ಮಾರುತಿ ಸುಜುಕಿ 3ನೇ ಆವೃತ್ತಿಯ ಸ್ವಿಫ್ಟ್ ಕಾರು ಬಿಡುಗಡೆ

Friday, February 9th, 2018
swift-car

ಮಂಗಳೂರು : ಮಾರುತಿ ಸುಜುಕಿ 3ನೇ ಆವೃತ್ತಿಯ ಸ್ವಿಫ್ಟ್ ಕಾರನ್ನು ನಗರದ ಕುಂಟಿಕಾನ ಜಂಕ್ಷನ್‌ನ ಭಾರತ್‌ ಆಟೋ ಕಾರ್ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು. ಭಾರತ್‌ ಆಟೋ ಕಾರ್ ಮಂಗಳೂರು ಆಡಳಿತ ನಿರ್ದೇಶಕ ಸುಧೀರ್‌ ಎಂ. ಪೈ ಮಾತನಾಡಿ, ಸ್ವಿಫ್ಟ್ ಮೊದಲ ಆವೃತ್ತಿಯನ್ನು 2005 ರಲ್ಲಿ ಬಿಡುಗಡೆ ಮಾಡಿದ್ದೆವು. ಮಂಗಳೂರಿ ನಲ್ಲಿ ಸುಮಾರು 10,000 ಸ್ವಿಫ್ಟ್ ಕಾರು ಚಲಿಸುತ್ತಿವೆ. 3ನೇ ಆವೃತ್ತಿಯ ಸ್ವಿಫ್ಟ್ ಕಾರು ಈಗ ಬಿಡುಗಡೆಗೊಂಡಿದ್ದು, ಈಗಾಗಲೇ 150ಕ್ಕೂ ಹೆಚ್ಚಿನ ಕಾರುಗಳು ಬುಕ್ಕಿಂಗ್‌ ಆಗಿವೆ ಎಂದರು. […]