ಕಾಸರಗೋಡಿನಲ್ಲಿ ಆಫ್ರಿಕನ್ ಹುಳಗಳು ಪತ್ತೆ

Saturday, August 17th, 2019
Afrecan

ಕಾಸರಗೋಡು : ಮೀಂಜ, ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೃಹತ್‌ ಗಾತ್ರದ ಆಫ್ರಿಕನ್‌ ಬಸವನ ಹುಳುಗಳು  ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನಲ್ಲಿ ನಡೆದ ತಿಳಿವಳಿಕೆ ಶಿಬಿರದಲ್ಲಿ ಬಸವನ ಹುಳುಗಳ ಉಪಟಳವನ್ನು ತಪ್ಪಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇರಾ ಗಾಂವ್‌, ಮೇರಾ ಗೌರವ್‌ (ನನ್ನ ಊರು, ನನ್ನ ಹೆಮ್ಮೆ) ಯೋಜನೆಯಡಿ ಐಸಿಎಆರ್‌- ಸಿಪಿಸಿಆರ್‌ಐ ವಿಜ್ಞಾನಿಗಳ ತಂಡವು ಸ್ಥಳೀಯ ಕೃಷಿಕರು ಸಹಿತ ಜನಸಾಮಾನ್ಯರಿಗೆ ಕೃಷಿಗೆ ರೋಗ ಬಾಧೆಯನ್ನು ತಡೆಯುವ ನಿಟ್ಟಿನ ಮಾಹಿತಿಯನ್ನು ನೀಡಿತು. ಆಫ್ರಿಕನ್‌ ಬಸವನ ಹುಳುಗಳು […]

ಬಂಧಿಸಿದ ಆರೋಪಿಗಳ ಹಿಂದಿದೆ ವಂಚನಾ ಜಾಲ : ಡಾ|ಪಿ.ಎಸ್.ಹರ್ಷ

Saturday, August 17th, 2019
pumpweel

ಮಂಗಳೂರು : ನ್ಯಾಶನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಎಂದು ಬೋರ್ಡ್ ಹಾಕಿ ಕೇಂದ್ರ ಸರಕಾರದ ಲಾಂಛನ ಉಪಯೋಗಿಸಿ, ದರೋಡೆಗೆ ಸಂಚು ನಡೆಸುತ್ತಿದ್ದ 8 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಪಂಪವೆಲ್ ಬಳಿ ಬಂಧಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, “ಅಂತರಾಜ್ಯ ವಂಚನಾ ಜಾಲ ಇದಾಗಿದ್ದು , ನಿಖರ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ವಶಪಡಿಸಿ ಅವರಿಂದ ಸುಮಾರು 20 ಲಕ್ಷ […]

ಮಂಗಳೂರು : ಉಗ್ರರ ದಾಳಿ ಸಾಧ್ಯತೆ ಎಚ್ಚರಿಕೆಯಿಂದಾಗಿ ನಗರದಾದ್ಯಂತ ತೀವ್ರ ಕಟ್ಟೆಚ್ಚರ ಘೋಷಣೆ

Saturday, August 17th, 2019
Kadri-police

ಮಂಗಳೂರು : ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಕರಾವಳಿ ನಗರ ಮಂಗಳೂರಿನಲ್ಲೂ ಉಗ್ರರ ದಾಳಿ ಸಾಧ್ಯತೆ ಎಚ್ಚರಿಕೆಯಿಂದಾಗಿ ನಗರದಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ಕಡಲ ತಡಿಯ ಮಂಗಳೂರಿನಲ್ಲಿ ಕೂಡ ಉಗ್ರರ ದಾಳಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನ ಪ್ರಮುಖ ಸ್ಥಳ, ಇನ್ಫೋಸಿಸ್, ಆಸ್ಪತ್ರೆ, ಸೇರಿದಂತೆ ವಿವಿಧೆಡೆ ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಮಂಗಳೂರಿನ ಕದ್ರಿ […]

ಮನ್ಸುಖ್‌ ಮಾಂಡವೀಯಾ : ನವಮಂಗಳೂರು ಬಂದರಿನ ಅಭಿವೃದ್ಧಿಗೆ ಸರ್ವ ರೀತಿಯ ಬೆಂಬಲ

Saturday, August 17th, 2019
panambur

ಪಣಂಬೂರು : ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರಿನ ಅಭಿವೃದ್ಧಿಗೆ ಸರ್ವ ರೀತಿಯ ಬೆಂಬಲ ನೀಡಲಾಗುವುದು ಎಂದು ಕೇಂದ್ರ ನೌಕಾಯಾನ, ರಸಗೊಬ್ಬರ ರಾಜ್ಯ ಸಚಿವ ಮನ್ಸುಖ್‌ ಮಾಂಡವೀಯಾ ಹೇಳಿದರು. ಬಂದರಿನ ಅಧಿಕಾರಿಗಳು, ಬಂದರು ಮೂಲಕ ವ್ಯವಹಾರ ನಡೆಸುತ್ತಿರುವ ಪ್ರಮುಖ ಉದ್ಯಮ ಪ್ರತಿನಿಧಿಗಳು, ಸ್ಟೀವಡೋರಿಂಗ್‌ ಸದಸ್ಯರು, ಏಜೆಂಟರು, ಸರಕು ಸಾಗಣೆದಾರರು ಮತ್ತು ಪ್ರಮುಖ ಸಂಬಂಧಿತ ಸರಕಾರಿ ಸಂಸ್ಥೆಗಳಾದ ಕಸ್ಟಮ್ಸ್‌, ವಲಸೆ ಇಲಾಖೆಗಳ ಅಧಿಕಾರಿಗಳ ಜತೆಗೆ ಶುಕ್ರವಾರ ನವಮಂಗಳೂರು ಬಂದರಿನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬಂದರು ಮೂಲಕ […]

ಪಚ್ಚನಾಡಿ : ಬಾವಿ, ಬೋರ್‌ವೆಲ್ ಕಲುಷಿತಗೊಳಿಸಿದ ತ್ಯಾಜ್ಯ ನೀರು

Saturday, August 17th, 2019
mandaara

ಮಂಗಳೂರು : ಪಚ್ಚನಾಡಿ ತ್ಯಾಜ್ಯರಾಶಿಯ ಗುಡ್ಡ ಜರಿದು ಮಂದಾರ ವ್ಯಾಪ್ತಿಯಲ್ಲಿ ಮನೆ-ಮರಗಳನ್ನು ಆಹುತಿ ಪಡೆದ ಘಟನೆ ಜೀವಂತವಾಗಿರುವಾಗಲೇ, ಇದೀಗ ಆ ಪರಿಸರದ ಬಾವಿ-ತೋಡುಗಳೆಲ್ಲ ಕೊಳಚೆ ನೀರಿನಿಂದ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತ್ಯಾಜ್ಯರಾಶಿಯಿಂದ ಮೊದಲೇ ಸಂತ್ರಸ್ತ ರಾಗಿರುವ ಇಲ್ಲಿನ ಮನೆಮಂದಿ, ಮುಂದೆ ಗಲೀಜು ನೀರಿನಿಂದ ಇನ್ನೊಂದು ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಇಲ್ಲಿಂದ ಹರಿಯುವ ತ್ಯಾಜ್ಯ ನೀರು ಮಂದಾರದ ಸುತ್ತಮುತ್ತಲಿನ ಹಲವು ಬಾವಿಗಳಿಗೆ ಸೇರುತ್ತಿದೆ. ಕೆಲವು ಬಾವಿಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಯುತ್ತಿದ್ದರೆ, ಇನ್ನೂ ಕೆಲವು […]

ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ

Saturday, August 17th, 2019
sadaashiva

ಮಂಗಳೂರು : ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ಆ.16 ರ ಶುಕ್ರವಾರ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿರುವ ಯುವಕ ಕಡಬದ ನಿವಾಸಿ 29 ವರ್ಷದ ಸದಾಶಿವ ಎಂದು ತಿಳಿದುಬಂದಿದೆ. ಈತ ನಿನ್ನೆ ರಾತ್ರಿ 9.30 ರ ಸುಮಾರಿಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪುತ್ತೂರು: 700 ಕೆಜಿ ಗೋಮಾಂಸ ಅಕ್ರಮ ಸಾಗಣೆ – ಮೂವರನ್ನು ಬಂಧಿಸಲಾಗಿದೆ

Friday, August 16th, 2019
go-mamsa

ಪುತ್ತೂರು : ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದಿರುವ ಪುತ್ತೂರು ನಗರ ಠಾಣೆಯ ಪೊಲೀಸರು, ಸುಮಾರು 700 ಕಿ. ಗ್ರಾಂ. ಮಾಂಸ ಸಹಿತ ಮೂವರನ್ನು ಬಂಧಿಸಿದ್ದಾರೆ. ಕುದ್ರೋಳಿ ಕರ್ಬಲ ರಸ್ತೆಯ ಮುನಿರಾ ಮಂಜಿಲ್‌ ನಿವಾಸಿ ಮುಸ್ತಾಕ್‌ (50), ಕಲ್ಲಡ್ಕ ಗೋಳ್ತ ಮಜಲು ನಿವಾಸಿ ತೌಫೀಕ್‌ (26) ಹಾಗೂ ಕಲ್ಲಡ್ಕ -ವಿಟ್ಲ ರಸ್ತೆ ನಿವಾಸಿ ಮಹಮ್ಮದ್‌ ಕಬೀರ್‌ (40) ಬಂಧಿತರು. ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಮಹೇಂದ್ರ ಝೈಲೋ ಕಾರಿನಲ್ಲಿ […]

ಉಡುಪಿ: ಪೇಜಾವರ ಸ್ವಾಮೀಜಿಯ ಸಹೋದರ ಎಂದ ಕ್ರಿಶ್ಚಿಯನ್ ಧರ್ಮದ ನಕಲಿ ಪ್ರಚಾರಕನ ವಿರುದ್ಧ ದೂರು

Friday, August 16th, 2019
pejaavara

ಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ ಎಂದು ಹೇಳಲಾದ ವ್ಯಕ್ತಿಯೊಬ್ಬರು ಪೇಜಾವರ ಶ್ರೀಗಳ ಸ್ವಾಮೀಜಿ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಭಟ್ ಪೆರಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರ ಚರ್ಚ್‌ನಲ್ಲಿ ಧಾರ್ಮಿಕ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಪ್ರಚಾರದ ರೂಪದಲ್ಲಿ ವಿತರಿಸಿದ್ದು, ಆ ವ್ಯಕ್ತಿಯೂ ಕರಪತ್ರದಲ್ಲಿ ತಾನು ಪೇಜಾವರ ಮಠದ ಶ್ರೀ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಸಹೋದರ ಪಾಸ್ಟರ್ ವಸಂತ ಆರ್ . ಪೈ ಎಂದು ಉಲ್ಲೇಖಿಸಿದ್ದಾನೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲದೆ, […]

ಉಪ್ಪಿನಂಗಡಿಯಲ್ಲಿ ಜ್ಯುವೆಲ್ಲರಿ ದರೋಡೆ; ಲಕ್ಷಾಂತರ ಮೌಲ್ಯದ ಒಡವೆಗಳು ಕಳವು

Friday, August 16th, 2019
uppinangadi

ಉಪ್ಪಿನಂಗಡಿ : ಇಲ್ಲಿನ ಶಾಲಾ ರಸ್ತೆಯಲ್ಲಿರುವ ಆರ್‌. ಕೆ ಜ್ಯುವೆಲ್ಲರಿಗೆ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿದ ಘಟನೆ ಬೆಳಕಿಗೆ ಬಂದಿದೆ. ಜ್ಯುವೆಲ್ಲರಿಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ದೋಚಲಾಗಿದೆ ಎಂದು ತಿಳಿದುಬಂದಿದೆ. ದರೋಡೆಕೋರರು ಗ್ಯಾಸ್‌ ಕಟ್ಟರ್‌ ಬಳಸಿ, ಅಂಗಡಿಯ ಶಟರ್‌ ಬಾಗಿಲು ಮುರಿದು ಒಳನುಗ್ಗಿದ್ದಾರೆ ಆದರೆ ಒಳಗಿದ್ದ ಲಾಕರ್ ರೂಮ್‌ ದೋಚಿಲ್ಲ. ಈ ಜ್ಯುವೆಲ್ಲರಿಗೆ ಒಬ್ಬ ಕಾವಲುಗಾರನಿದ್ದು, ಉಪ್ಪಿನಂಗಡಿ ಪೇಟೆಗೂ ಆತನೆ ಕಾವಲುಗಾರನಾಗಿದ್ದಾನೆ. ಆತ ರಾತ್ರಿ 1 […]

ಸುಳ್ಯ: ಜೋಡುಪಾಲ ದುರಂತಕ್ಕೆ ಒಂದು ವರ್ಷ; ಮೂರು ಶಾಲೆಗಳಿಗಿಲ್ಲ ಸ್ವಾತಂತ್ರ್ಯ

Friday, August 16th, 2019
Jodupaala

ಸುಳ್ಯ :  ಒಂದು ವರ್ಷದ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಚೂರು ಚೂರಾಗಿದ್ದ ಜೋಡುಪಾಲ ಪರಿಸರವೀಗ ಶಾಂತವಾಗಿದ್ದರೂ ನಾಳೆ ಏನಾಗಬಹುದು ಎಂಬ ಆತಂಕ ಜನರಿಂದ ಇನ್ನೂ ದೂರವಾಗಿಲ್ಲ! ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜೋಡುಪಾಲದಲ್ಲಿ ಕಳೆದ ವರ್ಷದ ಆ. 16ರಂದು ಬೀಭತ್ಸ ರೂಪ ಪಡೆದು ಅನಾಹುತ ಸೃಷ್ಟಿಸಿದ್ದ ತೊರೆ ಈ ವರ್ಷ ತನ್ನ ಪಾಡಿಗೆ ತಾನು ಶಾಂತವಾಗಿ ಹರಿಯುತ್ತಿದೆ. ತೊರೆ ಸೃಷ್ಟಿಸಿದ ಭೀಕರತೆ ಛಾಯೆ ಇನ್ನೂ ಉಳಿದುಕೊಂಡಿದೆ. ಸನಿಹದ ಎರಡನೇ ಮೊಣ್ಣಂಗೇರಿ, ಕಾಲೂರು, ಹೆಬ್ಬೆಟ್ಟಗೇರಿ ಸರಕಾರಿ ಶಾಲೆಗಳಲ್ಲಿ ಈ […]