ಸಂಚರಿಸುತ್ತಿದ್ದ ರೈಲಿಗೆ ಗುಡ್ಡ ಕುಸಿತ, ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲಿಗೆ ಹಾನಿ

Sunday, July 18th, 2021
Train

ಪುತ್ತೂರು : ಸಂಚರಿಸುತ್ತಿದ್ದ ರೈಲಿಗೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿ ರೈಲು ಸಂಚಾರ  ಸ್ಥಗಿತಗೊಂಡಿದೆ. ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ-ಏಕಿ ಧರೆ ಕುಸಿದಿದ್ದು, ಮಣ್ಣು ರೈಲಿನ ಮುಂಭಾಗಕ್ಕೆ ಕುಸಿದಿದ್ದು ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಹಳಿಯಲ್ಲಿ ಬಾಕಿಯಾಗಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮುಷ್ಕರದಿಂದ ಅಸ್ತವ್ಯಸ್ತಗೊಂಡ ಜನಜೀವನ

Saturday, September 3rd, 2016
bund

ಬದಿಯಡ್ಕ: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅನೇಕ ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಕರೆ ನೀಡಿದ್ದ ರಾಷ್ಟ್ರೀಯ ಮುಷ್ಕರ ಜಿಲ್ಲೆಯಾದ್ಯಂತ ಯಶಸ್ವಿಯಾಯಿತು. ಗುರುವಾರ ರಾತ್ರಿ ೧೨ರಿಂದ ಆರಂಭಗೊಂಡ ಮುಷ್ಕರ ಶುಕ್ರವಾರ ಸಂಜೆಯವರೆಗೂ ನಡೆಯಿತು. ಮುಷ್ಕರದಿಂದ ಅಂಗಡಿಮುಗ್ಗಟ್ಟು, ಸರಕಾರಿ ಶಾಲಾ ಕಾಲೇಜು, ಕಛೇರಿ, ಹೋಟೆಲ್ ದಿಪೂರ್ತಿ ಮುಚ್ಚಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಉಪ್ಪಳ, ಕೈಕಂಬ, ನಯಾಬಝಾರ್, ಬಂದ್ಯೋಡು, ಕುಂಬಳೆ,ಮಂಜೇಶ್ವರ,ಹೊಸಂಗಡಿ ಸಹಿತ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಕಡೆಗಳ ಸಹಿತ ಪೆರ್ಲ ಪೇಟೆ, ಬದಿಯಡ್ಕ, ನೀರ್ಚಾಲು, ಸೀತಾಂಗೋಳಿ, ಮುಳ್ಳೇರಿಯಾ, ಆದೂರು, ಅಡೂರಪರಿಸರದಲ್ಲಿ ಯಾವುದೇ ಅಂಗಡಿಗಳನ್ನು […]

ನೇತ್ರಾವತಿ ಸೇತುವೆ ಹಳಿ ದ್ವಿಗುಣ ರೈಲು ಸಂಚಾರ ಸಮಯ ಬದಲಾವಣೆ

Wednesday, April 25th, 2012
Netravati Railway Bridge

ಮಂಗಳೂರು : ರೈಲು ಹಳಿ ದ್ವಿಗುಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ನೇತ್ರಾವತಿ ಸೇತುವೆ ಮತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ನಡುವಿನ ರೈಲು ಸಂಚಾರ ವ್ಯವಸ್ಥೆಯನ್ನು ಕೆಲವು ನಿರ್ದಿಷ್ಟ ದಿನಗಳಿಗೆ ವ್ಯತ್ಯಯ ಮಾಡಲಾಗಿದೆ ಎಂದು ರೈಲ್ವೇ ಇಲಾಖೆಯ ಪ್ರಕಟನೆ ತಿಳಿಸಿದೆ. ಕೆಲವು ರೈಲುಗಳ ಪ್ರಯಾಣ ರದ್ದು, ಇನ್ನು ಕೆಲವು ರೈಲುಗಳ ಸಮಯ ಬದಲಾವಣೆ ಹಾಗೂ ಇನ್ನು ಕೆಲವು ರೈಲುಗಳ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಪ್ಯಾಸೆಂಜರ್‌ (ಟ್ರೈನ್‌ ನಂ. 56645) ಮತ್ತು ಸುಬ್ರಹ್ಮಣ್ಯ ರೋಡ್‌- ಮಂಗಳೂರು […]