ಆರ್ಎಸ್ಎಸ್ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ: ರಾಹುಲ್ ಗಾಂಧಿ
Thursday, September 29th, 2016ಹೊಸದಿಲ್ಲಿ : ದೇಶವನ್ನು ವಿಭಜಿಸುವ ಆರ್ಎಸ್ಎಸ್ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆರ್ಎಸ್ಎಸ್ ವಿರುದ್ಧದ ತನ್ನ ಹೇಳಿಕೆಗಾಗಿ ದಾಖಲಿಸಲ್ಪಟ್ಟಿರುವ ಮಾನನಷ್ಟ ದಾವೆಯ ಸಂಬಂಧ ಇಂದು ಅಸ್ಸಾಂ ಕೋರ್ಟಿನಲ್ಲಿ ಹಾಜರಾದ ಬಳಿಕ ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. “ನಾನು ಬಡವರು, ರೈತರು ಮತ್ತು ನಿರುದ್ಯೋಗಿಗಳ ಪರವಾಗಿ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ ಈ ಬಗೆಯ ಕೇಸುಗಳನ್ನು ಹೂಡಲಾಗುತ್ತಿದೆ; ಆದರೆ ನಾನು ಈ ರೀತಿಯ ಕೇಸುಗಳಿಂದ ಹೆದರುವವನಲ್ಲ; ನನ್ನ […]