ಕೊರಗ ಕಾಲೊನಿ ರಸ್ತೆ ಅಭಿವೃದ್ಧಿಗೆ ಅಲಂಕಾರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಸಂಸದ ಕ್ಯಾ. ಚೌಟ

Saturday, January 25th, 2025
Koraga-Kolony

ಮಂಗಳೂರು: ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಯೋಜನೆಯಡಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲೊನಿಯ ರಸ್ತೆ ಅಭಿವೃದ್ಧಿಗೆ 2.75 ಕೋಟಿ ರೂ. ಅನುದಾನ ಮಂಜೂರು ಆಗಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಅಲಂಕಾರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ದೇಶದಲ್ಲಿ ಬಡವರ್ಗದ ಶೋಷಿತ ಕುಟುಂಬಸ್ಥರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ […]

ಬಿಜೈ ಮಸಾಜ್ ಸಲೂನ್ ರಾಮಸೇನಾ ಕಾರ್ಯಕರ್ತರ ದಾಳಿ, 14 ಮಂದಿಯ ಬಂಧನ

Friday, January 24th, 2025
Unisex-Spa

ಮಂಗಳೂರು : ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಮಸಾಜ್ ಸಲೂನ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಮತ್ತು ಇತರ ಕಾರ್ಯಕರ್ತರು ದಾಳಿ ನಡೆಸಿ ಸಲೂನ್ ನಲ್ಲಿರುವ ವಸ್ತುಗಳನ್ನು ಧ್ವಂಸಗೊಳಿಸಿದ ಬಗ್ಗೆ ದೂರು ನೀಡಲಾಗಿದೆ. ಈ ಘಟನೆ ಬೆಳಗ್ಗೆ ಸುಮಾರು 11:50 ಕ್ಕೆ ನಡೆದಿದ್ದು ಸಲೂನ್ ಮಾಲಕರಾದ ಸುಧೀರ್ ಶೆಟ್ಟಿ ಬರ್ಕೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಸುಮಾರು ಹದಿನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಲೆ […]

ಶ್ರೀಲಂಕಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ ಅನುಷ್ಠಾನ : ಡಿ. ವೀರೇಂದ್ರ ಹೆಗ್ಗಡೆಯವರ ಸಹಮತ

Thursday, January 23rd, 2025
Srilankan-at-Dharmasthala

ಉಜಿರೆ: ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬವಾಗಿದೆ. ಆದುದರಿಂದಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಗ್ರಾಮರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಅವರು ಸಹಕಾರಿ ಚಳವಳಿ ಮೂಲಕ ದೇಶದ ಪ್ರಗತಿಗೆ ಆದ್ಯತೆ ನೀಡಿದರು. ಮಾನವ ಸಂಪನ್ಮೂಲ ಹಾಗೂ ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದ ಪ್ರಗತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982 ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು […]

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರತಿಕ್ಷ ಅನಿಲ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Thursday, January 23rd, 2025
Pratiksha-Anil

ಮಂಗಳೂರು : ಇತ್ತೀಚಿಗೆ ನಡೆದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಪ್ರತಿಕ್ಷ ಅನಿಲ್ ಉತ್ತೀರ್ಣರಾಗಿರುತ್ತಾರೆ. ಈಕೆ ಮುಂಡುಗೋಡ ನಾಟ್ಯಮಯೂರಿ ನೃತ್ಯ ಕಲಾಕೇಂದ್ರ ಗುರುಗಳಾದ ಶ್ರೀಮತಿ ಶಶಿರೇಖಾ ಬೈಜು ಶಿಷ್ಯೆಯಾಗಿದ್ದು. ಪ್ರಸ್ತುತ ಈಕೆ ಬ್ಲೂಮಿಂಗ್ ಬರ್ಡ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಂಡುಗೋಡದಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಗೋಮಾತೆಯ ಸಂರಕ್ಷಣೆಗೋಸ್ಕರ ಜನವರಿ 29 ರಂದು ಎಲ್ಲಾ ಮಠಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ

Thursday, January 23rd, 2025
Go pooja

ಮಂಗಳೂರು : ಗೋವಿನ ಮೇಲೆ ನಡೆಯುತ್ತಿರುವ ವಿಕೃತ ಕೃತ್ಯವು ಮರುಕಳಿಸದಂತೆ ಜನವರಿ 23 ರಿಂದ 29 ರವರೆಗೆ ಪ್ರತೀ ಮನೆಯಲ್ಲಿ ದೀಪ ಬೆಳಗಿಸಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರಿ ಜಪ ಹಾಗು ಜನವರಿ 25 ರಂದು ಉಪವಾಸ ಮಾಡಿ ನಾವು ನಿತ್ಯ ಆರಾಧಿಸುವ ಪವಿತ್ರ ಗೋಮಾತೆಯ ಸಂರಕ್ಷಣೆಗೋಸ್ಕರ ಶ್ರೀದೇವರಲ್ಲಿ ಪ್ರಾರ್ಥಿಸುವಂತೆ ಹಾಗು ಜನವರಿ 29 ರಂದು ಎಲ್ಲಾ ಮಠಮಂದಿರ, ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳಲ್ಲಿ ವಿಶೇಷ ಪ್ರಾರ್ಥನೆಗೆ ಪೂಜ್ಯ ಪೇಜಾವರ ಮಠಾಧೀಶರು ಕರೆಕೊಟ್ಟಿದ್ದನ್ನು ವಿಶ್ವ ಹಿಂದೂ ಪರಿಷದ್ […]

ಹಾಲು ಕರೆಯುವ ಸ್ಪರ್ಧೆ: ಅರ್ಜಿ ಆಹ್ವಾನ

Wednesday, January 22nd, 2025
Cow-Milking

ಮಂಗಳೂರು : 2024-25ನೇ ಸಾಲಿನಲ್ಲಿ ಮಂಗಳೂರು ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆಯುವ ಜಾನುವಾರುಗಳಲ್ಲಿ ಹಾಲು ಕರೆಯುವ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕಿನ ಆಸಕ್ತ ರೈತ ಭಾಂದವರು ಅತಿ ಹೆಚ್ಚು ಹಾಲು ಹಿಂಡುವ (ಪ್ರತಿ ದಿನಕ್ಕೆ 15 ಲೀ ಹಾಲು ಮತ್ತು ಮೇಲ್ಪಟ್ಟ) ಹಸುಗಳನ್ನು ಜನವರಿ 26 ರ ಒಳಗೆ ನೋಂದಾಯಿಸಬೇಕು. ಇಲಾಖೆಯಿಂದ ನಿಯೋಜಿಸಿದ ಆಯ್ಕೆ ಸಮಿತಿಯ ಮುಂದೆ ಹಸುವಿನ ಹಾಲನ್ನು […]

ಅಶಕ್ತರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯ : ಡಿಎಂಒ ಡಾ.ಶಿವಪ್ರಕಾಶ್

Wednesday, January 22nd, 2025
Press-club-Free artificial leg

ಮಂಗಳೂರು : ಅಶಕ್ತರಿಗೆ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ .ಕಾಲು ಕಳಕೊಂಡವರಿಗೆ ಕೃತಕ ಕಾಲು ಒದಗಿಸುವುದರಿಂದ ಹೊಸ ಬದುಕು ನೀಡಿದಂತಾಗುತ್ತದೆ ಎಂದು ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಕೊಣಾಜೆಯ ಅಬ್ದುಲ್ ರವೂಫ್ ಅವರಿಗೆ ಉಚಿತ ಕೃತಕ ಕಾಲು ವಿತರಿಸಿ ಮಾತನಾಡಿದ ಅವರು ಪತ್ರಕರ್ತರ ಸಂಘಟನೆ ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು. ವೆನ್ಲಾಕ್ ಆಸ್ಪತ್ರೆಯ ಆರ್ಥೊ […]

ಸೋಲು, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು: ಕೃಷ್ಣ ಜೆ. ಪಾಲೆಮಾರ್

Wednesday, January 22nd, 2025
Palemar-press-club

ಮಂಗಳೂರು : ನನ್ನ ಉದ್ದಿಮೆಯಲ್ಲಿ ಮೂರು ಬಾರಿ ಸಂಪೂರ್ಣವಾಗಿ ಸೋತಿದ್ದೇನೆ. ಆದರೆ ಊರು ಬಿಟ್ಟಿಲ್ಲ, ಆದರೆ ಮುಂದೆ ಇದರಿಂದ ಹೊರಬರಲಿದ್ದೇನೆ ಎಂಬ ಆತ್ಮವಿಶ್ವಾಸದೊಂದಿಗೆ ಸವಾಲನ್ನು ಸ್ವೀಕರಿಸಿ ಮುಂದೆ ಬಂದಿದ್ದೇನೆ. ಹಾಗಾಗಿ ಜೀವನದಲ್ಲಿ ಎದುರಾಗುವ ಸೋಲು ಹಾಗೂ ಕಷ್ಟಗಳನ್ನು ಸ್ವೀಕರಿಸುವ ಎದೆಗಾರಿಕೆ ನಮ್ಮಲ್ಲಿ ಇದ್ದಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಸಿಇಒ ಕೃಷ್ಣ ಜೆ. ಪಾಲೆಮಾರ್‌ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿದ […]

ಮಂಗಳ ಸಮೂಹ ಸಂಸ್ಥೆ ಗೆ ಕೆಂಗೇರಿಯ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರಶಸ್ತಿ

Wednesday, January 22nd, 2025
Mangala-college

ಮಂಗಳೂರು : ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ವೃತ್ತಿನಿರತರ ಅಸೋಸಿಯೇಶನ್ ಮತ್ತು ಎಸ್-ವ್ಯಾಸ ಯೂನಿವರ್ಸಿಟಿಯ ವತಿಯಿಂದ ಬೆಂಗಳೂರಿನ ಸತ್ವ ಗ್ಲೋಬಲ್ ಸಿಟಿ ಮೈಸೂರು ರಸ್ತೆ ಕೆಂಗೇರಿಯಲ್ಲಿ 2025ನೇ ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಪಿಸಿಯೋತೆರಪಿ ಅಲ್ಲದೆ ಎ.ಸಿ.ಬಿ.ಎಂ 2025ರ ಲೈಫ್ ಸೈನ್ಸ್ ಹೆಲ್ತ್ ಕೇರ್ ಪ್ರೋಫೆಷನಲ್ಸ್ ಕಾನ್ಫರೆನ್ಸ್ ಅಂಗವಾಗಿ ಎಹೆಚ್‌ಎಸ್‌ಕಾನ್2025ರ ಸಾಂಸ್ಕೃತಿಕ ಸಮಾರಂಭದಲ್ಲಿ ನಡೆದ ಗ್ರೂಪ್ ಡ್ಯಾನ್ಸ್ ವಿಭಾಗ & ಸೋಲೋಡ್ಯಾನ್ಸ್ ವಿಭಾಗದಲ್ಲಿ ಕು| ವಿಜಿತಾ ಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದು ಹೆಮ್ಮೆಯಿಂದ ಬೀಗಿದ್ದಾರೆ. […]

ರೋಟರಿ ಜಿಲ್ಲಾ ಸಮ್ಮೇಳನ ” ನವ ವೈಭವ ” ಅಡ್ಯಾರ್ ಗಾರ್ಡನ್ ನಲ್ಲಿ.

Wednesday, January 22nd, 2025
Rotary club

ಮಂಗಳೂರು : ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸುಮಾರು 120 ವರ್ಷಗಳಿಂದ ಪ್ರಪಂಚದಾದ್ಯಂತ ತನ್ನ ಸೇವಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ತಮಗೆಲ್ಲರಿಗೂ ತಿಳಿದ ವಿಚಾರ ಪೊಲಿಯೋದಂತಹ ಮಹಾಮಾರಿಯನ್ನು ಪ್ರಪಂಚದಿಂದ ಹೋಗಲಾಡಿಸಿದ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ. ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ 542 ಜಿಲ್ಲೆಗಳಲ್ಲಿ ನಮ್ಮ ರೋಟರಿ ಜಿಲ್ಲೆ 3181 ಕೂಡ ಒಂದು. ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡಂತಹ ಈ ರೋಟರಿ ಜಿಲ್ಲೆ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಹಾಗೂ ನಮ್ಮ ಸ್ಥಳೀಯ ರೋಟರಿ ಕ್ಲಬ್ ಗಳು ಮಾಡಿದಂತಹ ಸೇವಾ ಕಾರ್ಯಗಳನ್ನು ಸಮಾಜಕ್ಕೆ […]