ಮಂಗಳಾದೇವಿಯಲ್ಲಿ ವೈಭವದ ರಥೋತ್ಸವದೊಂದಿಗೆ ದಸರಾ ಉತ್ಸವದ ಸಮಾಪನೆ

Thursday, October 25th, 2012
Mangaladevi Temple

ಮಂಗಳೂರು: ಮಂಗಳೂರಿನ ಪ್ರಸಿದ್ಧ ದೇವಾಲಯವಾದ ಬೋಳಾರದ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ ವಿಶಿಷ್ಟವಾಗಿ ನಡೆಯುತ್ತಿದ್ದು ಅಸಂಖ್ಯಾತ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯದಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ನವದುರ್ಗೆಗೆ ಮಧ್ಯಾಹ್ನ ಕಲ್ಪೋಕ್ತ ಪೂಜೆಗಳು ನಡೆಯುತ್ತವೆ. ಮಂಗಳಾದೇವಿಯಲ್ಲಿ ದೇವಿಯನ್ನು ಒಂಭತ್ತು ದಿನಗಳಲ್ಲಿ ಒಂಭತ್ತು ರೀತಿಗಳಲ್ಲಿ ಅಲಂಕರಿಸುವ ಸಂಪ್ರದಾಯವಿದ್ದು, ಪ್ರತಿದಿನ ದಿನಕ್ಕೊಂದರಂತೆ ದೇವಿಯರ ಪೂಜೆ ನಡೆಯುತ್ತದೆ. ದುರ್ಗಾದೇವಿ, ಆರ್ಯದೇವಿ, ಭಗವತಿ, ಕೌಮಾರಿ, ಅಂಬಿಕೆ, ಮಹಿಷಮರ್ಧಿ ನಿ, ಚಂಡಿಕೆ, ಸರಸ್ವತಿ, ನಾಗೇಶ್ವರಿ ಹೀಗೆ ವಿವಿಧ […]