ಶ್ರೀ ಗಣೇಶನ ವಿಡಂಬನೆ ಮಾಡಿ ಅಥವಾ ಅದರ ಮೂಕಸಮ್ಮತಿ ಸೂಚಿಸಿ ಪಾಪದ ಪಾಲುದಾರರಾಗಬೇಡಿ !

Thursday, September 9th, 2021
Ganesha

ಮಂಗಳೂರು : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಚಿತ್ರಕಾರರು ಮತ್ತು ಮೂರ್ತಿಕಾರರು ತಮ್ಮ ಕಲೆಯ ಮೂಲಕ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಬಿಸ್ಕಿಟ್, ಬೆಣ್ಣೆ, ಕ್ಯಾಡ್‌ಬರಿ, ಜೆಮ್ಸ್, ಚಾಕಲೇಟ್, ಚಿಕ್ಕಿ, ಕುರ್‌ಕುರೆ, ಮಸಾಲೆ, ಹೂವು, ಮಣ್ಣಿನ ಹಣತೆಗಳು, ಚಾಕ್, ಪೆನ್ಸಿಲ್, ಪ್ಲಾಸ್ಟಿಕ್ ತಟ್ಟೆ, ಇತ್ಯಾದಿ ವಿವಿಧ ವಸ್ತುಗಳಿಂದ ಮಾಡಿದ ಗಣೇಶಮೂರ್ತಿ ಹಾಗೂ ಬಾಹುಬಲಿ ಚಲನಚಿತ್ರದ ನಾಯಕ ಶಿವಲಿಂಗವನ್ನು ಹೆಗಲ ಮೇಲಿಟ್ಟುಕೊಂಡು ನಿಂತಿರುವ, ಕ್ರಿಕೇಟ್ ಆಡುವ, ನರ್ತಿಸುವ, ಇತ್ಯಾದಿ ಆಕಾರಗಳ ಗಣೇಶಮೂರ್ತಿಗಳಿಂದಾಗಿ […]

ಮಂಗಳೂರು ದಸರಾಕ್ಕೆ ನವದುರ್ಗೆಯರು ಹಾಗೂ ಶಾರದಾಮಾತೆಯ ಮೂರ್ತಿಗಳನ್ನು ತಯಾರು ಮಾಡುವವರು ಯಾರು ಗೊತ್ತಾ ?

Wednesday, October 28th, 2020
Kubera

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಪೂಜಿಸಲ್ಪಡುವ 12 ಮೂರ್ತಿಗಳನ್ನು ತಯಾರು ಮಾಡುವ ಕಲೆಗಾರರ ಬಗ್ಗೆ ನೀವು ಕೇಳಿರಲಿಕ್ಕಿಲ್ಲ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾಮಾತೆಯ ಮಣ್ಣಿನ ಗಳನ್ನು ತಯಾರಿಸುವವರು ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನಗಳಲ್ಲಿ ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಅದೇ ತಂಡದಲ್ಲಿ ಕಲಾವಿದನಾಗಿ ತನ್ನ 13 ವರ್ಷದ ಪ್ರಾಯದಲ್ಲೇ ಕೆಲಸ ಆರಂಭಿಸಿದ್ದ ಅದ್ಭುತ ಕಲಾವಿದ ಶಿವಮೊಗ್ಗದ ಕುಬೇರ ಹಾಗೂ […]