ಹೊಸ ವರ್ಷದ ಶುಭಾರಂಭ : ಧರ್ಮಸ್ಥಳದಲ್ಲಿ ಭಕ್ತರ ಗಡಣ

Wednesday, January 1st, 2020
ujire

ಉಜಿರೆ : ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವ ಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರದರ್ಶನ ಪಡೆದು ಸೇವೆ ಸಲ್ಲಿಸಿದರು. ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮಸೇವೆ ಸಲ್ಲಿಸಿದ್ದಾರೆ. ಅನೇಕ ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ […]

ಆರ್‌ಎಂಎಸ್‌ಎ ನೂತನ ಕಟ್ಟಡ ಹಾಗೂ ಎನ್‌ಎಸ್‌ಎಸ್ ಘಟಕ ಉದ್ಘಾಟನೆ

Friday, December 27th, 2019
NSS

ಮಡಿಕೇರಿ : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ನೂತನ ಕಟ್ಟಡ ಹಾಗೂ ಸಭಾಂಗಣ ಉದ್ಘಾಟನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ಘಟಕದ ಉದ್ಘಾಟನಾ ಸಮಾರಂಭವು ಗುರುವಾರ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳುತ್ತಾ ಸಮಾಜ […]

ಮಂಗಳೂರು : ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಸಭೆ ನಡೆಯಲಿದೆ; ಎಂ.ಬಿ.ಪುರಾಣಿಕ್

Tuesday, December 24th, 2019
vishwa-parishath

ಮಂಗಳೂರು : ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಘ ನಿಕೇತನದಲ್ಲಿ ಡಿ. 25ರಿಂದ 27ರವರೆಗೆ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಸಭೆ ನಡೆಯಲಿದೆ ಎಂದು ರಾಜ್ಯದ ವಿಎಚ್ ಪಿ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಮಾವೇಶದಲ್ಲಿ 27 ರಾಷ್ಟ್ರಗಳ 350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಘ ನಿಕೇತನದಲ್ಲಿ ನಡೆಯಲಿರುವ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಬಿ.ಪುರಾಣಿಕ್ […]

ನಕಲಿ ಚಾಕಲೇಟ್ ಮಾರಾಟದ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

Monday, December 23rd, 2019
chocolate

ಮಡಿಕೇರಿ : ಕೊಡಗು ಜಿಲ್ಲೆಯ ಕೆಲವು ಪ್ರವಾಸಿ ಕೇಂದ್ರಗಳು ಮತ್ತು ಹೆದ್ದಾರಿ ಬದಿಯಲ್ಲಿ ತಲೆ ಎತ್ತಿರುವ ಸ್ಪೈಸಸ್ ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಹೋಂಮೇಡ್ ಚಾಕಲೇಟ್ ಹೆಸರಿನಲ್ಲಿ ನಕಲಿ ಚಾಕಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿವೆ. ನಕಲಿ ಚಾಕಲೇಟ್ ಮತ್ತು ಆಹಾರ ಪದಾರ್ಥಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದ್ದು, ಆಹಾರ ಮಾರಾಟದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆ […]

ಮಂಗಳೂರು ಹಿಂಸಾಚಾರದಲ್ಲಿ ಪೊಲೀಸರು ಸುಮ್ಮನಿರುತ್ತಿದ್ದರೆ ಹಲವರ ಸಾವು ಸಂಭವಿಸುತ್ತಿತ್ತು

Sunday, December 22nd, 2019
lati charge

ಮಂಗಳೂರು : ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸ್ಟೇಟ್ ಬ್ಯಾಂಕ್ ಬಳಿ ಒಂದು ಕೆಎಸ್ ಆರ್ ಪಿ ಬಸ್ ಮಾತ್ರ ಇತ್ತು ಅದರಲ್ಲಿ ಸೀಮಿತ ಸಿಬ್ಬಂದಿಗಳು ಇದ್ದರು ಜತೆಗೆ ಮಂಗಳೂರು ದಕ್ಷಿಣ ಠಾಣೆಯ ಕರ್ತವ್ಯ ನಿರತ ಅಧಿಕಾರಿಗಳು ಇದ್ದರು, ಅಲ್ಲಿ ಕೆಲವು ಮುಸ್ಲಿಂ ಬಾಂಧವರು ಗುಂಪು ಸೇರಿದ್ದರು. ಪೊಲೀಸರು ಅವರಿಗೆ ನಿಷೇದಾಜ್ಞೆಯನ್ನು ಮನವರಿಕೆ ಮಾಡಿದ್ದರು. ಸ್ವಲ್ಪ ಹೊತ್ತಿನ ನಂತರ ಸುಮಾರು 100 ರಷ್ಟು ಯುವಕರ ಗುಂಪು ಸೇರಿ ಘೋಷಣೆ ಕೂಗ ತೊಡಗಿದರು ಅವರು ನಿಷೇದಾಜ್ಞೆಯ ನಡುವೆಯೂ ಪೊಲೀಸರನ್ನು […]

ಮಂಗಳೂರು ನಗರದಲ್ಲಿ ಡಿಸೆಂಬರ್ 20 ಶಾಲಾ ಕಾಲೇಜುಗಳಿಗೆ ರಜೆ, ಡಿಸೆಂಬರ್ 22ರ ಮಧ್ಯರಾತ್ರಿ ವರೆಗೆ ಕರ್ಫ್ಯೂ

Thursday, December 19th, 2019
lati Charge

ಮಂಗಳೂರು : ಮಂಗಳೂರು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರದಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಡಿಸೆಂಬರ್ 22ರ ಮಧ್ಯರಾತ್ರಿ ವರೆಗೆ ಕರ್ಫ್ಯೂ ಜಾರಿಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರೇಟ್ ತಿಳಿಸಿದೆ. ಡಿಸೆಂಬರ್ 19 ಗುರುವಾರದಂದು ಮಂಗಳೂರಲ್ಲಿ ಗುಂಪೊಂದು ಪೊಲೀಸರ ಮೇಲೆ ಹಿಂಸಾಚಾರ ನಡೆಸಿದ  ಹಿನ್ನಲೆಯಲ್ಲಿ ನಗರದಲ್ಲಿ ಇನ್ನಷ್ಟು ಗಲಭೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ  ಮಂಗಳೂರಿನಲ್ಲಿ ಈ ಕಾಯ್ದೆಗೆ ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ನಡುವೆ ದಕ್ಷಿಣ ಕನ್ನಡ […]

ಕನ್ಯಾ ರಾಶಿಯವರಿಗೆ ಈ ದಿನ ಅಪರಿಚಿತರಿಂದ ಸಮಸ್ಯೆ ಬರಬಹುದು

Wednesday, December 18th, 2019
MahaVishnu

ಶ್ರೀ ಮಹಾ ವಿಷ್ಣು ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಮಾಸ ನಕ್ಷತ್ರ : ಪೂರ್ವ ಫಾಲ್ಗುಣಿ ಋತು : ಹೇಮಂತ ರಾಹುಕಾಲ 12:20 – 13:45 ಗುಳಿಕ ಕಾಲ 10:55 -12:20 ಸೂರ್ಯೋದಯ 06:38:52 ಸೂರ್ಯಾಸ್ತ 17:00:55 ತಿಥಿ : ಸಪ್ತಮಿ ಪಕ್ಷ : ಕೃಷ್ಣ ಮೇಷ ರಾಶಿ ಪ್ರವಾಸದ ಅನುಭವದಿಂದ ಮನಸ್ಸು ಪ್ರಶಾಂತವಾಗಿರುತ್ತದೆ. […]

ಮಡಿಕೇರಿ ಗೌಡ ಸಮಾಜದಲ್ಲಿ ’ಹುತ್ತರಿ’ ಸಂಭ್ರಮ

Thursday, December 12th, 2019
Madikeri-Gowda-Samaja

ಮಡಿಕೇರಿ :ನಗರದ ಗೌಡ ನಾಗರಿಕ ಹುತ್ತರಿ ಸಮಿತಿ ವತಿಯಿಂದ 11ನೇ ವರ್ಷದ ಹುತ್ತರಿ ಹಬ್ಬವನ್ನು ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ ಅವರ ಮುಂದಾಳತ್ವದಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಐದು ವಿದಧ ಎಲೆಗಳಿಂದ ನೆರೆ ಕಟ್ಟಿ, ನಿಗದಿತ ಮುಹೂರ್ತದಲ್ಲಿ ಪ್ರಮುಖರಾದ ಪೊನ್ನಚ್ಚನ ಮಧು ಸೋಮಣ್ಣ ಕದಿರು ಕೊಯ್ದು ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡರು. ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಪಾಣತ್ತಲೆ ಬಿದ್ದಪ್ಪ, ಕಾರ್ಯದರ್ಶಿ ನಡುಮನೆ ಕಾರ್ಯಪ್ಪ, ಖಜಾಂಚಿ ಪೊನ್ನಚ್ಚನ […]

ಮೈಸೂರು : ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವು

Thursday, December 12th, 2019
mysuru

ಮೈಸೂರು : ವಿದ್ಯುತ್ ತಂತಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕು ಜೀರಿಯಾ ಬಳಿ ಬುಧವಾರ ರಾತ್ರಿ ನಡೆದಿದೆ. ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಜೀರಿಯಾ ಗ್ರಾಮದಲ್ಲಿ ರೈತರೊಬ್ಬರು ಅಕ್ರಮವಾಗಿ ನೀರಿನ ಪಂಪ್ ಸೆಟ್ ಗೆ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಿದ್ದರು ಎನ್ನಲಾಗಿದೆ. ಆಹಾರವನ್ನು ಅರಸಿ ನಾಡಿಗೆ ಬಂದಿರುವ ಚಿರತೆಯೊಂದು ಬಾಯಿಯಲ್ಲಿ ವಿದ್ಯುತ್ ತಂತಿಯನ್ನು ಕಚ್ಚಿಕೊಂಡಿರುವ ಸ್ಥಿತಿಯಲ್ಲಿಯೇ ಜೋತಾಡುತ್ತಾ ಅಸು ನೀಗಿದೆ. ಸುದ್ದಿ ತಿಳಿಯುತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಗರಹೊಳೆ‌ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ […]

ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ : ಹಸು ಬಲಿ

Wednesday, December 11th, 2019
Kodagu

ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಅಧಿಕಗೊಂಡಿದ್ದು, ಮತ್ತೊಂದು ಹಸು ಹುಲಿ ದಾಳಿಗೆ ಬಲಿಯಾಗಿದೆ ವೀರಾಜಪೇಟೆ ತಾಲೂಕಿನ ನಿಟ್ಟೂರು ಕಾರ್ಮಾಡು ಗ್ರಾಮದ ಕೊಟ್ಟಂಗಡ ಮಧು ಅವರ ಕೊಟ್ಟಿಗೆಗೆ ಬೆಳಗ್ಗೆ5.30ರ ಸುಮಾರಿಗೆ ದಾಳಿ ಮಾಡಿದ ಹುಲಿ, ಕೊಟ್ಟಿಗೆಯಲ್ಲಿದ್ದ ಹಸುವನ್ನು ಕಚ್ಚಿ ಸ್ವಲ್ಪ ದೂರ ಸಾಗಿದೆ. ನಂತರ ಮನೆಯವರ ಕೂಗಾಟ ಕೇಳಿ ಅದನ್ನು ಅಲ್ಲೇ ಬಿಟ್ಟು ತೆರಳಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಮತ್ತೊಂದೆಡೆ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಐದು […]