ವಿ.ಧನಂಜಯ್‌ಕುಮಾರ್ ಆತ್ಮನ ಸದ್ಗತಿಗಾಗಿ 504 ಕಲಶ ಅಭಿಷೇಕ 

Thursday, March 21st, 2019
Namana

ವೇಣೂರು  : ಮೃತರಆತ್ಮನಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಸಕಲ ದೋಷಗಳನ್ನು ಗೆದ್ದ ವೀತರಾಗ ಭಗವಂತನಿಗೆ ಬಸದಿಯಲ್ಲಿಅಭಿಷೇಕ ಮಾಡುತ್ತೇವೆ ಎಂದು ಮೂಡಬಿದ್ರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಬುಧವಾರ ವೇಣೂರಿನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿಇತ್ತೀಚೆಗೆ ಮೃತರಾದ ವಿ.ಧನಂಜಯ್‌ಕುಮಾರ್ ಅವರ ಆತ್ಮಶಾಂತಿಗಾಗಿ ನಡೆದ 504 ಕಲಶ ಅಭಿಷೇಕ ಮಾಡಿದ ಬಳಿಕ ಮಾತನಾಡಿದರು. ವೇಣೂರು ಹಾಗೂ ಮೂಡಬಿದ್ರೆ ಪರಿಸರದ ಸರ್ವತೋಮುಖ ಪ್ರಗತಿಗೆ ಧನಂಜಯಕುಮಾರ್ ಶ್ರಮಿಸಿದ್ದರು. ರಾಷ್ಟ್ರರಾಜಕಾರಣದಲ್ಲಿ ಮಿಂಚಿದ ಅವರು ಎಲ್ಲರಿಗೂ ಆಪದ್ ಬಾಂಧವರಾಗಿದ್ದು ಹೃದಯ ಶ್ರೀಮಂತಿಕೆ […]

ಮಾನಸಿಕ ಮಾಲಿನ್ಯ ದೂರವಾದಾಗ ವಿಶ್ವಶಾಂತಿ, ಲೋಕಕಲ್ಯಾಣ : ಭಟ್ಟಾರಕ ಸ್ವಾಮೀಜಿ

Saturday, March 9th, 2019
Abhisheka

ಧರ್ಮಸ್ಥಳ : ಬಾಹುಬಲಿ ತನ್ನ ಜೀವನದಲ್ಲಿ ಸಾಧಿಸಿ ತೋರಿಸಿದ ಅಹಿಂಸೆ, ತ್ಯಾಗ, ವೈರಾಗ್ಯ ಮೊದಲಾದ ಮೌಲ್ಯಗಳಿಂದ ಶಾಂತಿ, ಸಾಮರಸ್ಯ ಸಾಧ್ಯವಾಗುತ್ತದೆ. ಮಾನಸಿಕ ಮಾಲಿನ್ಯ, ವಿಕಾರಗಳು ದೂರವಾದಾಗ ವಿಶ್ವಶಾಂತಿಯೊಂದಿಗೆ ಲೋಕ ಕಲ್ಯಾಣವಾಗುತ್ತದೆ ಎಂದು ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಶನಿವಾರ ಮೈಸೂರು ಮತ್ತು ಚಾಮರಾಜನಗರ ಜೈನ ಸಮಾಜದ ವತಿಯಿಂದ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅವರು ಮಾತನಾಡಿದರು. ತ್ಯಾಗದ ಸಂಕೇತವಾಗಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ದೇವರು, ಗುರುಗಳು, […]

ವಿವಿಧ ಬಣ್ಣಗಳ ಚಿತ್ತಾರದಿಂದ ಕಣ್ಮನ ಸೆಳೆದ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ

Tuesday, February 19th, 2019
Bahubali

ಧರ್ಮಸ್ಥಳ :  ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮಸ್ತಕಾಭಿಷೇಕದ ಮೂರನೆ ದಿನವಾದ ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು. ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಮಸ್ತಕಾಭಿಷೇಕ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಸ್ತಕಾಭಿಷೇಕ ನಡೆಯಿತು. ಜಲಾಭಿಷೇಕದ ಬಳಿಕ ಬೆಳ್ತಂಗಡಿಯ ಶ್ರೀನಿವಾಸ ಶೆಟ್ಟಿ ಮತ್ತು ಕುಟುಂಬಸ್ಥರು ಇಕ್ಷುರಸದ ಅಭಿಷೇಕ ನಡೆಸಿ ಪುಣ್ಯಭಾಗಿಗಳಾದರು. ವೇಣೂರಿನ ಸುನಂದಾದೇವಿ ಇಂದ್ರ ಕ್ಷೀರಾಭಿಷೇಕ ನಡೆಸಿದರು. […]