ಬಿ ವಿ ಕಕ್ಕಿಲ್ಲಾಯ ಅವರ ಜನ್ಮಶತಾಬ್ದಿ ಪ್ರಯುಕ್ತ ರಾಜಕೀಯ, ಆರ್ಥಿಕ, ಸಾಮಾಜಿಕ ಗಂಭೀರ ಚರ್ಚೆ

Wednesday, August 7th, 2019
Kakkilaya

ಮಂಗಳೂರು:  ಬಿ ವಿ ಕಕ್ಕಿಲ್ಲಾಯ ಅವರ ಜನ್ಮಶತಾಬ್ದಿ ಪ್ರಯುಕ್ತ ಉಪನ್ಯಾಸ ಸಂವಾದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ನಮ್ಮ ದೇಶದಲ್ಲಿ ಸಮಕಾಲೀನ ಪರಿಸ್ಥಿತಿ ಹೇಗಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಹೇಗಿದೆ ಎಂಬ ಬಹಳ ಆಳವಾದ ಗಂಭೀರ ಚರ್ಚೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಸಮದರ್ಶಿ ವೇದಿಕೆಯ ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ರಾಜ್ಯಸಭಾ ಸದಸ್ಯ, ಶಾಸಕರಾಗಿದ್ದ ಬಿ ವಿ ಕಕ್ಕಿಲ್ಲಾಯರು ಯಾವ ಆಶಯಗಳಿಗಾಗಿ ಹೋರಾಟ […]

ಕರ್ನಾಟಕ ದಸಂಸ ಅಂಬೇಡ್ಕರ್‌ವಾದ ದ.ಕ. ಜಿಲ್ಲಾ ಸಮಿತಿಯಿಂದ ಮಂಗಳೂರು ಪೊಲೀಸ್ ಉಪಆಯುಕ್ತರಿಗೆ ಗೌರವಾರ್ಪಣೆ

Wednesday, August 7th, 2019
DSS

ಮಂಗಳೂರು  : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್‌ವಾದ), ದ.ಕ. ಜಿಲ್ಲಾ ಶಾಖೆ ವತಿಯಿಂದ ಬುಧವಾರ ಆಗಸ್ಟ್ 7,2019 ರಂದು ಮಂಗಳೂರು ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಉಪಆಯುಕ್ತರಾದ ಹನುಮಂತರಾಯರವರನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಸಂಸ (ಅಂಬೇಡ್ಕರ್‌ವಾದ) ನಿಯೋಗ ಭೇಟಿ ಮಾಡಿ ಹೂಗುಚ್ಛ ಹಾಗೂ ಭಗವಾನ್ ಬುದ್ಧನ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟಾನಾ ಸಂಚಾಲಕರಾದ ಸದಾಶಿವ ಉರ್ವಸ್ಟೋರ್‌ರವರು ಮಾತನಾಡಿ ಮಂಗಳೂರು ನಗರ ಪೊಲೀಸ್ […]

ಘನತೆಯ ಬದುಕಿಗೆ ಕಾನೂನು ಮುಖ್ಯ- ಜಿಲ್ಲಾ ನ್ಯಾಯಾಧೀಶ ರುಡೋಲ್ಫ್ ಪಿರೇರಾ

Wednesday, August 7th, 2019
kssap

ಪುತ್ತೂರು  : ಯುವಜನತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳಲು ಕಾರಣಗಳೇನು ಎಂಬುದರ ಬಗ್ಗೆ ನಾವು ಅಗತ್ಯವಾಗಿ ಅರಿತುಕೊಳ್ಳಬೇಕಾಗಿದೆ. ಇದು ಅನಿವಾರ್ಯಕೂಡ. ಶಾಲಾ ಕಾಲೇಜುಗಳ ಆವರಣದಲ್ಲಿ ವಿವಿಧ ಆಧುನಿಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಗಮನಿಸಿದರೆ ಇದಕ್ಕೆ ಹೆತ್ತವರು ಕಾರಣವೇ, ಪೋಷಕರು ಕಾರಣವೇ, ಸಮಾಜ ಕಾರಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ದ.ಕ. ಜಿಲ್ಲಾ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡೋಲ್ಫ್ ಪಿರೇರಾ ಅವರು ಹೇಳಿದರು. ಅವರು  ಆಗಸ್ಟ್ 6, 2019 ರಂದು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷಾನ, ಮಂಗಳೂರು (KSSAP), […]

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಸಾಯುವ ಸೂಚನೆ ಇರಲಿಲ್ಲ

Wednesday, August 7th, 2019
sushma-swaraj

ನವದೆಹಲಿ:  ಜಮ್ಮು-ಕಾಶ್ಮೀರದ ಐತಿಹಾಸಿಕ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ರಾತ್ರಿ 9 ಗಂಟೆ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಏಮ್ಸ್ ಗೆ ಕರೆದೊಯ್ಯಲಾಗಿದೆ. 9:30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆ ನೀಡುವ ವಾರ್ಡ್ ಗೆ ದಾಖಲಿಸಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಪ್ರಾರಂಭಿಸಲಾಯಿತು. ಸುಷ್ಮಾ ಸ್ವರಾಜ್ ಅವರನ್ನು ಉಳಿಸಿಕೊಳ್ಳುವುದಕ್ಕೆ ಸತತ 70 ನಿಮಿಷಗಳ ಕಾಲ ವೈದ್ಯರು ಯತ್ನಿಸಿದರು. ಗಂಭೀರ ಸ್ಥಿತಿಯಿಂದ ಆಕೆಯನ್ನು ಪಾರುಮಾಡುವುದಕ್ಕೆ […]

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಅವರ ಪುತ್ರ ಧರ್ಮಸ್ಥಳಕ್ಕೆ ಭೇಟಿ

Wednesday, August 7th, 2019
harshavardhana

ಧರ್ಮಸ್ಥಳ : ಭಾರತದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡುಅವರ ಮಗ ಹರ್ಷವರ್ಧನ್‌ ಇಂದು (ಮಂಗಳವಾರ) ಧರ್ಮಸ್ಥಳಕ್ಕೆ ಭೇಟಿ ನೀಡಿಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯದರ್ಶನ ಪಡೆದು ಸುಬ್ರಹ್ಮಣ್ಯಕ್ಕೆಪ್ರಯಾಣ ಬೆಳೆಸಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು ಎಬಿವಿಪಿಯಿಂದ ವಿಜಯೋತ್ಸವ ; ಪೊಲೀಸರಿಂದ ವಿರೋಧ

Tuesday, August 6th, 2019
Abvp

ಮಂಗಳೂರು : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವುದನ್ನು ಮಂಗಳೂರು ಎಬಿವಿಪಿ ಘಟಕವು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ವಿಜಯೋತ್ಸವವನ್ನಾಗಿ ಆಚರಿಸಿತು. ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ವಿಜಯೋತ್ಸವವನ್ನು ತಡೆಯಲು ಮುಂದಾದರು. ಇದನ್ನು ವಿರೋಧಿಸಿದ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.  

ಬಕ್ರೀದ್ ನಿಮಿತ್ತ ಗೋಹತ್ಯೆ ತಡೆಯಲು ದಕ್ಷಿಣ ಕನ್ನಡ ಅಪರ ಆಯುಕ್ತರಿಗೆ ಮನವಿ

Tuesday, August 6th, 2019
bakrid cow

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕ ಸಂಘಟನೆಗಳಿಂದ ದಕ್ಷಿಣ ಕನ್ನಡ ಅಪರ ಆಯುಕ್ತರಾದ ಎಂ. ಜೆ. ರೂಪ ಇವರಿಗೆ ಬಕ್ರೀದ್ ನಿಮಿತ್ತ ಗೋಹತ್ಯೆ ತಡೆಯಲು ಅಗಷ್ಟ 6 , ಶುಕ್ರವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂನವಯಕರಾದ ಶ್ರೀ ಚಂದ್ರ ಮೊಗೇರ್, ಶ್ರೀ ಯೋಗೀಶ್ ಅಶ್ವಥಪುರ, ಸೌ ಉಮಾ, ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ,ಜಿಲ್ಲಾ ಅದ್ಯಕ್ಷ […]

ಮುಂದಿನ 48 ಗಂಟೆಗಳಲ್ಲಿ ಬಾರೀ ಮಳೆ ; ಆಗಸ್ಟ್ 7 ರಂದು ಶಾಲಾ ಕಾಲೇಜುಗಳಿಗೆ ರಜೆ

Tuesday, August 6th, 2019
Rain

ಮಂಗಳೂರು  : ಮುಂದಿನ 48 ಗಂಟೆಗಳಲ್ಲಿ ಬಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) (ಆ.7)ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.7ರಿಂದ ಎರಡು ದಿನ ರೆಡ್ ಅಲರ್ಟ್

Tuesday, August 6th, 2019
house-collapse

ಮಂಗಳೂರು:  ಆ.7ರಿಂದ ಎರಡು ದಿನ ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಿ ರುವುದಾಗಿ ದ.ಕ ಜಿಲ್ಲಾಧಿ ಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಭಾರಿ ಮಳೆ ಆಗುವ ಸಾಧ್ಯತೆ ಇದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಗುಡ್ಡಕುಸಿತ, ರಸ್ತೆಗೆ ಮರ ಬಿದ್ದಿದ್ದು, ಕಡಲ್ಕೊರೆತವು ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದರು. ನೆರೆ ಪೀಡಿತ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು. ನೆರೆ ಹಾವಳಿ ಆಗುವ ಸಂದರ್ಭದಲ್ಲಿ ಅಧಿಕಾರಿಗಳ ಸೂಚನೆ ಪಾಲಿಸಿ ಎಂದು ಜಿಲ್ಲಾಧಿಕಾರಿ ಮಾಹಿತಿ […]

ಶಾರ್ಟ್ ಸರ್ಕ್ಯೂಟ್ ನಿಂದ ಜನರಿಕ್ ಔಷಧ ಮಳಿಗೆ ಭಸ್ಮ

Tuesday, August 6th, 2019
genaric

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಪ್ರಧಾನ ಮಂತ್ರಿ ಜನರಿಕ್ ಔಷಧ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಗರದ ತೊಕ್ಕೊಟ್ಟು ಒಳಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಔಷಧಿಗಳು, ಫ್ರಿಡ್ಜ್ ಸೇರಿ‌ದಂತೆ ವಿವಿಧ ವಸ್ತುಗಳು ಸುಟ್ಟು ಭಸ್ಮವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ‌ ನಂದಿಸುವ ಕಾರ್ಯ ಮಾಡಿತು. ಕಾರ್ಯಾಚರಣೆ ವೇಳೆ ಔಷಧಿ ಅಂಗಡಿಯಲ್ಲಿದ್ದ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿಯ ಮುಖಕ್ಕೆ ಗಾಯವಾದ ಘಟನೆ ನಡೆಯಿತು. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ […]