ಸತ್ಕರ್ಮಗಳ ಮೂಲಕ ಭಗವಂತನ ಕೃಷೆಗೆ ಪಾತ್ರರಾಗಬೇಕು-ಆನೆಗೊಂದಿ ಶ್ರೀ.

Tuesday, April 12th, 2016
Anegundi

ಉಪ್ಪಳ: ಕ್ಷೇತ್ರಗಳಲ್ಲಿ ಭಗವಂತನ ಸಾನ್ನಿಧ್ಯ ನಿರಂತರವಾಗಿರಬೇಕಾದರೆ ನಿಷ್ಠೆಯ ಪೂಜೆ,ಅರ್ಚನೆಗಳು,ವೇದ ಪಾರಾಯಣಗಳು ಸದಾ ನಡೆಯುತ್ತರಬೇಕು.ಶುದ್ದ ಹೃದಯದ ಆರಾಧನೆಗೆ ಭಗವಂತ ಒಲಿದು ಅನುಗ್ರಹಿಸುತ್ತಾನೆಯೆಂದು ಕಟಪಾಡಿ ಆನೆಗೊಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನವಿತ್ತರು. ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ಜೀವನದ ಸುಖವೆಂದರೆ ತ್ಯಾಗ ಮತ್ತು ಕರ್ಮಗಳ ಅನುಸಂಧಾನವಾಗಿದೆ.ಐಶಾರಾಮಿ ಬೇಕುಗಳನ್ನು ತ್ಯಜಿಸಿ ಸತ್ಕರ್ಮಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವುದು ನೈಜ ಸುಖವೆಂದು ನಾವು […]

ರೋಟರಿಯವರಿಂದ ಅಭಿನಂದನಾರ್ಹ ಸೇವೆ ಶ್ರೀ. ಯೋಗೀಶ್ ಭಟ್

Thursday, August 13th, 2015
Rotary Bejai

ಮಂಗಳೂರು : ದ.ಕ.ಜಿ.ಪಂ. ಹಿ.ಪ್ರಾ ಶಾಲೆ ಕಾಪಿಕಾಡು ಶಾಲೆಗೆ ಸಂಪೂರ್ಣ ಸುಣ್ಣ ಬಣ್ಣ ಬಳಿದು (ಪೈಂಟಿಂಗ್) ಶಾಲೆಯ ಸುತ್ತಮುತ್ತ ಬೆಳೆದಂತಹ ಹುಲ್ಲು ಮತ್ತು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ ಶಾಲೆಯ ಅಂದವನ್ನು ಹೆಚ್ಚಿಸುವಲ್ಲಿ ಸುಮಾರು ರೂ. 1,50,000.00 ವರೆಗೆ ವೆಚ್ಛ ಮಾಡಿದ ಕುರಿತು ಸೇವೆಯನ್ನು ಗುರುತಿಸಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರಿಂದ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ಶ್ರೀ. ಇಲಿಯಾಸ್ ಸಾಂಟಿಸ್ ಇವರನ್ನು ಅಭಿನಂದಿಸಲಾಯಿತು. ಸಭೆಯ ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಶ್ರೀ. ಎನ್. […]