ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ, ರೌಡಿಶೀಟರ್‌ ಬಂಧನ

Thursday, October 26th, 2017
abdul muneer

ಮಂಗಳೂರು: ಸಿಸಿಬಿ ಪೊಲೀಸರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರೌಡಿಶೀಟರ್‌ನನ್ನು ಬಂಧಿಸಿದ್ದಾರೆ. ಬಜಪೆಯ ಶಾಂತಿಗುಡ್ಡೆಯ ನಿವಾಸಿ ಅಬ್ದುಲ್ ಮುನೀರ್ (22) ಬಂಧಿತ ಆರೋಪಿ. ಈತ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಎನ್ನಲಾಗಿದೆ. 22-10-2017 ರಂದು ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಯ ಭೇಟಿಯ ಹಿನ್ನೆಲೆ ಮಂಗಳೂರು ನಗರ ಸಂಚಾರ ಉತ್ತರ ಉಪವಿಭಾಗದ ಪೊಲೀಸ್ ನಿರೀಕ್ಷಕ ಮಂಜುನಾಥ್‌ […]

ಬಜಪೆ: ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ

Wednesday, October 25th, 2017
bajpe gram panchayath

ಮಂಗಳೂರು : ಬಜಪೆ ಗ್ರಾ.ಪಂಚಾಯತ್‌, ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿದೆ. ಸರಕಾರದ ಸುತ್ತೋಲೆ ಯಂತೆ ಈ ಹೆಜ್ಜೆಯನ್ನಿಟ್ಟ ಪ್ರಥಮ ಗ್ರಾಮ ಪಂಚಾಯತ್‌ ಇದಾಗಿದ್ದು, ಆಡಳಿತದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ. ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್‌ ರಾಜ್ಯ ಕಾಯ್ದೆ (ಸಭಾ ನಡಾವಳಿ, ಕಾರ್ಯವಿಧಾನ) 1993-94ರ ಪ್ರಕಾರ ಸಭೆಯನ್ನು ಯಾವ ರೀತಿ ನಡೆಸಬೇಕು. ನಡಾವಳಿ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸಭಾ ಕಾರ್ಯಕಲಾಪ, ಅಡ್ಡಪ್ರಶ್ನೆ ಬಗ್ಗೆ 1994ರಲ್ಲಿ […]