ಆಸ್ಕರ್ ಫರ್ನಾಂಡೀಸ್ ರವರ ಆರೋಗ್ಯ ಸುಧರಣೆಗಾಗಿ ಮಂಗಳೂರಿನ. ಭಿಷಪ್ ಹೌಸ್ ನ ಚಾಪಲಿನಲ್ಲಿ ಸಾರ್ವಜನಿಕ ಪ್ರಾರ್ಥನೆ

Wednesday, July 21st, 2021
Oscar Prayer

ಮಂಗಳೂರು  : ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ರವರ ಆರೋಗ್ಯ ಸುಧಾರಣೆ ಗಾಗಿ ಮತ್ತು ಬೇಗನೆ ಗುಣಮುಖರಾಗಲು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ರವರ ನೇತೃತ್ವದಲ್ಲಿ ಸಾರ್ವಜನಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಯಿತು. ಧರ್ಮಗುರುಗಳು ಪಾದರ್ ಕ್ಲಿಫರ್ಡ್, ಫಾ. ಒಲೇನ್ ಡಿ ಸೋಜ, ಫಾ.ಮ್ಯಾಕ್ಸಿಮ್, ಜೆ.ವಿ. ಡಿ ಸೋಜ, ಇವರು ಗಳು ವಿಶೇಷ ಪೂಜೆ ನೆರವೇರಿಸಿ, ಕೇಂದ್ರ ಸಚಿವ ರಾಗಿ ಸಂಸದರಾಗಿ ಜನರಿಗೆ ನೀಡುವ ಸೇವೆ ಅಪಾರ ವಾಗಿದ್ದು, ಅವರ ಸೇವೆಯ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ […]

ದ್ವಿತೀಯ ಪಿಯು ರಿಸಲ್ಟ್; ರಾಜ್ಯದಲ್ಲೇ ದಾಖಲೆಯ ಫಲಿತಾಂಶ ಪಡೆದ ಆಳ್ವಾಸ್

Wednesday, July 21st, 2021
Alvas Kannada Medium School

ಮೂಡುಬಿದಿರೆ : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆಯುವ ಮೂಲಕ ಆಳ್ವಾಸ್ ಪದವಿ ಪೂರ್ವ ಕಾಲೇಜು ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. 600ಕ್ಕೆ 600 ಅಂಕ ಗಳಿಸಿದ ದ.ಕ ಜಿಲ್ಲೆಯ 445 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ಇವರಲ್ಲಿ 13 ವಿದ್ಯಾರ್ಥಿಗಳು ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೆಂಬುದು ಗಮನಾರ್ಹ. ಪರೀಕ್ಷೆಗೆ ಹಾಜರಾದ 2510 ವಿದ್ಯಾರ್ಥಿಗಳಲ್ಲಿ 1637 […]

ಕುದ್ರೋಳಿ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳ ವಧೆ, ದಾಳಿ ನಡೆಸಿ ಜಾನುವಾರು ವಶ

Wednesday, July 21st, 2021
Kudroli Shelter

ಮಂಗಳೂರು: ಬಜರಂಗದಳದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ, ಎನಿಮಲ್ ವೆಲ್ಫೇರ್ ಬೋರ್ಡ್ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಕುದ್ರೋಳಿ ಕಸಾಯಿಖಾನೆಗೆ ದಾಳಿ ನಡೆಸಿ ಜಾನುವಾರುಗಳನ್ನು ವಶಪಡಿಸಿದ್ದಾರೆ. ಕುದ್ರೋಳಿ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿದ ಹಿನ್ನಲೆಯಲ್ಲಿ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಿ ಕಸಾಯಿಖಾನೆಯು ಮುಚ್ಚಿದ್ದರೂ ಕೂಡ ಬೇರೊಂದು ಕಟ್ಟಡದಲ್ಲಿ ಅಕ್ರಮವಾಗಿ ದನ ಕರುಗಳನ್ನು ವಧೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು […]

ಕನಸಿನಲ್ಲಿ ಅಲ್ಲಾಹು ಹೇಳಿದಂತೆ ಪ್ರವಾದಿ ತನ್ನ ಮಗನನ್ನೇ ಬಲಿ ಕೊಡುವಾಗ ಆಗಿದ್ದೆ ಪವಾಡ !

Wednesday, July 21st, 2021
Bakrid

ಮಂಗಳೂರು : ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹಿಟ್ಟಿದ್ದ ಪ್ರವಾದಿ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪ್ರವಾದಿ ಇಬ್ರಾಹಿಂಗೆ ಒಮ್ಮೆ ಅಲ್ಲಾಹು ಅಗ್ನಿ ಪರೀಕ್ಷೆಯನ್ನು ಮಾಡುತ್ತಾನೆ. ಒಮ್ಮೆ ಅಲ್ಲಾಹು ಪ್ರವಾದಿ ಇಬ್ರಾಹಿಂ ಕನಸಿನಲ್ಲಿ ಕಾಣಿಸಿಕೊಂಡು ಪ್ರವಾದಿ ಬಳಿ ಇರುವ ಯಾವುದಾದರೂ ಆತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ನೀಡಬೇಕು ಎಂದು ತ್ಯಾಗ ಮಾಡಬೇಕೆಂದು ಆದೇಶಿಸುತ್ತಾನೆ. […]

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆ ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನ

Wednesday, July 21st, 2021
II Puc

ಮಂಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೇ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಪಪೂ ಶಿಕ್ಷಣ ಇಲಾಖೆ ಎಲ್ಲರನ್ನೂ ಉತ್ತೀರ್ಣ ಮಾಡಿದೆ. ದ.ಕ ಜಿಲ್ಲೆಯಲ್ಲಿ 600ರಲ್ಲಿ 600 ಅಂಕ ಪಡೆದ 445 ಮಂದಿ ವಿದ್ಯಾರ್ಥಿಗಳು ಇರುವ ಹಿನ್ನೆಲೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ. ಸತತ ಎರಡನೇ ಬಾರಿ ದ.ಕ ಜಿಲ್ಲೆ ಈ ಸಾಧನೆ ಮಾಡಿದಂತಾಗಿದೆ. ಕಳೆದ ವರ್ಷದ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲೂ ದ.ಕ ಜಿಲ್ಲೆಯ ಮೊದಲ ಸ್ಥಾನ ಪಡೆದಿತ್ತು,  ದ.ಕ ಜಿಲ್ಲೆಯಲ್ಲಿ ಖಾಸಗಿ ಹೊರತುಪಡಿಸಿ, […]

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ತೀವ್ರ ನಿಗಾ ಘಟಕದಲ್ಲಿ

Wednesday, July 21st, 2021
oscar faradise

ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಫ್ಲ್ಯಾಟ್ ನಲ್ಲಿ  ಜಾರಿ ಬಿದ್ದು  ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಮಂಗಳೂರು ಅತ್ತಾವರದಲ್ಲಿರುವ ಫ್ಲ್ಯಾಟ್ ನಲ್ಲಿ ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದ ಆಸ್ಕರ್ ಫರ್ನಾಂಡಿಸ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಇನ್ನು ಭಾನುವಾರ ಜಾರಿ ಬಿದ್ದ ಸಮಯ ಯಾವ ಗಾಯವಾಗಿಲ್ಲ ಎಂಬ ನಿರ್ಲಕ್ಷ್ಯದಿಂದಿದ್ದ ಫರ್ನಾಂಡಿಸ್ ಅವರು ಅದೇ ದಿನ ಸಂಜೆ ಡಯಾಲಿಸಿಸಿ ಗೆ ತೆರಳಿದ್ದಾಗ […]

ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ

Tuesday, July 20th, 2021
Mudra Dharane

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ ನಡೆಯಿತು. ಬೆಳಗ್ಗೆ ಮಠದ ಋತ್ವಿಜರು ಸುದರ್ಶನ ಹೋಮ ನಡೆಸಿ ನಂತರ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮುದ್ರಾಧಾರಣೆ ಮಾಡಿಕೊಂಡು, ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಪರ್ಯಾಯ ಮಠಾಧೀಶರು ರಾಜಾಂಗಣದಲ್ಲಿ ಭಕ್ತಾದಿಗಳಿಗೆ ಮುದ್ರಾಧಾರಣೆ ನಡೆಸಿದರು. ಪಲಿಮಾರು ಮಠಾಧೀಶ ಶ್ರೀ […]

ಮಂಗಳೂರು ವಿವಿ: ಆಗಸ್ಟ್‌ 2 ರಿಂದ ಪದವಿ, 5 ರಿಂದ ಸ್ನಾತಕೋತ್ತರ ಪರೀಕ್ಷೆ

Tuesday, July 20th, 2021
Mangalore VV

ಮಂಗಳೂರು: ಕೋವಿಡ್-19ರ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟು ನಡೆಸಲು ಬಾಕಿ ಇರುವ ಎಪ್ರಿಲ್‌ 2021 ರ 1, 3, 5 ಮತ್ತು 7 ನೇ ಸೆಮಿಸ್ಟರ್‌ ಪದವಿ ಪರೀಕ್ಷೆಗಳನ್ನು ಆಗಸ್ಟ್‌ 2, 2021 ರಿಂದ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಇದೇ ವೇಳೆ 1 ಮತ್ತು 3 ನೇ ಸೆಮಿಸ್ಟರ್‌ನ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ಆಗಸ್ಟ್‌ 5, 2021 ರಿಂದ ನಡೆಸಲು ಉದ್ದೇಶಿಸಲಾಗಿದೆ. ಸರ್ಕಾರ ಸೂಚಿಸಿರುವ ಕೋವಿಡ್‌ ನಿಯಂತ್ರಣ ನಿಯಮಗಳ ಕಠಿಣ ಪಾಲನೆಯೊಂದಿಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂಚಿತವಾಗಿ […]

ಬ್ರಹ್ಮಾವರ ವಿಶಾಲಾ ಗಾಣಿಗ ಕೊಲೆಯಲ್ಲಿ ಪತಿಯೇ ಪ್ರಮುಖ ಸೂತ್ರದಾರ

Tuesday, July 20th, 2021
Vishala Ganiga

ಉಡುಪಿ : ಬ್ರಹ್ಮಾವರ ಕುಮಾರಗೋಡು ಎಂಬಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ವಿಶಾಲಾ ಗಾಣಿಗ (35) ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಉಡುಪಿ ಪೊಲೀಸರು ಪತಿ ರಾಮಕೃಷ್ಣ ಗಾಣಿಗ (42) ಎಂಬಾತನನ್ನು ಬಂಧಿಸಿದ್ದಾರೆ. ರಾಮಕೃಷ್ಣ ಅವರು ಎನ್‌ಆರ್‌ಐ ಉದ್ಯಮಿಯ ವೈಯಕ್ತಿಕ ಸಹಾಯಕರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಹೆಂಡತಿಯ ಅಂತಿಮ ವಿಧಿಗಳನ್ನು ನಿರ್ವಹಿಸಲು ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದರು. ವಿಶಾಲಾ ಗಾಣಿಗ ಕೊಲೆಯಲ್ಲಿ ಪತಿ ರಾಮಕೃಷ್ಣ ಗಾಣಿಗ ಪ್ರಮುಖ ವ್ಯಕ್ತಿ ಎಂದು ತೋರಿಸಿದ ಪುರಾವೆಗಳನ್ನು ನಾವು ಪಡೆದಿದ್ದೇವೆ. ಆದ್ದರಿಂದ ಅವರನ್ನು […]

ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ನಾಪ್ತತೆ

Tuesday, July 20th, 2021
namitha

ಉಡುಪಿ :  ಭಟ್ಕಳ ಮೂಲದ ಮುಂಡಳ್ಳಿ ನಿವಾಸಿ ನಮಿತಾ (22) ಎಂಬವರು ಜುಲೈ 16ರಿಂದ ನಾಪ್ತತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮಿತಾ  ಮಣಿಪಾಲದ ಬೋಡಾ ಶೀರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಚಹರೆ: 135 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ಮೊ.ನಂ: 9480805448, 9480805475 ಅಥವಾ ಕಂಟ್ರೋಲ್ ರೂಂ ನಂ: 0820-2570328 ಅನ್ನು ಸಂಪರ್ಕಿಸುವಂತೆ ಮಣಿಪಾಲ ಪೊಲೀಸ್ […]