ಕರಾವಳಿಯಲ್ಲಿ ಚುರುಕುಗೊಂಡ ಮೀನುಗಾರಿಕೆ, ಬೆಲೆ ಕಡಿಮೆ ಆಗುವ ಸಾಧ್ಯತೆ
Saturday, August 5th, 2017ಮಂಗಳೂರು: ಎರಡು ತಿಂಗಳ ರಜೆಯ ಬಳಿಕ ಮಂಗಳೂರಿನಲ್ಲಿ ಮತ್ಸ್ಯ ಬೇಟೆ ಮತ್ತೆ ಶುರುವಾಗಿದೆ. ಮೀನು ಪ್ರಿಯರ ಬೇಡಿಕೆಯನ್ನು ಪೂರೈಸಲು ಮೀನುಗಾರರು ಉತ್ಸಾಹದಿಂದಲೇ ಸಮುದ್ರಕ್ಕೆ ಇಳಿದಿದ್ದಾರೆ. ಆಗಸ್ಟ್ 1 ರಿಂದ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಶುರುವಾಗಿದೆ. ಎರಡು ತಿಂಗಳು ಸ್ಥಳೀಯ ಮೀನು ಸಿಗದೇ, ದುಬಾರಿ ಬೆಲೆ ತೆತ್ತು, ಬೇರೆ ರಾಜ್ಯದ ಮೀನುಗಳನ್ನು ಖರೀದಿಸುತ್ತಿದ್ದ ಜನರು, ಇದೀಗ ಸ್ಪಲ್ಪ ನಿರಾಳರಾಗಿದ್ದಾರೆ. ಇನ್ನಾದರೂ ಮೀನಿನ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಕಡಲು ಉದ್ವಿಗ್ನವಾಗುವುದು ಸಹಜ. ಇದರ ಜತೆಗೆ ಮೀನಿನ […]