ಮೂಲಸೌಕರ್ಯ ಹೊಂದಿದ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆ

Wednesday, November 1st, 2017
smart city

ಮಂಗಳೂರು: ವಿಶ್ವದಲ್ಲಿ ವಾಸಸ್ಥಾನಕ್ಕೆ ಯೋಗ್ಯ ಸ್ಥಳ, ಉತ್ತಮ ಮೂಲಸೌಕರ್ಯ ಹೊಂದಿದ ಸ್ಥಳ ಎಂಬೆಲ್ಲಾ ಹಿರಿಮೆಯನ್ನು ಪಡೆದುಕೊಂಡ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಒಂದು ಸವಾಲಾಗಿ ಪರಿಣಮಿಸಿದೆ. ಮಂಗಳೂರು ಸ್ಮಾರ್ಟ್‌ ಸಿಟಿ ಆಗಿ ಆಯ್ಕೆಯಾದ ಬೆನ್ನಲ್ಲೇ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆ ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆಯು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಂಗಳೂರು ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಅದರಲ್ಲಿ ದೂರದ ಊರುಗಳಿಂದ ನಗರಕ್ಕೆ ಬರುವ […]

ಮಂಗಳೂರು: ಯೋಜನೆಗಳ ಅನುಷ್ಠಾನ ವಿಳಂಬ, ಸಮಸ್ಯೆಗಳೂ ಉದ್ಭವ

Monday, October 9th, 2017
emmekere

ಮಂಗಳೂರು: ಮಂಗಳೂರು ನಗರ ಹಾಗೂ ದ.ಕ. ಜಿಲ್ಲೆಯಲ್ಲಿ ಮಂಜೂರಾಗಿರುವ, ಅನುದಾನಗಳು ಬಿಡುಗಡೆಯಾಗಿರುವ ಹಲವು ಯೋಜನೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪ್ರಸ್ತಾವನೆ ಸಲ್ಲಿಸಿರುವ ಯೋಜನೆಗಳು ಅಂಗೀಕಾರದ ಹಂತಕ್ಕೆ ತಲುಪಿಲ್ಲ. ಯೋಜನೆಗಳ ಅನುಷ್ಠಾನ ವಿಳಂಬವಾದಂತೆ ವೆಚ್ಚದಲ್ಲೂ ಏರಿಕೆಯಾಗುತ್ತಿದೆ, ಸಮಸ್ಯೆಗಳೂ ಉದ್ಭವವಾಗುತ್ತಿವೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳೂರು ನಗರದ ಎಮ್ಮೆಕೆರೆಯಲ್ಲಿ 2 ಎಕ್ರೆ ಜಮೀನಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ 5 ಕೋ.ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಸಿದ್ಧವಾಗಿ ವರ್ಷಗಳೇ ಕಳೆದಿವೆ. ಮೊದಲ ಹಂತದ ಅನುದಾನವೂ ಬಿಡುಗಡೆಯಾಗಿದೆ, […]