ಒತ್ತಡಗಳ ಮಧ್ಯೆ ಪತ್ರಿಕೋದ್ಯಮ ವೌಲ್ಯ ಕಾಪಾಡುವುದೇ ಸವಾಲು : ಮೋಹನ್ ಆಳ್ವ

Monday, November 18th, 2019
mohan-alva

ಮಂಗಳೂರು : ಆಧುನಿಕ ಜೀವನದಲ್ಲಿ ವೃತ್ತಿ ಬದುಕಿನ ಒತ್ತಡಗಳ ಮಧ್ತೆ ಪತ್ರಿಕಾರಂಗದ ವೌಲ್ಯಗಳನ್ನು ಕಾಪಾಡುವುದೇ ಮಾಧ್ಯಮ, ಪ್ರತಕರ್ತನ ನಿಜವಾದ ಸವಾಲು ಎಂದು ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ದ.ಕ. ಜಿಲ್ಲಾ ಕಾರ್ಯನಿತರ ಪತ್ರಕತ್ರರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನೂರು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಬೆಳವಣಿಗೆ ವಿಸ್ತಾರವಾಗಿದೆ. ಪ್ರಸಕ್ತ ಕಾಲದಲ್ಲಿ ಹೂಡಿಕೆ ಸ್ಪರ್ಧೆಯ ನಡುವೆ ಮಾಧ್ಯಮಗಳ […]

ಆಳ್ವಾಸ್ ಸಿನಿಸಿರಿ ಉದ್ಘಾಟನೆ

Friday, November 16th, 2018
ingrution-alwas

ಮೂಡಬಿದಿರಿ: ನುಡಿಸಿರಿಯು ಹಲವಾರು ರೀತಿಯ ಸಿರಿಗಳಿಂದ ಒಳಗೊಂಡು ಸಾಂಸ್ಕೃತಿ ಸಾಹಿತ್ಯದ ಹಬ್ಬವಾಗಿ ರೂಪುಗೊಂಡಿದೆ ಆದರೆ ಬಹುಕಲೆಯ ಸಿರಿಯಲ್ಲಿ ಚಲನಚಿತ್ರದ ಕೊರತೆ ಇದ್ದು ಅದನ್ನು ನೀಗಿಸಲು ಚಲನಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲದ ಕಾರಣ, ಸಿನೆಮಾ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಯುವಜನತೆ ಹೊಂದಿಕೊಂಡಿರುವ ಸಾಮಾಜಿಕ ಜಾಲತಾಣವನ್ನು, ಸಾಂಸ್ಕೃತಿಕ ಜಾಲತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ ಆ ನಿಟ್ಟಿನಲ್ಲಿ ಕಲಾತ್ಮಕ ಸಿನಿಮಾಗಳಿಗೆ ಯಾವುದೇ ರೀತಿಯ ಮೋಸವಾಗಬಾರದು ಎಂದು ಈ ರೀತಿ ಸಿನಿಮಾ ಉತ್ಸವವನ್ನು ನಡೆಸಬೇಕು ಎಂದು ಕರ್ನಾಟಕ […]

ಹಲವು ಸಂಸ್ಸೃತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್

Friday, December 1st, 2017
Nudisiri17

ಮೂಡುಬಿದಿರೆ : ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು. ‘ಕರ್ನಾಟಕ:ಬಹುತ್ವದ ನೆಲೆಗಳು’ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎನ್. ರಾಮಚಂದ್ರನ್, “ಪ್ಲೂರಲಿಜ಼ಮ್ ಅಥವಾ ಬಹುತ್ವ” ದ ಕಲ್ಪನೆಯು ಇಂದಿಗೆ ಪ್ರಸ್ತುತವಾದುದು; ಇದು ಅಸ್ಮಿತತೆಯ ರಾಜಕಾರಣ/ ಐಡೆಂಟಿಟಿ ಪಾಲಿಟಿಕ್ಸ್ ಆಗಿ ಬದಲಾಗುತ್ತಿದೆ. ಹಲವು ಸಂಸ್ಕೃತಿಗಳ ಸಹಬಾಳ್ವೆ ಹಾಗು ಬೆಳವಣಿಗೆಯಿಂದ ಬಹುತ್ವ ಸಾಧಿಸಬೇಕಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದರಲ್ಲೂ ಬಹುತ್ವವನ್ನು ಕಾಣಬಹುದು. ಬಹುತ್ವದ ಜೊತೆಗೆ ಬರುವ […]

ಕೃಷಿಯನ್ನು ಕಡೆಗಣಿಸಿದರೆ ಈ ನಾಡು ಅಭಿವೃದ್ಧಿಯಾಗದು: ಮೋಹನ್ ಆಳ್ವ

Friday, November 18th, 2016
alvas-krishisiri

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಕೇವಲ ಸಾಹಿತ್ಯ ಸಮ್ಮೇಳನವಷ್ಟೇ ಅಲ್ಲ. ನಾಡಿಗೇ ಅನ್ನದಾತನಾದ ಕೃಷಿಕನಿಗೆ ಪ್ರಾಮುಖ್ಯತೆ ನೀಡುವ ಒಂದು ಉತ್ಸವವೂ ಹೌದು. ಈ ಹಿನ್ನೆಲೆಯಲ್ಲಿ ನುಡಿಸಿರಿ ಭಾಗವಾಗಿ ಆಳ್ವಾಸ್ ಕೃಷಿಸಿರಿಯನ್ನು ಇಂದು ಉದ್ಘಾಟಿಸಲಾಯಿತು. ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿತವಾದ ಶಿರ್ತಾಡಿ ಧರ್ಮಸಾಮ್ರಾಜ್ಯ ಕೃಷಿ ಆವರಣದಲ್ಲಿ ಮಿಜಾರುಗುತ್ತು ಆನಂದ ಆಳ್ವ ಅವರು ಕೃಷಿಸಿರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ‘ಕೃಷಿಯನ್ನು ಕಡೆಗಣಿಸಿದರೆ ಈ ನಾಡು ಅಭಿವೃದ್ಧಿಯಾಗದು. ಕರ್ನಾಟಕದಲ್ಲಿ ಕೃಷಿ ಕ್ಷೇತ್ರದಲ್ಲಿ […]

ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷರಾಗಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ

Thursday, November 5th, 2015
Venkatachala

ಮೂಡುಬಿದಿರೆ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು […]

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಗೆ ಚಾಲನೆ

Friday, November 16th, 2012
Alvaas Nudisiri

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಸುಂದರ ಆನಂದ್ ಆಳ್ವ ಕ್ಯಾಂಪಸ್ ನಲ್ಲಿ ಇಂದು ಪ್ರಾರಂಭವಾದ 9 ನೇ ವರ್ಷದ ರಾಷ್ಟ್ರೀಯ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2012ಕ್ಕೆ 12 ಅಡಿ ಎತ್ತರದ ನಾಟ್ಯ ಗಣಪತಿಯ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಮ್ಮೇಳನವು ಇದೇ ತಿಂಗಳ 16 ರಿಂದ 19 ರ ವರೆಗೆ ನಡೆಯಲಿದೆ. ಹಿರಿಯ ಸಾಹಿತಿ, ಚಿಂತಕ ಡಾ.ಯು.ಆರ್ ಅನಂತಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಾತೃಭಾಷೆ […]