ಧರ್ಮಸ್ಥಳದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಹಲವು ಹೊಸ ಯೋಜನೆಗಳು
Friday, October 24th, 2014ಧರ್ಮಸ್ಥಳ : ಬೆಂಗಳೂರಿನಲ್ಲಿ 350 ಹಾಸಿಗೆ ಸಾಮಥ್ರ್ಯದ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿದ್ದು ಮುಂದಿನ ವರ್ಷ ಪೂರ್ಣ ಪ್ರಮಾಣದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸೇವೆಗೆ ಸಜ್ಜಾಗಲಿವೆ. ಧರ್ಮಸ್ಥಳದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ 520 ಕೊಠಡಿಗಳುಳ್ಳ ಹೊಸ ವಸತಿ ಛತ್ರ ನಿರ್ಮಾಣದ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ನಡೆದ ಪಟ್ಟಾಭಿಷೇಕದ 47ನೇ ವರ್ಧಂತ್ಯತ್ಸವ ಸಮಾರಂಭದಲ್ಲಿ ಅವರು […]