ದಿಢೀರ್ ಪ್ರತಿಭಟನೆ: ಆಸ್ಪತ್ರೆ ವೈದ್ಯನ ಬಂಧನ
Saturday, February 8th, 2014ಬಂಟ್ವಾಳ: ಬಿ.ಸಿ.ರೋಡ್ನ ಖಾಸಗಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಚಂಚಲಾಕ್ಷಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾವಿರಾರು ಸಾರ್ವಜನಿಕರು ಶುಕ್ರವಾರ ಸಂಜೆ ಆಸ್ಪತ್ರೆ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು. ಮುಂದೆ ನಡೆಯಬಹುದಾದ ಅಪಾಯವನ್ನು ತಪ್ಪಿಸಲು ಪೊಲೀಸರು ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ. ಆಕ್ರೋಶಿತ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ವೈದ್ಯನ ಬಂಧನಕ್ಕೆ ಬಂಟ್ವಾಳ ನಗರ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ಹಂತದಲ್ಲಿ ಆಸ್ಪತ್ರೆ ವಠಾರದೊಳಗೆ ಉದ್ವಿಗ್ನ […]