ಅಡಕೆ ಖರೀದಿಗೆ ಬೆಳೆಗಾರರ ಮನೆಗೆ ಕಾಲಿಟ್ಟ ಕ್ಯಾಂಪ್ಕೋ ಸಂಸ್ಥೆ

Monday, October 12th, 2020
Areca

ಮಂಗಳೂರು : ಆನ್‌ ವೀಲ್‌ ಯೋಜನೆಯಡಿ ಕಾಸರಗೋಡು ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಅಡಕೆಯ ಖರೀದಿಗೆ  ಕ್ಯಾಂಪ್ಕೋ ಸಂಸ್ಥೆ, ಬೆಳೆಗಾರರ ಮನೆಗೆ ಕಾಲಿಟ್ಟಿದೆ. ಪ್ರಾಯೋಗಿಕವಾಗಿ ಪುತ್ತೂರು, ವಿಟ್ಲ ವ್ಯಾಪ್ತಿಯಲ್ಲಿ ಬೆಳೆಗಾರರ ಮನೆಗೆ ತೆರಳಿ ಕ್ಯಾಂಪ್ಕೋ ಅಡಕೆ ಖರೀದಿಸುತ್ತಿದೆ. ಇದಕ್ಕೆ ಬೆಳೆಗಾರರಿಂದ ವ್ಯಾಪಕ ಸ್ಪಂದನೆಯೂ ವ್ಯಕ್ತವಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಕ್ಯಾಂಪ್ಕೋದ ಆನ್‌ ವೀಲ್‌  ಯೋಜನೆಯಿಂದ ಮನೆಗಳಿಗೆ ತೆರಳಿ ಅಡಕೆ ಖರೀದಿಸುವ ಖಾಸಗಿ ಖರೀದಿದಾರರಿಗೆ ಹಾಗೂ ದಲ್ಲಾಳಿಗಳಿಗೆ ತೀವ್ರ ಹೊಡೆತ ಬಿದ್ದಂತಾಗಿದೆ.  ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಹಿಡಿತ ಇನ್ನಷ್ಟುಬಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. […]

ಮಾಲ್ದಾರೆ ಹಂಚಿತಿಟ್ಟು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆಗಾರ ಬಲಿ

Monday, February 10th, 2020
kaadane

ಮಡಿಕೇರಿ : ಕಾಡಾನೆ ದಾಳಿಯಿಂದ ಬೆಳೆಗಾರರೊಬ್ಬರು ದಾರುಣವಾಗಿ ಮೃತ ಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪ ಹಂಚಿತಿಟ್ಟು ಗ್ರಾಮದಲ್ಲಿ ನಡೆದಿದೆ. ಅವರೆಗುಂದ ಗ್ರಾಮದ ನಿವಾಸಿ ಪೆಮ್ಮಯ್ಯ(68) ಎಂಬುವವರೇ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಯಾಗಿದ್ದಾರೆ. ಮಾಲ್ದಾರೆ ಹಂಚಿತಿಟ್ಟು ಮಾರ್ಗದ ರಸ್ತೆ ಬದಿಯಲ್ಲಿ ಮೃತದೇಹ ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಕಾಡಾನೆ ದಾಳಿ ಮಾಡಿರುವುದು ಖಾತ್ರಿಯಾಯಿತು. ಎದೆ, ತಲೆ ಹಾಗೂ ಕಾಲಿನ ಭಾಗಕ್ಕೆ […]

ಅಮ್ಮತ್ತಿಯಲ್ಲಿ ಕಾಡಾನೆ ದಾಳಿ : ಬೆಳೆಗಾರ ಗಂಭೀರ

Tuesday, December 17th, 2019
kaadane

ಮಡಿಕೇರಿ : ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ಮುಂದುವರೆದಿದ್ದು, ಅಮ್ಮತ್ತಿಯಲ್ಲಿ ಕಾಡಾನೆ ದಾಳಿಗೆ ಬೆಳೆಗಾರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಬೆಳೆಗಾರ ಮಾಚಿಮಂಡ ಶಮ್ಮು ಎಂಬುವವರ ಮೇಲೆ ಕಾಡಾನೆ ದಿಡೀರ್ ದಾಳಿ ಮಾಡಿದೆ. ಕಾಲು ಮುರಿತಕ್ಕೊಳಗಾಗಿರುವ ಶಮ್ಮು ಅವರನ್ನು ಆರ್‌ಎಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.