ಪೋಲಿಸರಿಗೆ ಎಳನೀರು, ಬಿಸ್ಕಟ್ ಪ್ಯಾಕೆಟ್ ಮತ್ತು ನೀರಿನ ಬಾಟಲ್ ವಿತರಿಸಿದ ಪಟ್ಲ ಭಾಗವತರು

Friday, April 10th, 2020
patla satish

ಮಂಗಳೂರು  :   ಪಟ್ಲ ಫೌಂಡೇಶನ್ ವತಿಯಿಂದ  ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜಪೆ, ಕಾವೂರು, ಮಂಗಳೂರು, ಬಂಟ್ವಾಳ ,ಕಲ್ಲಡ್ಕ, ವಿಟ್ಲ,ಕೇರಳ ಗಡಿ ಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಹಾಗೂ ಅಗತ್ಯ ಸೇವೆಯಲ್ಲಿರುವ ಪೋಲೀಸರಿಗೆ ಎಳನೀರು, ಬಿಸ್ಕಟ್ ಪ್ಯಾಕೆಟ್ ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು. ಪಟ್ಲ ಫೌಂಡೇಶನ್  ಮುಖ್ಯಸ್ಥ ಭಾಗವತ ಪಟ್ಲ ಸತೀಶ್ ಶೆಟ್ಟಿ ಯವರು  ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಸಂದರ್ಭದಲ್ಲಿ ಕರಾವಳಿಯ ಸುಡು ಬಿಸಿಲಿನಲ್ಲಿಯೂ ಹಗಲಿರುಳು ಕರ್ತವ್ಯದಲ್ಲಿರುವ ಪೋಲಿಸರನ್ನು ಗಮನಿಸಿ ವೈಯುಕ್ತಿಕ ನೆಲೆಯಲ್ಲಿ ಸ್ವತ: ಪಟ್ಲರೇ ಬಂದು ಎಳನೀರು, ಬಿಸ್ಕಟ್ ಪ್ಯಾಕೆಟ್ ಮತ್ತು ನೀರಿನ […]

ಎಳನೀರು ಗ್ರಾಮದ ಅಭಿವೃದ್ಧಿಗೆ ನಾನು ಪ್ರಥಮ ಆದ್ಯತೆ ನೀಡುತ್ತೇನೆ: ಶಾಸಕ ಹರೀಶ್​ ಪೂಂಜಾ

Saturday, December 8th, 2018
harish-poonja

ಬೆಳ್ತಂಗಡಿ: ಎಳನೀರು ಬೆಳ್ತಂಗಡಿ ತಾಲೂಕಿನ ಕಾಶ್ಮೀರವಿದ್ದಂತೆ, ಈ ಭಾಗದ ಅಭಿವೃದ್ಧಿಗೆ ನಾನು ಪ್ರಥಮ ಆದ್ಯತೆ ನೀಡುತ್ತೇನೆ. ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು. ಎಲ್ಲಾ ಅಧಿಕಾರಿಗಳು ಈ ಭಾಗದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆಯನ್ನು ನೀಡಬೇಕು. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ […]

ಕಾಮತರ ಎಳನೀರು ‘ಮಲಾಯಿ ಐಸ್ ಕ್ರೀಮ್’ಗೆ ಮಾರು ಹೋದ ಮಂಗಳೂರಿಗರು

Wednesday, February 14th, 2018
cocunut

ಮಂಗಳೂರು: ಬಾಯಾರಿದಾಗ ಎಳನೀರು ಸಿಕ್ಕಿದರೆ ಅದಕ್ಕೆ ಸಾಟಿಯಾಗುವಂಥ ಪಾನೀಯ ಇನ್ನೊಂದಿಲ್ಲ. ಇದೇ ಎಳನೀರಿಗೆ ಮಂಗಳೂರಿನ ನಿವೃತ್ತ ಇಂಜಿನಿಯರ್ ಹೊಸ ಸ್ವಾದ ನೀಡಿದ್ದಾರೆ. ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಈ ಹೊಸ ತಿನಿಸಿನ ರುಚಿಗೆ ಮಂಗಳೂರಿಗರೇ ಫಿದಾ ಆಗಿದ್ದಾರೆ. ಇದರ ರುಚಿ ಅಂತಿಂಥ ರುಚಿಯಲ್ಲ. ನೀವೆಲ್ಲೂ ಕಂಡಿರದ ರುಚಿರುಚಿಯಾದ ಮಲಾಯಿ ಐಸ್ ಕ್ರೀಮ್ ಇದು. ಮಂಗಳೂರಿನ ಪುಟ್ಟ ಅಂಗಡಿಯಲ್ಲಿ ಈ ಐಸ್ ಕ್ರೀಂ ರೆಡಿಯಾಗುತ್ತದೆ. ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ ಹೀಗೆ ಹತ್ತಕ್ಕೂ ಮಿಕ್ಕಿದ […]

ಲೋಕ ಕಲ್ಯಾಣಾರ್ಥ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸೀಯಾಳಾಭಿಷೇಕ

Tuesday, June 23rd, 2015
Siyala

ಮಂಗಳೂರು : ಶ್ರೀ ಕ್ಷೇತ್ರಕದ್ರಿಯ ಮಂಜುನಾಥ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೀಯಾಳಾಭಿಷೇಕ ನಡೆಸಲಾಯ್ತು. ಶ್ರೀ ಎ.ಜೆ. ಶೆಟ್ಟಿ ನೇತೃತ್ವದಲ್ಲಿ ಹಾಗೂ ಎಸ್. ಪ್ರದೀಪಕುಮಾರಕಲ್ಕೂರ ಮಾರ್ಗದರ್ಶನದಲ್ಲಿ ಭಕ್ತಾದಿಗಳು ಸಮರ್ಪಿಸಿದ ಸಾವಿರಾರು ಎಳನೀರುಗಳಿಂದ ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯಐವನ್‌ಡಸೋಜಾ, ಕರ್ನಾಟಕ ಮುಜರಾಯಿಇಲಾಖೆಯರಾಜ್ಯ ಸದಸ್ಯರುಗಳಾದ ಜಗನ್ನಿವಾಸರಾವ್ ಪುತ್ತೂರು ಹಾಗೂ ಪದ್ಮನಾಭಕೋಟ್ಯಾನ್‌ ಅಲ್ಲದೆ ಕಾರ್ಪೊರೇಟರ್‌ಗಳಾದ ಅಶೋಕ್‌ಡಿ.ಕೆ., ಶಶಿಧರ ಹೆಗ್ಡೆ ಮತ್ತುಉದ್ಯಮಿರತ್ನಾಕರಜೈನ್, ಸುಂದರ ಶೆಟ್ಟಿ, ತುಳು ಸಾಹಿತ್ಯಅಕಾಡೆಮಿ ಸದಸ್ಯರಾದ ಮೋಹನ ಕೊಪ್ಪಳ, ದಿನೇಶ್‌ದೇವಾಡಿಗ, ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ. […]