ರನ್ ವೇಯಿಂದ ವಿಮಾನ ಜಾರಿದ ಪ್ರಕರಣ ಪೈಲೆಟ್ ಲೈಸೆನ್ಸ್ ರದ್ದು

Wednesday, July 24th, 2019
Air India

ಮಂಗಳೂರು : ಇತ್ತೀಚಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರನ್ ವೇಯಿಂದ ಜಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ ಎಸಗಿದ ವಿಮಾನದ ಪೈಲೆಟ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ. ಜೂನ್‌ 30ರಂದು ಸಂಜೆ ದುಬೈಯಿಂದ ಬಂದ ಏರ್‌ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ರನ್ ವೇಯಿಂದ ಜಾರಿ ಚರಂಡಿ ದಾಟಿ ನಿಂತಿತ್ತು. ವಿಮಾನದಲ್ಲಿ […]

ಮಂಗಳೂರು : ಲ್ಯಾಂಡ್ ಆಗುತ್ತಿದ್ದ ವೇಳೆ ರನ್ ವೇ ಬಿಟ್ಟ ಏರ್ ಇಂಡಿಯಾ ವಿಮಾನ, 183 ಪ್ರಯಾಣಿಕರು ಸುಸ್ತು

Sunday, June 30th, 2019
Air India

ಮಂಗಳೂರು: ಭಾನುವಾರ ಸಂಜೆ 5.30 ಕ್ಕೆ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ರನ್ ವೇ ಬಿಟ್ಟು ಮಡ್ ಫೀಲ್ಡ್ ನಲ್ಲಿ ಸಾಗಿ 183 ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದ ಪ್ರಸಂಗ ನಡೆಯಿತು. ದುಬೈನಿಂದ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನ ರನ್ ವೇ ನಲ್ಲಿ ಸಾಗ ಬೇಕಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡು ಮಡ್ ಫೀಲ್ಡ್ ನಲ್ಲಿ ಅತೀ ವೇಗದಲ್ಲಿ ಸಾಗಿ ಮಳೆ ನೀರಿನ ಕಂದಕ ದಾಟಿ ನಿಂತಿದ್ದರಿಂದ ಕೆಂಜಾರು ಗುಡ್ಡ ಇಳಿದು ಸಂಭವಿಸಲಿದ್ದ ದೊಡ್ಡ ಅನಾಹುತ ತಪ್ಪಿತು. ಇಲ್ಲವಾದಲ್ಲಿ2010ರ ರಲ್ಲಿ […]

ಮಹಾಮಳೆಗೆ‌ ವಿಮಾನ ನಿಲ್ದಾಣ ದ ರನ್ ವೇ ತಡೆಗೋಡೆ ಕುಸಿತ – ದುರಸ್ತಿ

Wednesday, June 6th, 2018
collapse

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯ ತಡೆಗೋಡೆ‌ ಕುಸಿದಿದೆ. ಇತ್ತೀಚೆಗೆ ಸುರಿದ ಮಹಾಮಳೆಗೆ‌ ಮಂಗಳೂರು ವಿಮಾನ ನಿಲ್ದಾಣದ ರನ್ ವೇಯ ತಡೆಗೋಡೆ‌ ಕುಸಿತವಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವಾರ ಭಾರಿ ಮಳೆಯ ವೇಳೆ ರನ್ ವೇ ಬಳಿ ಇದ್ದ ತಡೆಗೋಡೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿತ್ತು. ಆ ಸಂದರ್ಭದಲ್ಲಿ ಅದನ್ನು ಸರಿಪಡಿಸಲಾಗಿತ್ತು.