ಭಾರತದಿಂದ ಪಲಾಯನಗೈದ ನಿತ್ಯಾನಂದನಿಂದ ಹೊಸ ದೇಶ ‘ಕೈಲಾಸ’ ಸ್ಥಾಪನೆ

Wednesday, December 4th, 2019
Nithyanand

ನವದೆಹಲಿ : ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇತ್ತೀಚೆಗೆ ಭಾರತದಿಂದ ಪರಾರಿಯಾದ ಬಳಿಕ ಇಕ್ವೆಡಾರ್‌ ನಲ್ಲಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ತನ್ನ ‘ಸ್ವಂತ ದೇಶ’ ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ. ಇಕ್ವೆಡಾರ್‌ ನಲ್ಲಿ ಖರೀದಿಸಿರುವ ದ್ವೀಪಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿರುವ ನಿತ್ಯಾನಂದ, ಇಲ್ಲಿ ತನ್ನ ಸ್ವಂತ ದೇಶವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈ ರಾಷ್ಟ್ರಕ್ಕೆ ಪ್ರಧಾನಿ ನೇತೃತ್ವದ ಸಚಿವ ಸಂಪುಟವನ್ನು ನೇಮಿಸಿದ್ದು ರಾಷ್ಟ್ರದ ಧ್ವಜ, ಪಾಸ್ ಪೋರ್ಟ್ ಹಾಗೂ ಲಾಂಛನದ ವಿನ್ಯಾಸ ಈಗಾಗಲೇ ಸಿದ್ಧವಾಗಿದೆ […]

105 ದಿನಗಳ ಜೈಲುವಾಸ ಅಂತ್ಯ : ಪಿ.ಚಿದಂಬರಂ ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು

Wednesday, December 4th, 2019
Chidambaram

ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 105 ದಿನಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾ.ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಚಿದಂಬರಂಗೆ ಷರತ್ತು ಬದ್ಧ ಜಾಮೀನು ನೀಡಿದೆ. ಸಾರ್ವಜನಿಕ ಹೇಳಿಕೆ, ಸಂದರ್ಶನ ನೀಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪಾಸ್ ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಬೇಕು, ಇಬ್ಬರ ಶ್ಯೂರಿಟಿ ಹಾಗೂ 2 ಲಕ್ಷ […]

70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಯುವಕ

Tuesday, December 3rd, 2019
Ram-Kishan

ಲಕ್ನೋ : ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಹೈದರಾಬಾದ್ ನ ಪಶುವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಸೋಮವಾರ ಕರ್ನಾಟಕದಲ್ಲಿ ಎಂಟು ವರ್ಷದ ಬಾಲಕಿ ಇಂತಹ ಕೃತ್ಯಕ್ಕೆ ಬಲಿಯಾಗಿದ್ದಳು. ಆದರೆ ಉತ್ತರ ಪ್ರದೇಶದಲ್ಲಿ ಯುವಕನೊಬ್ಬ 70 ವರ್ಷದ ವೃದ್ಧೆಯನ್ನು ಅತ್ಯಾಚಾರವೆಸಗಿ ಪೊಲೀಸರ ಅತಿಥಿಯಾಗಿದ್ದಾನೆ. ಉತ್ತರ ಪ್ರದೇಶ ರಾಜ್ಯದ ಸೋನ್ ಭದ್ರಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪ್ರಕರಣ ಕಳೆದ ರವಿವಾರ ನಡೆದಿದ್ದು, ಈಗಷ್ಟೇ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿ ರಾಮ್ ಕಿಶನ್ ನನ್ನು ಪೊಲೀಸರು […]

ಇನ್ನು ಮುಂದೆ ಒಬ್ಬರು ಒಂದೇ ಸುಡು ಆಯುಧ ಹೊಂದಲು ಅವಕಾಶ

Tuesday, December 3rd, 2019
bandooku

ನವದೆಹಲಿ : ಇನ್ನು ಮುಂದಕ್ಕೆ ದೇಶದಲ್ಲಿ ಓರ್ವ ವ್ಯಕ್ತಿ ಒಂದೇ ಸುಡು ಆಯುಧವನ್ನು ಹೊಂದುವುದು ಮಾತ್ರ ಸಾದ್ಯವಿದೆ. ಈತನಕ ಈಗಿರುವ ಕಾನೂನಿನ ಪ್ರಕಾರ ಓರ್ವ ವ್ಯಕ್ತಿ ಮೂರು ಆಯುಧಗಳನ್ನು ಹೊಂದಲು ಅವಕಾಶವಿತ್ತು. ಆದರೆ ಕಳೆದ ವಾರವಷ್ಟೇ ಕೇಂದ್ರ ಸಚಿವ ಸಂಪುಟ 60 ವರ್ಷಗಳಷ್ಟು ಹಳೆಯದಾದ 2019 ರ ಶಸ್ತ್ರಾಸ್ತ್ರ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿರುವುದರಿಂದ ಪ್ರತಿ ವ್ಯಕ್ತಿಗೆ ಅಸ್ತಿತ್ವದಲ್ಲಿರುವ ಮೂರು ಶಸ್ತ್ರಾಸ್ತ್ರಗಳಿಗೆ ಬದಲಾಗಿ ಪರವಾನಗಿ ಪಡೆದ ಬಂದೂಕನ್ನು ಒಂದಕ್ಕೆ ನಿರ್ಬಂಧಿಸಲು ಮತ್ತು ಈಗಿನ ಮೂರು ವರ್ಷಗಳ ಬದಲು […]

ಜೊತೆಯಾಗಿ ಕೆಲಸ ಮಾಡುವ ಪ್ರಧಾನಿ ಮೋದಿ ಪ್ರಸ್ತಾಪವನ್ನು ತಿರಸ್ಕರಿಸಿದ ಶರದ್ ಪವಾರ್

Tuesday, December 3rd, 2019
Modi

ಮುಂಬೈ : ಭಾರತದ ಪ್ರಧಾನಿ ಮೋದಿ ಅವರು ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಾನು ಅವರ ಪ್ರಸ್ತಾಪವನ್ನು ತಿರಸ್ಕಾರ ಮಾಡಿದೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಮೋದಿ ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಮ್ಮ ವೈಯಕ್ತಿಕ ಜೀವನದಲ್ಲಿ ನಮ್ಮಿಂಬ್ಬರ ಸಂಬಂಧ ಚೆನ್ನಾಗಿದೆ. ಅದು ಹಾಗೆಯೇ ಇರುತ್ತದೆ. ಆದರೆ ನಾವು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಪವಾರ್ […]

ತಮಿಳುನಾಡಿನಲ್ಲಿ ಧಾರಾಕಾರ ಮಳೆಗೆ 17 ಮಂದಿ ಬಲಿ

Monday, December 2nd, 2019
chennai

ಚೆನ್ನೈ : ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಸುಮಾರು 17 ಮಂದಿ ಮೃತಪಟ್ಟ ಘಟನೆ ಮೆಟ್ಟುಪಾಳಯಂನ ನಡೂರ್ ಗ್ರಾಮ ಹಾಗೂ ಅದರ ಆಸುಪಾಸಿನಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಗುರು(45), ರಾಮ್ನಾಥ್(20), ಆನಂದ್ ಕುಮಾರ್(40), ಹರಿಸುಧ(16), ಶಿವಕಾಮಿ(45), ಓವಿಯಮ್ಮಳ್(50), ನಾಥಿಯಾ(30), ವೈದೇಹಿ(40), ತಿಲಕವತಿ(50), ಅರುಕಾನಿ(55), ರುಕ್ಮಿಣಿ(40), ನಿವೇತ(18), ಚಿನ್ನಮ್ಮಳ್(70), ಅಕ್ಷಯ(7) ಹಾಗೂ ಲೊಗುರಂ(7) ಎಂಬುದಾಗಿ ಗುರುತಿಸಲಾಗಿದೆ. ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಘಟನೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ […]

4 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ : ಯುವಕನನ್ನು ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ

Monday, December 2nd, 2019
Nagpur

ನಾಗ್ಪುರ್ : ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ 35 ವರ್ಷದ ಯುವಕನನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರ ನಾಗ್ಪುರದ ಪಾರ್ಡಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಜವಾಹರ್ ವೈದ್ಯನನ್ನು ಹಿಡಿದು ಥಳಿಸಿದ್ದ ಸ್ಥಳೀಯರು ನಂತರ ಆತನ ಎರಡು ಕೈಗಳನ್ನು ಕಟ್ಟಿಹಾಕಿ, ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿರುವುದಾಗಿ ವರದಿ ವಿವರಿಸಿದೆ. ಜವಾಹರ್ ನಗರದಲ್ಲಿರುವ ಕೋ-ಆಪರೇಟಿವ್ ಸೊಸೈಟಿಯ ಪಿಗ್ಮಿ ಕಲೆಕ್ಷನ್ […]

ಗೋಡ್ಸೆ ದೇಶಭಕ್ತ ಹೇಳಿಕೆಗೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕ್ಷಮೆಯಾಚನೆ

Friday, November 29th, 2019
Prajna-takur

ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕ್ಷಮೆ ಕೋರಿದ್ದಾರೆ. ಇಂದು ಸದನದ ಕಲಾಪದ ಸಮಯದಲ್ಲಿ ಮಾತನಾಡಿದ ಪ್ರಜ್ಞಾ ಠಾಕೂರ್, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ವಿಶ್ಲೇಷಿಸಿದ್ದಾರೆ. ಇದು ಖಂಡನೀಯ ಎಂದರು. ಪ್ರಜ್ಞಾ ಸಿಂಗ್ ಅವರ ಈ ಹೇಳಿಕೆಯನ್ನು ಖಂಡಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಭಾರಿ ಗದ್ದಲ ಉಂಟು ಮಾಡಿದ್ದವು. ಪ್ರಜ್ಞಾ ಅವರ ಹೇಳಿಕೆಯನ್ನು […]

ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಜೀವಂತ ಸುಟ್ಟ ದುಷ್ಕರ್ಮಿಗಳು

Friday, November 29th, 2019
Priyanka

ಹೈದರಾಬಾದ್ : ಪಶುವೈದ್ಯೆಯೊಬ್ಬರ ಮೆಲೆ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಜೀವಂತ ಸುಟ್ಟುಹಾಕಿರುವ ಬೀಭತ್ಸ ಘಟನೆ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಬಳಿಕ ಕೊಲೆಯಾದ ಮಹಿಳೆ 27 ವರ್ಷದ ಪ್ರಿಯಾಂಕ ರೆಡ್ಡಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪ್ರಿಯಾಂಕ ಅವರು ತನ್ನ ಕ್ಲಿನಿಕ್ ನಿಂದ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಹೈದರಾಬಾದ್ ನಗರದ ಹೊರವಲಯದಲ್ಲಿರುವ ತೊಂಡುಪಲ್ಲಿ ಟೋಲ್ ಪ್ಲಾಝಾದ ಬಳಿ ತಲುಪಿತ್ತದ್ದಂತೆಯೇ ಅವರ ಸ್ಕೂಟರ್ ನ ಟಯರ್ ಪಂಕ್ಚರ್ ಆಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಪ್ರಿಯಾಂಕ ಅವರು […]

ಜಪಾನ್ ನ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ

Friday, November 29th, 2019
Emfal

ಇಂಫಾಲ್ : ಜಪಾನ್ ದೇಶದ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ ತಿಂಗಳ ಮಧ್ಯದಲ್ಲಿ ಇಂಫಾಲ್ ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ನಡುವಿನ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂಫಾಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಇಂಫಾಲ್ ಯುದ್ಧದ 75 ವರ್ಷದ ಸ್ಮರಣೆಯ ಹಿನ್ನಲೆಯಲ್ಲಿ ಇಲ್ಲಿನ ಶಾಂತಿ ಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲ್ […]