ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ ಕುಮಾರ ಕಲ್ಕೂರ ರಿಗೆ ಸನ್ಮಾನ

Monday, September 20th, 2021
Kalkura

ಬೆಂಗಳೂರು  : ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆಯಲ್ಲೇ ಪ್ರಪ್ರಥಮವಾಗಿ ಸತತ 5 ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಮರ್ಥ ಸೇವೆ ಸಲ್ಲಿಸುವ ಮೂಲಕ ಸರ್ವತ್ರ ಶ್ಲಾಘನೆಗೆ ಪಾತ್ರರಾದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬೆಂಗಳೂರಿನ ವಿದ್ಯಾಪೀಠದಲ್ಲಿ ತಮ್ಮ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಕಲೆ, ಸಾಹಿತ್ಯ, ನಾಡು-ನುಡಿ, ರಾಷ್ಟ್ರಧರ್ಮವನ್ನು ಪಾಲಿಸುವ ಮೂಲಕ ಕನ್ನಡದ ಕಾಯಕದಲ್ಲಿ […]

ದುಷ್ಕರ್ಮಿಯಿಂದ ಮೂವರು ಮಹಿಳೆಯರ ಮೇಲೆ ತಲವಾರು ದಾಳಿ, ಓರ್ವ ಮಹಿಳೆ ಗಂಭೀರ

Monday, September 20th, 2021
jail-road-assult

ಮಂಗಳೂರು : ನಗರದ ಜೈಲ್ ಬಳಿಯ ಡಯಟ್ ಸಂಸ್ಥೆಯ ಒಳಗೆ ನುಗ್ಗಿದ ದುಷ್ಕರ್ಮಿಯೋರ್ವ ಮೂವರು ಮಹಿಳೆಯರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದವರನ್ನು ರೀನ, ಗುಣವತಿ, ನಿರ್ಮಲ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲವಾರು ಮಾದರಿಯ ಆಯುಧದಿಂದ ಏಕಾಏಕಿಯಾಗಿ ಸಂಸ್ಥೆಯೊಳಗೆ ನುಗ್ಗಿದ ವ್ಯಕ್ತಿ ಹಲ್ಲೆ ನಡೆಸಿದ್ದು, ನಿರ್ಮಲ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ತಿಳಿಸಿದ್ದಾರೆ.  

ಮಂಗಳೂರು ವೆಂಕಟರಮಣ ದೇವಳದಲ್ಲಿ ” ಅನಂತ ಚತುರ್ದಶಿ ” ಆಚರಣೆ

Sunday, September 19th, 2021
venkatramana temple

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ” ಅನಂತ ಚತುರ್ದಶಿ ” ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರಗೊಳಿಸಿ , ಅನಂತ ಕಲಶ ಪ್ರತಿಷ್ಠಾಪಿಸಿ ಪೂಜೆ ನಡೆಯಿತು . ಅಲಂಕಾರ ಪ್ರಿಯ ಶ್ರೀ ಮಹಾವಿಷ್ಣು ದೇವರ ಪ್ರೀತ್ಯರ್ಥ ಶ್ರೀದೇವರಿಗೆ ದೇವಳದ ಅರ್ಚಕರಿಂದ ವಿಶೇಷ ಪೂಜೆ ಪುರಸ್ಕಾರಗಳು ನಡೆದವು . ಶ್ರೀ ದೇವಳದ ಮೊಕ್ತೇಸರರಾದ ಶ್ರೀ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ […]

ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ ಎಂಬ ಶಬ್ದ ಬಳಕೆ ಮಾಡಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ : ಧರ್ಮೇಂದ್ರ

Sunday, September 19th, 2021
Dharmendra

ಮಂಗಳೂರು : “ನಾವು ಗಾಂಧಿಯನ್ನೇ ಬಿಟ್ಟಿಲ್ಲ ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ. ಹಿಂದೂಗಳ ಮೇಲೆ ದಾಳಿ ಆದಾಗ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನಿಮ್ಮನ್ನು ಬಿಡುತ್ತೇವಾ?. ಬಿಜೆಪಿ ಒಂದು ಬೆನ್ನುಮೂಳೆ ಇಲ್ಲದ ಸರ್ಕಾರ. ಇವರಿಗಿಂತ ತಾಲಿಬಾನ್‌‌ಗಳು ವಾಸಿ. ಇವರ ಸರ್ಕಾರ ತಾಲಿಬಾನ್‌‌ಗಳಿಗಿಂತ ಕೀಳು” ಎಂದಿದ್ದ  ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ  ಕ್ಷಮೆಯಾಚಿಸಿದ್ದಾರೆ. “ಸುದ್ದಿಗೋಷ್ಠಿಯಲ್ಲಿ ಗಾಂಧೀಜಿ ಅವರ ಹಿಂದುತ್ವದ ವಿರೋಧ ನೀತಿ ಬಗ್ಗೆ ನಾನು ಮಾತನಾಡಿದ್ದೇನೆ. ನಾನು ಯಾರಿಗೂ ಕೂಡಾ ಬೆದರಿಕೆ ಹಾಕಿಲ್ಲ” ಎಂದಿದ್ದಾರೆ. “ನನ್ನ ಹೇಳಿಕೆಯಲ್ಲಿ […]

ತುಳು ಬಾಷೆಯೊಂದಿಗೆ ಲಿಪಿಯನ್ನು ತಳಕುಹಾಕಿ ಗೊಂದಲ: ಎಸ್ ಕಾರ್ತಿಕ್

Sunday, September 19th, 2021
Karthik

ಮಂಗಳೂರು: ಬಾಷೆ ಮತ್ತು ಲಿಪಿ ಬೇರೆಬೇರೆ. ತುಳು ಬಾಷೆ ಮತ್ತು ಲಿಪಿ ಇವುಗಳನ್ನು ಒಂದನ್ನೊಂದು ತಳಕುಹಾಕುವ ಮೂಲಕ ಒಬ್ಬರೊನ್ನೊಬ್ಬರು ದ್ವೇಷಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಸ್ವತಂತ್ರ ಸಂಶೋಧಕ ಎಸ್ ಕಾರ್ತಿಕ್ ವಿಷಾಧಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ʼಮಾನುಷʼ ಆಯೋಜಿಸುತ್ತಿರುವ ವೆಬಿನಾರ್ ಸರಣಿಯ 5 ನೇ ಭಾಗವಾಗಿ ಶನಿವಾರ ʼತುಳುನಾಡಿನ ಇತಿಹಾಸಕ್ಕೆ ಕೆ ವಿ ರಮೇಶ್ ಅವರ ಕೊಡುಗೆʼ ಎಂಬ ಕುರಿತು ಮಾತನಾಡಿದ ಅವರು, ಒಂದು ಬಾಷೆಗೆ ಲಿಪಿ ಇರಬೇಕೆಂಬ ನಿಯಮವಿಲ್ಲ. […]

ದೇವಸ್ಥಾನಗಳ ನಿರ್ಬಂಧ ತೆರವು : ನೆಗೆಟಿವ್ ವರದಿ ಹೊಂದಿದ್ದಲ್ಲಿ ಸೇವೆಗೆ ಅವಕಾಶ

Saturday, September 18th, 2021
Kateel Kukke Dharmasthala

ಮಂಗಳೂರು :  ಕೋವಿಡ್ ಸೋಂಕಿನ ಪಾಸಿಟಿವಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಗಳನ್ನು ಹಿಂಪಡೆದು ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಹಾಗೂ ಸೇವೆಗಳನ್ನು ನಡೆಸಲು ಷರತ್ತುಗಳನ್ನು ಪಾಲಿಸುವ ನಿಬಂಧನೆಗಳಿಗೊಳಪಟ್ಟು ಜಿಲ್ಲಾಡಳಿತ ಅನುಮತಿ ನೀಡಿದೆ. ಷರತ್ತುಗಳಿಂತಿವೆ: 1, ದೇವಾಲಯಗಳಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ದೇವಳದ ಆಡಳಿತ ವರ್ಗವು ಇದನ್ನು ಕಟ್ಟುನಿಟಟಾಗಿ ಅನುಷ್ಠಾನಿಸುವ  ಜವಾಬ್ದಾರಿಯನ್ನು ಹೊಂದಿದೆ. 2. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ […]

ನವರಾತ್ರಿ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಕರಾವಳಿಯಲ್ಲಿ ರಕ್ತಪಾತ ಮಾಡಲು ಉಗ್ರರಿಂದ ಸಿದ್ಧತೆ

Saturday, September 18th, 2021
lunch-box bomb

ಮಂಗಳೂರು :  ಕರಾವಳಿಯನ್ನು ಬೆಚ್ಚಿ ಬೀಳಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಕರಾವಳಿಯನ್ನು ಕೇಂದ್ರವಾಗಿರಿಸಿ ಲಂಚ್ ಬಾಕ್ಸ್ ಬಾಂಬ್ ಸ್ಫೋಟಗೊಳಿಸುವುದಕ್ಕೆ ಉಗ್ರಸಂಘಟನೆಗಳು ಸಂಚು ಹೂಡುತ್ತಿರುವುದಾಗಿ ಗುಪ್ತಚರ ವರದಿಗಳು ಎಚ್ಚರಿಸಿವೆ. ಅದರಲ್ಲೂ ಪಾಕ್‌ನ ಐಎಸ್‌ಐ ಕುಮ್ಮಕ್ಕಿನಲ್ಲಿ ಈ ರಹಸ್ಯ ಸಿದ್ಧತೆಗಳು ನಡೆಯುತ್ತಿರುವುದಾಗಿ ವರದಿಗಳು ತಿಳಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಿದೆ. ಹೆಚ್ಚು ಜನಸಂದಣಿ ಇರುವುದನ್ನು ನೋಡಿಕೊಂಡು ನವರಾತ್ರಿ, ದೀಪಾವಳಿ ಹೀಗೆ ಪ್ರಮುಖ ಹಿಂದು ಹಬ್ಬಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಲಂಚ್ ಬಾಕ್ಸ್‌ಗಳಲ್ಲಿ ಸ್ಫೋಟಕವನ್ನಿರಿಸಿ ರಕ್ತಪಾತ  ಮಾಡುವುದು ಉಗ್ರರ ಗುರಿ ಎನ್ನಲಾಗಿದೆ. ಪಂಜಾಬ್‌ನ ಅಮೃತಸರದ ಬಳಿಯೂ […]

ಅದ್ಯಾಕೆ ಹಿಂದೂ ದೇವಸ್ಥಾನಗಳೇ ಟಾರ್ಗೆಟ್ ಆಗುತ್ತಿವೆ, ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಇದ್ಯಾ ?

Saturday, September 18th, 2021
Dharmendra

ಮಂಗಳೂರು : ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಇದ್ಯಾ ? ತಾಲಿಬಾನ್ ಆದ್ರೂ ಪರ್ವಾಗಿಲ್ಲ, ಇದಕ್ಕಿಂತ ಕೀಳು ಮಟ್ಟದ ಸರ್ಕಾರ ನಡೆಸುತ್ತಿದ್ದೀರಾ ನೀವು. ನಾಚಿಕೆ ಇಲ್ಲದ ಮುಖ್ಯಮಂತ್ರಿ, ನೈತಿಕತೆ ಇಲ್ಲದ ಮಂತ್ರಿ ಮಂಡಲ. ಭಾರತೀಯ ಜನತಾ ಪಕ್ಷವೇ ಬೆನ್ನು ಮೂಳೆ ಇಲ್ಲದ ಪಕ್ಷ ಎಂದು ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಧರ್ಮೇಂದ್ರ ಅವರು, ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮಿ, ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ […]

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುಂಬಳೆಯ ಮನೆಯಲ್ಲಿ ಆತ್ಮಹತ್ಯೆ

Saturday, September 18th, 2021
sneha

ಮಂಜೇಶ್ವರ :  ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಚಂದ್ರಹಾಸ ಎಂಬವರ ಪುತ್ರಿ ಸ್ನೇಹಾ (17) ಆತ್ಮಹತ್ಯೆ ಮಾಡಿಕೊಂಡವಳು. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದ ಸ್ನೇಹಾ ಕೆಲ ಸಮಯದ ಬಳಿಕ ಕೋಣೆಯೊಳಗೆ ತೆರಳಿದ್ದು, ರಾತ್ರಿ ಸುಮಾರು 7 ಗಂಟೆ ಕಳೆದರೂ ಕೋಣೆಯಿಂದ ಹೊರ ಬರದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಬಾಗಿಲು ಬಡಿದರೂ ತೆರೆಯಲಿಲ್ಲ. ಕೊನೆಗೆ […]

ಕನ್ನಡದಲ್ಲಿ ವಿಜ್ಞಾನವನ್ನು ಮಾತನಾಡುವ ಪ್ರವೃತ್ತಿ ಹೆಚ್ಚಬೇಕು: ಡಾ ಎಂ ಎಸ್ ಮೂಡಿತ್ತಾಯ

Friday, September 17th, 2021
Kannada Vijnana Sammelana

ಮಂಗಳೂರು: ವಿಜ್ಞಾನದ ಅಗತ್ಯತೆ ಜನಸಾಮಾನ್ಯನಿಗೂ ಇದೆ. ಕನ್ನಡದಲ್ಲಿ ವಿಜ್ಞಾನವನ್ನು ಮಾತನಾಡುವ ಪ್ರವೃತ್ತಿ ಹೆಚ್ಚಬೇಕು. ವಿಜ್ಞಾನದ ಆವಿಷ್ಕಾರಗಳು ಜನಸಾಮಾನ್ಯರನ್ನು ತಲುಪಲು ಪ್ರಾದೇಶಿಕ ಬಾಷೆಗಳು ಮಾಧ್ಯಮವಾಗಬೇಕು, ಎಂದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ ಎಂ ಎಸ್ ಮೂಡಿತ್ತಾಯ ಅಭಿಪ್ರಾಯಪಟ್ಟರು. ಶುಕ್ರವಾರ ನಡೆದ ಸ್ವದೇಶೀ ವಿಜ್ಞಾನ ಆಂದೋಲನ ರಾಜ್ಯ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಮಂಗಳಾ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ 16 ನೇ ಕನ್ನಡ ವಿಜ್ಞಾನ ಸಮ್ಮೇಳನದ ಸಮಾರೋಪ […]