ಜುಲೈ 13 ರಂದು ಬಾನಂಗಳದಲ್ಲಿ ಮಂಗಳ – ಶುಕ್ರಗ್ರಹಗಳ ಸಂಯೋಗ

Monday, July 12th, 2021
Venus Mars

ಮಂಗಳೂರು : ಮಂಗಳ-ಶುಕ್ರಗ್ರಹಗಳು ಜು.13ರ ಮಂಗಳವಾರ ಸನಿಹ ಬರಲಿದ್ದು, (Conjunction). ಈ ಗ್ರಹಗಳು ಉಳಿದ ದಿನಗಳಲ್ಲಿ ದೂರದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ. ಗ್ರಹಗಳನ್ನು ಬರಿಗಣ್ಣಿನಿಂದ, ದುರ್ಬೀನಿನಿಂದ ಅಥವಾ ದೂರದರ್ಶಕದಿಂದ ನೋಡಬಹುದು. ಮೋಡವಿರದ ಶುಭ್ರ ಆಕಾಶವಿದ್ದರೆ ಜುಲೈ 13 ರ ರಾತ್ರಿ ಸುಮಾರು 7.20 ಗಂಟೆಗೆ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನ ನಡುವೆ ನೋಡಿದಾಗ ಮಂಗಳ ಶುಕ್ರ ಸಂಯೋಗದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದಾಗಿದ್ದು, […]

ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರ

Tuesday, March 13th, 2018
edthoor

ಮಂಗಳೂರು: ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರವೊಂದು ಸಾರ್ವಜನಿಕರಲ್ಲಿ ಆತಂಕದ ಜತೆಗೆ ಕುತೂಹಲ ಮೂಡಿಸಿದ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಸಂಭವಿಸಿದೆ. ಎಡ್ತೂರು ನಿರಂಜನ್‌ ಜೈನ್‌ ಅವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿಕ್ಕಿದೆ. ಕಳೆದೆರಡು ದಿನದ ಹಿಂದೆ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡದಲ್ಲಿ ಈ ವಸ್ತು ಕಂಡುಬಂದಿದೆ. ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಚೂಟ್‌ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.