ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರ ಬಂಧನ

Thursday, January 24th, 2019
Ganja

ಮಂಗಳೂರು : ನಗರದ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ ರಸ್ತೆಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಮಂದಿ ಯುವಕರನ್ನು ಕಂಕನಾಡಿ ನಗರ ಪೊಲೀಸರು  ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಜಿತಿನ್ (25) ತಂದೆ: ರಾಮಯ್ಯ ವಾಸ: ಕಕ್ಕೆ ಬೆಟ್ಟು ಮನೆ, ಕುಲಶೇಖರ, ಪದವು ಗ್ರಾಮ, ಮಂಗಳೂರು, ಮೋಹಿತ್ ಕುಮಾರ್ (27) ತಂದೆ: ಉಮೇಶ್ ಪೂಜಾರಿ ವಾಸ: ಪ್ರಕೃತಿ ಲೇಔಟ್, ಅಡ್ಯಾರ್ ಪದವು, ನೀರು ಮಾರ್ಗ, ಮಂಗಳೂರು ಮತ್ತು ಗುರುರಾಜ್ (25) ತಂದೆ: ಸುರೇಂದ್ರ ವಾಸ: ಶಿವನಗರ, ಮೂಡು […]

27 ಲಕ್ಷ ನಗದು ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

Monday, December 10th, 2018
bajpe

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರೂ.16,57,000/- ನಗದು ಹಣ,ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ಇಳಂತಿಲ ನಿವಾಸಿ ಮಹಮ್ಮದ್ ಶಾಫಿ(26) ಹಾಗೂ ಬೆಳ್ತಂಗಡಿ ನೆಜಿಕಾರ್ ನಿವಾಸಿ ಮಹಮ್ಮದ್ ರಿಯಾಜ್(19) ಬಂಧಿತ ಆರೋಪಿಗಳು. ದಿನಾಂಕ:20-10-2018 ರಂದು ರಾತ್ರಿ 7-30 ಗಂಟೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಶ್ರೀರಾಮ […]

ಬೆಂಗ್ರೆಯಲ್ಲಿ‌ ಯುವತಿಯ ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಗೆ ಒಂದು ಲಕ್ಷ ರೂ. ಚೆಕ್ ನೀಡಿ‌ ಅಭಿನಂದನೆ

Saturday, December 1st, 2018
u-t-khader

ಮಂಗಳೂರು: ನಗರದ ತೋಟ ಬೆಂಗ್ರೆಯಲ್ಲಿ‌ ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಿ‌ ಆರೋಪಿಗಳನ್ನು ಶೀಘ್ರ ಬಂಧಿಸಿದ ಮಂಗಳೂರು ನಗರ ಪೊಲೀಸರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಒಂದು ಲಕ್ಷ ರೂ. ಚೆಕ್ ನೀಡಿ‌ ಅಭಿನಂದಿಸಿದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಅವರಿಗೆ ಸಚಿವರು ಚೆಕ್ ಹಸ್ತಾಂತರಿಸಿದರು. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದಾಗ, ತಮಗೆ ದೂರು ಬಾರದೆ ಇದ್ದರೂ ಮಾಹಿತಿ ಸಂಗ್ರಹಿಸಿ ಸುಮೊಟೋ ಪ್ರಕರಣ ದಾಖಲಿಸಿ […]

ಹುಡುಗಿ ವೇಷ ಹಾಕಿಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ

Thursday, October 4th, 2018
urva-store

ಮಂಗಳೂರು: ಉರ್ವ ಪೊಲೀಸ್ ಠಾಣಾ ಪ್ರಕರಣವೊಂದರಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ. ಪ್ರಕರಣದ ಫಿರ್ಯಾಧಿದಾರರನ್ನು ಬೆಂಗಳೂರು ಮೂಲದ ಆರಾಧ್ಯ ಎಂಬ ಹೆಂಗಸಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿರುತ್ತಾರೆ. ಫಿರ್ಯಾಧಿದಾರರು ಆರೋಪಿಯ ಬೇಡಿಕೆಯಂತೆ ತಮ್ಮ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದು, ಈ ಭಾವಚಿತ್ರವನ್ನು ಪಡೆದುಕೊಂಡ ಆರೋಪಿ ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ […]

ನಾಪತ್ತೆಯಾಗಿದ್ದ ಲಾರಿ ಚಾಲಕ ಶವವಾಗಿ ಪತ್ತೆ..!

Wednesday, September 19th, 2018
driver

ಮಂಗಳೂರು: ಲಾರಿಯಲ್ಲಿದ್ದ ವಸ್ತುಗಳನ್ನು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದ್ದ ಮಂಗಳೂರಿನ ಸುಗಮ ಕಂಪನಿಯ ಲಾರಿ ಚಾಲಕ ಅನಿಲ್ ಕುಮಾರ್ ಎಂಬಾತನ ನಾಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಲಾರಿ ಚಾಲಕ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರುಚಿ ಸೋಯಾ ಇಂಡಸ್ಟ್ರೀಸ್ನಿಂದ ಲಾರಿಯಲ್ಲಿ ಹೊರಟಿದ್ದ ಚಾಲಕನನ್ನು ದುಷ್ಕರ್ಮಿಗಳು ದೋಚುವ ಉದ್ದೇಶದಿಂದ ಹತ್ಯೆಗೈದಿರುವುದು ಬಹಿರಂಗಗೊಂಡಿದೆ. ಲಾರಿ ಚಾಲಕನ ಅನಿಲ್ ಕುಮಾರ್ನನ್ನು ಹತ್ಯೆಗೈದ ಆರೋಪಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಕೆಂಪನಹಳ್ಳಿ ಕಂಬಿಪುರ ಗ್ರಾಮ ನಿವಾಸಿ ಅಸಾದುಲ್ಲಾ […]

ಪೊಲೀಸ್​ ಭದ್ರತೆಯಲ್ಲಿ ಹಬ್ಬಗಳ ಆಚರಣೆ ಮಾಡುವ ಪರಿಸ್ಥಿತಿ ಬದಲಾಗಲಿ: ಡಾ. ಟಿ.ಆರ್.ಸುರೇಶ್

Friday, September 14th, 2018
t-r-suresh

ಮಂಗಳೂರು: ಇಂದು ಎಲ್ಲಾ ಧರ್ಮಗಳ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಮಾಡುವ ಪರಿಸ್ಥಿತಿ ಇದ್ದು, ಇದನ್ನು ಹೋಗಲಾಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಟಿ.ಆರ್.ಸುರೇಶ್ ಕುಮಾರ್ ಹೇಳಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಹಿಂದು ಯುವ ಸೇನೆಯಿಂದ ನಡೆಯುತ್ತಿರುವ 26ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಹಬ್ಬಗಳ ಆಚರಣೆಯಲ್ಲಿ ತೊಡಗಿದ್ದರೆ, ಪೊಲೀಸರು ಭದ್ರತಾ ಕೆಲಸದಲ್ಲಿರುತ್ತಾರೆ. ಇಂದು ಎಲ್ಲಾ ಧರ್ಮಗಳ ಹಬ್ಬಗಳ ಆಚರಣೆಗಳು ಪೊಲೀಸ್ ಬಂದೋಬಸ್ತಿನಲ್ಲಿ ನಡೆಯುತ್ತಿವೆ. ಕಿಡಿಗೇಡಿಗಳು ತಮ್ಮ ವೈಯಕ್ತಿಕ ದ್ವೇಷವನ್ನು […]

ಪೋಲಿಸ್ ಅಯುಕ್ತ ಟಿ.ಆರ್ ಸುರೇಶ್ ಬಿಷಪ್‌ರವರುಗಳ ಭೇಟಿ

Wednesday, September 12th, 2018
T-R-Suresh

ಮಂಗಳೂರು: ಮಹಾನಗರದ ಪೋಲಿಸ್ ಅಯುಕ್ತರಾದ ಟಿ.ಆರ್ ಸುರೇಶ್ ರವರು ತಾರೀಕು 12.09.2018 ಇಬ್ಬರು ಬಿಷಪ್‌ರವರನ್ನು ಬಿಷಪ್‌ರವರ ನಿವಾಸದಲ್ಲಿ ಭೇಟಿ ಮಾಡಿದರು. ನಿಯೋಜಿತ ಬಿಷಪ್‌ರವರಿಗೆ ಮೊನ್ಸಿಂಜರ್ ಅತೀ ವಂದನೀಯ ಪೀಟರ್ ಪೌಲ್ ಸಲ್ದಾನಾರವರಿಗೆ ಹೂ ಗುಚ್ಚೆ ಕೊಟ್ಟು ಶುಭವನ್ನು ಹಾರೈಸಿದರು. ಹಾಗೂ ಬಿಷಪ್ ಅತೀ ವಂದನೀಯ ಎಲೋಷಿಯಸ್ ಪೌಲ್ ಡಿಸೋಜರವರಿಗೆ ಹೂ ಗುಚ್ಚ ಕೊಟ್ಟು ಅವರು ಸಮಾಜಕ್ಕೆ ಕೊಟ್ಟ ಸೇವೆಗೆ ಕೃತಜ್ಜತೆಯನ್ನು ಸಲ್ಲಿಸಿದರು. ಮಂಗಳೂರು ಧರ್ಮ ಪ್ರಾಂತ್ಯದ ಚರಿತ್ರೆ ಹಾಗೂ ಸೇವಾ ನೀಡುವ ಸಂಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು […]

ಚುನಾವಣೆ ಹಿನ್ನೆಲೆ ಕೇರಳ ಪೊಲೀಸರ ಜೊತೆ ಮಂಗಳೂರು ಪೊಲೀಸ್ ಅಧಿಕಾರಿಗಳ ಸಭೆ

Thursday, April 12th, 2018
mangaluru

ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇರಳ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಮಂಗಳೂರು ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದರು. ಕೇರಳ ರಾಜ್ಯ ಮತ್ತು ಕರ್ನಾಟಕ ರಾಜ್ಯದ ಗಡಿ ಭಾಗ ದಕ್ಷಿಣ ಕನ್ಬಡ ಜಿಲ್ಲೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಮಂಗಳೂರು ಪೊಲೀಸ್ ‌ಕಮೀಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೆ ಗೌಡ ಮತ್ತು ಕೇರಳ ರಾಜ್ಯದ ಕಾಸರಗೋಡು […]

ಬಸ್ ಚಾಲಕ-ನಿರ್ವಾಹಕರು ಸೌಜನ್ಯದಿಂದ ವರ್ತಿಸಿ: ತರಬೇತಿ ಶಿಬಿರದಲ್ಲಿ ಪೊಲೀಸ್ ಆಯುಕ್ತ ಕರೆ

Thursday, March 1st, 2018
t-r-suresh

ಮಂಗಳೂರು: ಬಸ್ ನಿರ್ವಾಹಕರು ಟಿಕೇಟ್ ನೀಡುತ್ತಿಲ್ಲ, ಚಿಲ್ಲರೆ ನೀಡುತ್ತಿಲ್ಲ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ, ಟ್ರಿಪ್ ಕಟ್ ಮಾಡುತ್ತಾರೆ, ಹಿರಿಯ ನಾಗರಿಕರಿಗೆ ಸೀಟ್ ಒದಗಿಸಿ ಕೊಡುತ್ತಿಲ್ಲ ಇತ್ಯಾದಿ ದೂರುಗಳು ಸಾಮಾನ್ಯವಾಗಿದೆ. ಇದಕ್ಕೆ ಸ್ಪಂದಿಸಿ ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಮಾಲಕರು ಕೂಡಾ ದಿನ ಬಾಡಿಗೆಗೆ ನೀಡದೆ ತಾವೇ ಮೇಲ್ವಿಚಾರಣೆ ನಡೆಸಬೇಕು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದರು. ದ.ಕ.ಬಸ್ ಮಾಲಕರ ಸಂಘವು ಸಿಟಿ ಬಸ್ ಚಾಲಕ-ನಿರ್ವಾಹಕರಿಗೆ ಬುಧವಾರ ನಗರದಲ್ಲಿ ಹಮ್ಮಿಕೊಂಡ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ […]

ಅಧಿಕ ದರ ವಸೂಲಿ ಮಾಡುವ ಆಟೋಗಳ ವಿರುದ್ಧ ಕ್ರಮ: ಮಂಗಳೂರು ಕಮಿಷನರ್‌

Friday, February 2nd, 2018
auto-rickshaw

ಮಂಗಳೂರು: ಕರೆದಲ್ಲಿಗೆ ಬಾರದ, ಅಧಿಕ ದರ ವಸೂಲಿ ಮಾಡುವ ಬಾಡಿಗೆ ಆಟೋಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅಂತಹ ರಿಕ್ಷಾಗಳ ಸಂಖ್ಯೆಯನ್ನು ದಾಖಲಿಸಿ ನಿಯಂತ್ರಣ ಕೊಠಡಿ, ದೂರವಾಣಿ 100ಗೆ ದೂರು ನೀಡುವಂತೆ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ. ಅವರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಸಾರ್ವಜನಿಕರು, ಆಟೋ ರಿಕ್ಷಾ ಚಾಲಕರು ಕರೆದಲ್ಲಿಗೆ ಬರುತ್ತಿಲ್ಲ ಹಾಗೂ ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆಟೋ ನಿಲ್ದಾಣದಲ್ಲಿ ಎಷ್ಟು […]