ಪೇಜಾವರ ಸ್ವಾಮೀಜಿಯ ಪಾದಪೂಜೆ ಮಾಡಿದ ಉಮಾಭಾರತಿ

Monday, July 10th, 2017
UmaBharathi

ಉಡುಪಿ :ಕೇಂದ್ರ ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವೆ ಉಮಾಭಾರತಿ ರವಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು. ಸಚಿವೆ ಉಮಾ ಭಾರತಿ ಪೇಜಾವರ ಸ್ವಾಮೀಜಿ ಜೊತೆ ಬೆಳಗ್ಗೆ ಮಠಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಗುರು ಪೂರ್ಣಿಮೆಯ ಅಂಗ ವಾಗಿ ಬಡಗುಮಾಳಿಗೆಯಲ್ಲಿ ಸಚಿವೆ ನೆಲದಲ್ಲಿ ಕೂತು ಗುರು ಪೇಜಾವರ ಸ್ವಾಮೀಜಿಯ ಪಾದವನ್ನು ತೊಳೆದು ಪೂಜೆ ನೆರವೇರಿಸಿ ಆರತಿ ಬೆಳಗಿದರು. […]