ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ

Friday, November 1st, 2019
Dehali-karnataka-sanga

ನವದೆಹಲಿ : 64 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಬೆಳಿಗ್ಗೆ ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಭುವನೇಶ್ವರಿಗೆ ಪೂಜೆ ಮತ್ತು ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ, ಉಪಾಧ್ಯಕ್ಷೆ ಜಮುನಾ ಸಿ.ಮಠದ, ಕಾರ್ಯದರ್ಶಿ ಸಿ.ಎಂ.ನಾಗರಾಜ, ಜಂಟೀ ಕಾರ್ಯದರ್ಶಿ ರಾಧಾಕೃಷ್ಣ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ.ಎಂ.ಎಸ್.ಶಶಿಕುಮಾರ್, ಸವಿತಾ ನೆಲ್ಲಿ, ಸುಮಿತಾ ಮುರಗೋಡ ಹಾಗೂ ಇನ್ನೂ ಅನೇಕ ಕನ್ನಡಿಗರು ಪಾಲ್ಗೊಂಡಿದ್ದರು. ರಾಜ್ಯೋತ್ಸವ ಸಂಭ್ರಮವನ್ನು ನವೆಂಬರ್ ತಿಂಗಳ ಪ್ರತೀ ಭಾನುವಾರದಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು.  

ದೆಹಲಿ ಕರ್ನಾಟಕ ಸಂಘದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಭಿನಂದನೆ

Monday, June 18th, 2018
Dehali Sangha

ದೆಹಲಿ : ಕರ್ನಾಟಕ ನೂತನ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಭಾನುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿ ಮಾಡಿ ಅಭಿನಂದಿಸಿದರು. ದೆಹಲಿ ಕರ್ನಾಟಕ ಸಂಘ ನಡೆದು ಬಂದ ದಾರಿ ಮತ್ತು ಈವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಮುಂಬರುವ ಸಂಘದ ಯೋಜನೆಗಳನ್ನು ವಿವರಿಸಿದರು. ಸಂಘವು ರಾಜಧಾನಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ತಮ್ಮ ಎಲ್ಲಾ ಸಹಕಾರ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಜಂಟಿ ಕಾರ್ಯದರ್ಶಿಗಳಾದ ಟಿ.ಪಿ. ಬೆಳ್ಳಿಯಪ್ಪ,  […]

ದೆಹಲಿ ಕರ್ನಾಟಕ ಸಂಘದಿಂದ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ

Tuesday, December 5th, 2017
delhi

ದೆಹಲಿ : ದೆಹಲಿ  ಕರ್ನಾಟಕ ಸಂಘ ಈ ವರ್ಷದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಭಾಷಾ ಬಾಂಧವ್ಯ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯಕಾರ್ಯಕ್ರಮವನ್ನುಇದೇ ಡಿಸೆಂಬರ್  3ರಂದು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆಮಂಗಳೂರಿನ ಎಸ್.ಡಿ.ಎಂ.ಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಶೆಟ್ಟಿಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದೆಹಲಿಯಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದರಂಗಕರ್ಮಿ, ಖ್ಯಾತಚಿತ್ರಕಲಾವಿದ ಶ್ರೀ ಚೆನ್ನುಎಸ್. ಮಠದ, ಖ್ಯಾತ ಹೋಟೆಲುಉದ್ಯಮಿ ಮತ್ತು ಸಮಾಜ ಸೇವಕರಾದಶ್ರೀ ಶೇಖರ್‌ಎನ್. ಬಂಗೇರ, […]

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆ

Saturday, July 20th, 2013
Vasantha shetty

ನವ ದೆಹಲಿ: ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯದ ಕಳಂಜದವರಾದ ವಸಂತ ಶೆಟ್ಟಿ ರಿಯಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ದೆಹಲಿ ಕರ್ನಾಟಕ  ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸುಳ್ಯ ತಾಲೂಕಿನ ಎರಡನೆಯವರಾಗಿದ್ದಾರೆ. ಈ ಮೊದಲು ಡಾ.ಪುರುಷೋತ್ತಮ ಬಿಳಿಮಲೆ ಕೂಡಾ  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿಯದದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಒಟ್ಟಾರೆ 15 ಜನರುಗಳ ಎರಡು ತಂಡಗಳು ಹಾಗೂ ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟು 31 ಜನ ಸ್ಪರ್ಧಿಸಿದ್ದರು. […]