ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಹಲಾಲ್ ಮಾಂಸವನ್ನು, ಇತರ ಧರ್ಮೀಯರಿಗೆ ತಿನ್ನಿಸಿಸುವುದು ಸರಿಯಲ್ಲ

Wednesday, March 30th, 2022
Rahim-Uchil

ಮಂಗಳೂರು : ಹಲಾಲ್ ಎನ್ನುವುದು ಇಸ್ಲಾಂನಲ್ಲಿರುವ ಆಚರಣೆ,  ಅಲ್ಲಾಹನ ಹೆಸರಿನಲ್ಲಿ  ಹಲಾಲ್ ಮಂತ್ರ ಪಠಿಸಿ ಕೊಯ್ಯಲ್ಪಟ್ಟ ಮಾಂಸವನ್ನು ಬಳಸಿ ಭಕ್ಷಣೆ ಮಾಡಬೇಕು ಎನ್ನುವುದು  ಮುಸ್ಲಿಮರಿಗೆ ಇರುವ ನಿಯಮವಾಗಿದೆ, ಹೀಗಿದ್ದ ಮೇಲೂ ಸತ್ಯವನ್ನು ಮರೆಮಾಚಿ ಇತರ ಧರ್ಮೀಯರನು ತಿನ್ನಿಸಿ ಅವರನ್ನು ಧರ್ಮಭ್ರಷ್ಟರನ್ನಾಗಿ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ತಿಳಿಸಿದ್ದಾರೆ. ಹಲಾಲ್ ಯಾವುದೇ ಕಾರಣಕ್ಕೆ ಮುಸ್ಲಿಮೇತರರಿಗೆ ಅನ್ವಯವಾಗುವುದಿಲ್ಲ,  ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವು ಒಪ್ಪಿಗೆ ಇಲ್ಲ ಎಂದಾದಲ್ಲಿ ಸ್ವ ಇಚ್ಛೆಯಿಂದ ಇದನ್ನು ವರ್ಜಿಸಿ ಮುಸ್ಲಿಮೇತರ ವ್ಯಾಪಾರಿಗಳಿಂದ […]

ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ

Friday, March 16th, 2012
Beary Sahitya Parishat New President Attacked

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ನಾಲ್ವರು ಮುಸುಕುಧಾರಿಗಳ ತಂಡ ಗುರುವಾರ ಮಧ್ಯಾಹ್ನ ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ, ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಮಧ್ಯಾಹ್ನ 1.30ರ ವೇಳೆಗೆ ಕಚೇರಿಯ ಚೇಂಬರ್‌ನಲ್ಲಿ ಒಬ್ಬರೇ ಕುಳಿತಿದ್ದ ಸಂದರ್ಭದಲ್ಲಿ ಎರಡು ಮೋಟಾರ್‌ ಸೈಕಲ್‌ಗ‌ಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂದರ್ಭದಲ್ಲಿ ಹೊರಗೆ ಕಚೇರಿ ಸಹಾಯಕ ಸತೀಶ್‌ ರೈ ಮಾತ್ರ ಇದ್ದರು. ಅಪರಿಚಿತರು […]