ಶಾಲಾಮಕ್ಕಳಲ್ಲಿ ಹರಿಕಥೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಗ‌ಳು ನಡೆಯಬೇಕಿದೆ: ಪ್ರಮೋದ್‌ ಮಧ್ವರಾಜ್‌

Monday, August 1st, 2016
Pramod-Madwaraj

ಉಡುಪಿ: ಶಾಲಾಮಕ್ಕಳಲ್ಲಿ ಹರಿಕಥೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಗ‌ಳು ನಡೆಯಬೇಕಿದೆ. ಹರಿಕಥೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಶಾಲೆಗಳಲ್ಲಿ ಹರಿಕಥೆಗಳನ್ನು ಆಯೋಜಿಸಲು ಅಗತ್ಯ ಸಹಾಯವನ್ನು ಸರಕಾರದಿಂದ ಕೊಡಿಸಲು ಪ್ರಯತ್ನಿಸುವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಮಲ್ಪೆ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಮಾಪನಗೊಂಡ ಹರಿಕಥಾ ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಿಕಥೆಯು ತನ್ನ ಸಮೃದ್ಧವಾದ ಸಾಹಿತ್ಯ, ನೀತಿ ಕಥೆ, ನಗೆ ಹನಿಗಳಿಂದ ಕೂಡಿರುವುದರಿಂದ ಎಲ್ಲ ವಯೋಮಾನದವರನ್ನು ಆಕರ್ಷಿಸುವ […]

ಬದಿಯಡ್ಕದಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮ- ಕಯ್ಯಾರ ಕಾವ್ಯ ವಿಶೇಷೋಪನ್ಯಾಸ ಹಾಗೂ ಕಾವ್ಯಗಾಯನ

Tuesday, February 16th, 2016
Kyyara

ಬದಿಯಡ್ಕ: ಕವಿ ಕಯ್ಯಾರರಿಗೆ ಬದುಕು ಮತ್ತು ಕಾವ್ಯ ಬೇರೆಯಾಗಿರಲಿಲ್ಲ.ಅವರ ಕೃತಿಗಳೆಲ್ಲವು ಜೀವನಾನುಭವಗಳ ತಿರುಳುಗಳಾಗಿದ್ದವು.ಇವು ಕಯ್ಯಾರರ ಜೀವನ್ಮುಖಿ ಚಿಂತನೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆಯೆಂದು ಅಧ್ಯಾಪಿಕೆ,ಕವಯಿತ್ರಿ ದಿವ್ಯಗಂಗಾ ಪಿ.ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಸರಗೋಡಿನ ಅಪೂವ ಕಲಾವಿದರು ಇದರ ಸಹಯೋಗದಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸಹಕಾರದಲ್ಲಿ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದ್ದ ಮೂರನೇ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ಕಯ್ಯಾರರ ಕಾವ್ಯಗಳಲ್ಲಿ ಜೀವನ ದೃಷ್ಟಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಯ್ಯಾರರ […]