ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್

Saturday, September 14th, 2024
ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?': ನಟ ಅರ್ಜುನ್ ಕಾಪಿಕಾಡ್

ಮಂಗಳೂರು: ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ “ಕಲ್ಜಿಗ” ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು. ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ […]

ಪಿಲಿಕುಲದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ,ಕಂಬಳ ತುಳುನಾಡ ಉತ್ಸವ-ಯು.ಟಿ.ಖಾದರ್

Thursday, September 12th, 2024
UT-Khader

ಬೆಂಗಳೂರು : ಪಿಲಿಕುಲ ನಿಸರ್ಗ ಧಾಮ ಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಂಬಳ ತುಳು ನಾಡ ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ. ಅವರು ಗುರುವಾರ ವಿಧಾನ ಸಭಾ ಕಚೇರಿಯ ಸಭಾಂಗಣದಲ್ಲಿ ಪಿಲಿಕುಲ ಕಂಬಳ,ತುಳು ನಾಡ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಗಳ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಿಲಿಕುಲದಲ್ಲಿ ಕೆಲವೊಂದು ಶಾಶ್ವತವಾದ ಕಾಮಗಾರಿಗಳನ್ನು ಕೈ ಗೊಂಡು ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಲು ತುಳು ನಾಡು ಉತ್ಸವದ ಮೂಲಕ ತುಳು ನಾಡಿನ ಕಂಬಳ ಸೇರಿದಂತೆ […]

ಮಂಗಳೂರು ಲಿಂಟಲ್ ಬಿದ್ದು ಸಹೋದರಿಬ್ಬರ ದುರ್ಮರಣ

Thursday, September 12th, 2024
ಮಂಗಳೂರು ಲಿಂಟಲ್ ಬಿದ್ದು ಸಹೋದರಿಬ್ಬರ ದುರ್ಮರಣ

ಮಂಗಳೂರು : ಹೊಸ ಮನೆ ಕಟ್ಟಲು ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಸಮೇತ ಲಿಂಟಲ್ ಬಿದ್ದು ಸಹೋದರಿಬ್ಬರು ಮೃತಪಟ್ಟ ಘಟನೆ ಮಂಗಳೂರು ನಗರದ ಜೈಲ್ ರೋಡಿನಲ್ಲಿ ಗುರುವಾರ ಅಪರಾಹ್ನ ಸಂಭವಿಸಿದೆ. ಮೃತರನ್ನು ಜೇಮ್ಸ್ ಜತ್ತಣ್ಣ ಮತ್ತು ಎಡ್ವಿನ್ ಮಾಬೇನ್ ಮೃತ ಎಂದು ಗುರುತಿಸಲಾಗಿದೆ. ಬೆಳಗ್ಗೆ 10.45ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದರೂ ಮಧ್ಯಾಹ್ನದವರೆಗೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಜೇಮ್ಸ್‌ ಜತ್ತನ್ನ ಪೂರ್ವಜರ ಮನೆ ಇದಾಗಿದ್ದು, ಪಾಲಿನಲ್ಲಿ ಅವರಿಗೆ ಈ ಮನೆ ಸಿಕ್ಕಿತ್ತು. ಮನೆಗೆ ತಾಗಿಕೊಂಡಂತೆ ಅಡ್ವಿನ್‌ ಅವರ […]

ಮಂಡ್ಯ ಕಲ್ಲುತೂರಾಟ ಘಟನೆ,ಸರಕಾರದ ಆಡಳಿತ ವೈಫಲ್ಯ: ಡಾ.ಭರತ್‌ ಶೆಟ್ಟಿ ಕಿಡಿ

Thursday, September 12th, 2024
bharath-shetty

ಸುರತ್ಕಲ್: ಮಂಡ್ಯದಲ್ಲಿ ಗಣೇಶ ಚತುರ್ಥಿ ಬಳಿಕ ಶೋಭಾಯಾತ್ರೆ ಸಂದರ್ಭ ನಡೆದ ಹಿಂದೂ ಭಕ್ತರ ಮೇಲೆ ಕಲ್ಲು ತೂರಾಟ ಘಟನೆ ಸರಕಾರದ ವೈಫಲ್ಯವಾಗಿದೆ. ಸೂಕ್ತ ಭದ್ರತೆ ಹಾಗೂ ಗುಪ್ತಚರ ವರದಿ ಸಂಗ್ರಹದಲ್ಲಿ ನಿರ್ಲಕ್ಷ್ಯವಾಗಿದೆ.ಈ ನಡುವೆ ಗೃಹ ಸಚಿವರು ಕಲ್ಲು ತೂರಾಟ ಅನಿರೀಕ್ಷಿತ, ಕೋಮು ವೈಷಮ್ಯವಲ್ಲ ಇದು ಸಣ್ಣವಿಚಾರ ಎಂದಿರುವುದು ಆಘಾತಕಾರಿ ಎಂದು ಶಾಸಕ ಡಾ.ಭರತ್‌ ಶೆಟ್ಟಿ ವೈ ಹೇಳಿದ್ದಾರೆ. ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ, ನನ್ನಮೇಲೆ ಕೇಸು ದಾಖಲಿಸಲು ಅತುರ ತೋರಿಸುವ ಕಾಂಗ್ರೆಸ್ ಆಡಳಿತ ಹಿಂದೂಗಳ […]

ಕರಾವಳಿ ಸ್ಟಾರ್ಟಪ್ ಉದ್ಘಾಟನಾ ಸಮಾರಂಭ

Thursday, September 12th, 2024
ಕರಾವಳಿ ಸ್ಟಾರ್ಟಪ್ ಉದ್ಘಾಟನಾ ಸಮಾರಂಭ

ಮಂಗಳೂರು : ನಿಟ್ಟೆ ಕರಾವಳಿ ಸ್ಟಾರ್ಟ್‌ಅಪ್ ಉದ್ಘಾಟನಾ ಸಮಾರಂಭವು ಗುರುವಾರ, ಸೆಪ್ಟೆಂಬರ್ 12, 2024 ರಂದು ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಧಿಕೃತವಾಗಿ ಡಾ. ಜಿ.ಸಂತೋಷ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ ಉದ್ಘಾಟಿಸಿದರು; ಶಾಂತಾರಾಮ ಶೆಟ್ಟಿ, ನಿಟ್ಟೆ ಡಿಯು ಪ್ರೊ-ಚಾನ್ಸಲರ್ ಡಾ. ಮತ್ತು ಶ್ರೀ ನಂದಕುಮಾರ್, ನಿರ್ದೇಶಕರು (ರಿಫೈನರಿ) MRPL ನಲ್ಲಿ. ಕಾರ್ಯಕ್ರಮದಲ್ಲಿ ಉದ್ಯಮ ಸಂಘಗಳ ಸದಸ್ಯರು, ಯಶಸ್ವಿ ಪ್ರಾದೇಶಿಕ ಉದ್ಯಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು […]

ಸಾಕು ನಾಯಿಯನ್ನು ಜೀವಂತವಾಗಿ ಸುರಿಯಲು ಕಸ ವಿಲೇವಾರಿ ವಾಹನಕ್ಕೆ ನೀಡಿದ ಪೇಯಿಂಗ್ ಗೆಸ್ಟ್ ನಿವಾಸಿಗಳು

Thursday, September 12th, 2024
waste-dog

ಮಂಗಳೂರು : ಸಾಕು ನಾಯಿಯನ್ನು ಜೀವಂತವಾಗಿ ಸುರಿಯಲು ಮಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಕಾರ್ಯಕರ್ತರಿಗೆ ನೀಡಿದ ಘಟನೆ ಡೊಂಗರಕೇರಿ ವಾರ್ಡ್ ಸಂಖ್ಯೆ 42ರಲ್ಲಿ ನಡೆದಿದೆ. ಪಾಲಿಕೆಯ ಕಸ ಸಾಗಿಸುವ ವಾಹನ ನಾಯಿಯನ್ನು ಎಳೆದೊಯ್ಯುವ ವಿಡಿಯೋ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜಿಲ್ಲಾ ಪ್ರಾಣಿ ದಯಾ ಸಂಘವು ಬುಧವಾರ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದೆ. ಘಟನೆಯು ಡೊಂಗರಕೇರಿ ವಾರ್ಡ್ ಸಂಖ್ಯೆ 42 ರ ಭೋಜರಾವ್ ಲೇನ್ ಕ್ರಾಸ್ ರಸ್ತೆಯಲ್ಲಿ ಶನಿವಾರ ( ನಡೆದಿದೆ […]

ಅತಿಯಾದ ಮೊಬೈಲ್ ಬಳಕೆ ಒತ್ತಡಗಳಿಗೆ ಕಾರಣ : ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿಜಿ

Wednesday, September 11th, 2024
shobha

ಮಂಗಳೂರು : ದ. ಕ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೆಸೀನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿಜಿ ಮಾತನಾಡಿ ಭಾರತದಲ್ಲಿ […]

ಸಂಘನಿಕೇತನ : 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆ

Wednesday, September 11th, 2024
sanghanikethana

ಮಂಗಳೂರು : ಮಂಗಳೂರು ನಗರದ ಸಂಘನಿಕೇತನದ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ 5 ದಿನಗಳಿಂದ ನಡೆಯುತ್ತಿರುವ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಬುಧವಾರ ಸಂಜೆ ನಡೆಯಿತು. ಉತ್ಸವ ಸ್ಥಳದಿಂದ ಚೆಂಡೆ, ಶಂಖ, ಜಾಗಟೆ, ಕುಣಿತ ಭಜನೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ಶೋಭಾಯಾತ್ರೆ ಆರಂಭಗೊಂಡಿತು. ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ , ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶೋಭಾಯಾತ್ರೆ ಸಾಗುವ […]

ತಾಯಿಯ ರಕ್ಷಿಸಿದ ಬಾಲಕಿಗೆ ಪೊಲೀಸ್ ಆಯುಕ್ತರಿಂದ ಸನ್ಮಾನ

Wednesday, September 11th, 2024
vaibhavi

ಮಂಗಳೂರು: ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದರು. 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿ ಅವರಿಗೆ ಆಯುಕ್ತರು ತಮ್ಮ ಕೊಠಡಿಯಲ್ಲಿ ಪೇಟ, ಹಾರ ತೊಡಿಸಿ ಸನ್ಮಾನಿಸಿ, ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. ವೈಭವಿಯ ಈ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಮಯ ಪ್ರಜ್ಞೆ ಮತ್ತು […]

ಹಿಂದೂ ಜನಜಾಗೃತಿ ಸಮಿತಿ ಮತ್ತು ಧರ್ಮಾಭಿಮಾನಿ ನ್ಯಾಯವಾದಿಗಳಿಂದ ದೂರು !

Wednesday, September 11th, 2024
Hindu-Gods

ಮಂಗಳೂರು : ‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ Al ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಬಂಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಪೇಜ್ ನ ಅಡ್ಮಿನ್ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂ ಜನಜಾಗೃತಿ […]