ಮಂಗಳೂರಿನಲ್ಲಿ ಸಂವಿಧಾನ ದಿನಾಚರಣೆ

Wednesday, November 28th, 2018
advocate

ಮಂಗಳೂರು: ಇಲ್ಲಿನ ವಕೀಲರ ಸಂಘದ ವತಿಯಿಂದ ನಿನ್ನೆ ಮಧ್ಯಾಹ್ನ ವಕೀಲರ ಸಂಘದ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ತಾರಾನಾಥ ಶೆಟ್ಟಿ, ಭಾರತದ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸಿದ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಇದೇ ವೇಳೆ ಕಿರಿಯ ನ್ಯಾಯವಾದಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಳ್ಳಾಲ್, ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ, ಇಸ್ಮಾಯಿಲ್ ಹಾಗೂ ವಕೀಲರ ಸಂಘದ […]

ಮಂಗಳೂರಿನ ಬೀಚ್​ನಲ್ಲಿ ಗ್ಯಾಂಗ್​ ರೇಪ್​ ಪ್ರಕರಣ: ಏಳು ಆರೋಪಿಗಳ ಬಂಧನ

Wednesday, November 28th, 2018
gang-rap

ಮಂಗಳೂರು: ಇಲ್ಲಿನ ತೋಟಬೆಂಗ್ರೆಯಲ್ಲಿ ಬೀಚಿಗೆ ವಿಹಾರಕ್ಕೆ ಗೆಳೆಯನೊಂದಿಗೆ ಬಂದ ಯುವತಿಯನ್ನು ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬಂಧಿತ ಏಳು ಮಂದಿಯಲ್ಲಿ ಮೂವರು ಅಪ್ರಾಪ್ತರಾಗಿದ್ದು, ನಾಲ್ಕು ಜನ ವಯಸ್ಕರಾಗಿದ್ದಾರೆ. ಪ್ರಜ್ವಲ್ (25), ಆದಿತ್ಯ (22), ಅರುಣ್ (25) ಮತ್ತು ಅಬ್ದುಲ್ ರಿಯಾಜ್ (35) ಬಂಧಿತ ವಯಸ್ಕರು ಎಂದು ಮಂಗಳೂರು ನಗರ ಪೊಲೀಸ್ ‌ಕಮೀಷನರ್ ಟಿ.ಆರ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಉಳಿದ ಮೂವರು ಅಪ್ರಾಪ್ತರಾಗಿದ್ದಾರೆ. ಶಂಕೆಯ ಮೇಲೆ ಇನ್ನೋರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆತನ ವಿಚಾರಣೆ […]

ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು..!

Wednesday, November 28th, 2018
accident

ಮಂಗಳೂರು: ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ. ಕೂಳೂರು ನಿವಾಸಿ ಭೋಜ (45) ಮೃತಪಟ್ಟವರು. ಮೃತರು ನಗರದಲ್ಲಿ ಹಲವಾರು ವರ್ಷಗಳಿಂದ ಇಲೆಕ್ಟ್ರಿಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೂಳೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೋಜರವರ ಮೇಲೆಯೇ ಹರಿದು ಹೋಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ […]

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ‌ ಕೆಲಸವನ್ನು ಕೇಂದ್ರ ಸರ್ಕಾರದ ಪ್ರತಿನಿಧಿ ಮಾಡುತ್ತಿದ್ದಾರೆ: ರಮಾನಾಥ ರೈ

Wednesday, November 28th, 2018
ramanatha

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರ ಮತ್ತು ಲೋಕಸಭೆ ಚುನಾಯಿತ ಜನಪ್ರತಿನಿಧಿ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದರು. ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಇರುವಾಗ ಈ ಯೋಜನೆ ಪ್ರಾರಂಭವಾಗಿದ್ದು, ಎಲ್ಎನ್ಟಿ ಗುತ್ತಿಗೆದಾರ ಕಂಪೆನಿಯು ಈ ಕಾಮಗಾರಿಯನ್ನು ವಹಿಸಿಕೊಂಡಿತ್ತು. ರಸ್ತೆ ರಚನೆ ಮಾಡುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಭೂಸ್ವಾಧೀನ‌ […]

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪದಕ ಪಡೆದ ಮಂಗಳೂರಿನ ಕರಾಟೆ ಪಟುಗಳು

Tuesday, November 27th, 2018
karate

ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 16 ಚಿನ್ನ, 22 ಬೆಳ್ಳಿ, 21 ಕಂಚಿನ ಪದಕ ಪಡೆದ ಕರಾಟೆ ಪಟುಗಳು ಬಜಾಲಿನ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಾಗು ಜಪ್ಪಿನ ಮೊಗೇರಿನ ಬಂಟರ ಸಂಘದಲ್ಲಿ ಕರಾಟೆ ತರಬೇತು ಪಡೆಯುತ್ತಿದ್ದಾರೆ. ಪದಕ ಪಡೆದವರಲ್ಲಿ ಅಧಿತಿ 1ಬೆಳ್ಳಿ, ನಿಹಾರಿಕಾ 3 ಬೆಳ್ಳಿ, ಗ್ರೀಷ್ಮಾ 1 ಚಿನ್ನ, ಮಾನ್ವಿತಾ 1 ಚಿನ್ನ, ಅನ್ವಿತಾ 1 ಬೆಳ್ಳಿ,1 […]

ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ ಬಿಡುಗಡೆ

Tuesday, November 27th, 2018
manglore

ಮಂಗಳೂರು: ವೇದ ವಿಧಿತವಾದ ಸಹಸ್ರನಾಮಗಳಿಗೆ ಮೂಲವೇ ಬೃಹತೀ ಸಹಸ್ರಮ್. ಸ್ವರ ಸಹಿತವಾಗಿ ‌ಉಚ್ಚರಿಸಲು ಅನುಕೂಲ ವಾಗುವಂತೆ ರಚಿಸಿ, ಸ್ವತಃ ಯಾಗದಲ್ಲಿ‌ ಇದನ್ನು ಪ್ರಯೋಗಿಸಿ ಯಶಸ್ಸು ಕಂಡ ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ‌ ಅವರ‌ ಅನನ್ಯ ಸಾಧನೆಯ ದ್ಯೋತಕ‌ ಎಂಬುದಾಗಿ ಕಾಣಿಯೂರು ಮಠದ ಯತಿವರ್ಯರಾದ ಶ್ರೀ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜೀ ಯವರು ಶ್ಲಾಘಿಸಿ ಕೃತಿ ಲೋಕಾರ್ಪಣೆಗೈದು ಆಶೀರ್ವದಿಸಿದರು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಂದ್ರಿ ಕಂಬ್ಳ ಮಂಜುಪ್ರಸಾದದ ವಾದಿರಾಜ ಮಂಟಪದಲ್ಲಿಕೃತಿ ಬಿಡುಗಡೆಗೊಂಡಿತು. ಕೃತಿ ಪರಿಚಯ ಗೈದ ವಿದ್ವಾಂಸಕಲ್ಯ […]

ಟಿಆರ್​ಎಸ್​ ಹಾಗೂ ಕಾಂಗ್ರೆಸ್​ ಫ್ರೆಂಡ್ಲಿ ಮ್ಯಾಚ್​ ಆಡುತ್ತಿವೆ: ನರೇಂದ್ರ ಮೋದಿ

Tuesday, November 27th, 2018
narendra-modi

ನಿಜಾಮಾಬಾದ್: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹಾಗೂ ಕಾಂಗ್ರೆಸ್ ಫ್ರೆಂಡ್ಲಿ ಮ್ಯಾಚ್ ಆಡುತ್ತಿವೆ. ಎರಡೂ ಪಕ್ಷಗಳು ಕುಟುಂಬ ಆಳ್ವಿಕೆಯಲ್ಲಿವೆ. ಹಾಗಾಗಿ ಅವು ಅಭಿವೃದ್ಧಿಗೆ ಪೂರಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ನಿಜಾಮಾಬಾದ್ನಲ್ಲಿ ನಡೆದ ಬಿಜೆಪಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಟಿಆರ್ಎಸ್ ಒಂದೇ ನಾಣ್ಯದ ಎರಡು ಮುಖಗಳಿಂದ್ದಂತೆ. ಎರಡೂ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಅವೆರಡರ ಸಿದ್ಧಾಂತಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಪ್ರಧಾನಿ ಕುಟುಕಿದರು. ಇಲ್ಲಿನ ಮುಖ್ಯಮಂತ್ರಿ […]

ಜನಾರ್ದನ ಪೂಜಾರಿಗೆ ಅನಾರೋಗ್ಯ ವದಂತಿ: ಸುಳ್ಳು ಸುದ್ದಿ ಹರಿಡಿದವರ ವಿರುದ್ಧ ದೂರು

Tuesday, November 27th, 2018
janardhan-poojary

ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತೀವ್ರ ಅನಾರೋಗ್ಯದಲ್ಲಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಎಂದು ಸುಳ್ಳು ಸಂದೇಶ ಹರಡಿದವರ ವಿರುದ್ಧ, ಬಂಟ್ವಾಳ ನಗರ ಠಾಣೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ದೂರು ನೀಡಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗಕ್ಕೀಡಾಗಿರುವ ಜನಾರ್ದನ ಪೂಜಾರಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುಳ್ಳು ಸಂದೇಶ ಹರಡುತ್ತಿದ್ದಾರೆ. ಇದರ ಹಿಂದಿರುವ ಆರೋಪಿಳನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಜನಾರ್ದನ ಪೂಜಾರಿ ಆರೋಗ್ಯವಾಗಿದ್ದು ಬಂಟ್ವಾಳದ ಸ್ವಗೃಹದಲ್ಲಿ […]

ಮಂಡ್ಯದಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಮರು ರಿಲೀಸ್​..!

Tuesday, November 27th, 2018
ambarish

ಮಂಡ್ಯ: ಸೋಮವಾರ ಮಂಡ್ಯದ ಗಂಡು ಪಂಚಭೂತಗಳಲ್ಲಿ ಲೀನರಾದರು. ಅವರ ಅಗಲಿಕೆಯಿಂದ ಸ್ಯಾಂಡಲ್ವುಡ್ ಮಾತ್ರವಲ್ಲದೆ ಸಕ್ಕರೆ ನಾಡಿಗೂ ಸಹ ಅನಾಥ ಪ್ರಜ್ಞೆ ಕಾಡುತ್ತಿದೆ. ಈ ನಡುವೆ ಕರುನಾಡ ಕರ್ಣ ಅಂಬಿಯನ್ನು ಮತ್ತೆ ಇಂದು ತೆರೆಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಹೌದು, ಅಂಬರೀಶ್ ಅಭಿಮಾನಿಗಳ ಒತ್ತಾಯದ ಮೇರೆಗೆ ಮಂಡ್ಯದಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ಮರು ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಮಂಡ್ಯದ ಸಂಜಯ್ ಚಿತ್ರಮಂದಿರದಲ್ಲಿ ಇಂದಿನಿಂದ ಚಿತ್ರವನ್ನು ಮರು ರಿಲೀಸ್ ಮಾಡಲು ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರೆ. ಅಲ್ಲದೆ ಇದರಿಂದ ಬರುವ […]

ಹಾಸನದ ಜೆಡಿಎಸ್ ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ನಿಧನ

Tuesday, November 27th, 2018
prakash

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಎಚ್‌.ಎಸ್. ಪ್ರಕಾಶ್(67) ಮಂಗಳವಾರ ಹೃದಯಾಘಾತದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಮೃತರು, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ, 67 ವರ್ಷದ ಎಚ್‌ಎಸ್ ಪ್ರಕಾಶ್ ಅವರ ಪೂರ್ಣ ಹೆಸರು ಹಾಸನ ಸಣ್ಣಯ್ಯ ಪ್ರಕಾಶ್, 1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಕಾಶ್ 1999ರಲ್ಲಿ ಸೋಲು ಅನುಭವಿಸಿದ್ದರು. ನಂತರ 2004,2008,2013ರಲ್ಲಿ ಸತತ ಹ್ಯಾಟ್ರಿಕ್ ಬಾರಿಸಿದ್ದ ಪ್ರಕಾಶ್, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರೀತಂ […]