಲಿ ಬಿಸಾಡುವುದನ್ನು ಮಾಡಬಾರದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು […]