ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! – ವಿಡಿಯೋ

Sunday, November 19th, 2023
ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! - ವಿಡಿಯೋ

ಮಂಗಳೂರು : ತುಳುನಾಡು ದೈವ ದೇವರುಗಳ ಆರಾಧನೆಗೆ ಹಿಂದಿನಿಂದಲೂ ಪ್ರಾಧಾನ್ಯತೆಯನ್ನು ಪಡೆದಿದೆ. ತುಳುನಾಡಿನಲ್ಲಿ ಸಾವಿರಕ್ಕಿಂತಲೂ ಹೆಚ್ಚು ದೈವಗಳನ್ನು ಅರಾಧಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಮಂಗಳೂರಿನಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದ ಮೂಡು ಮನೆಗುತ್ತು ಪಚ್ಚನಾಡಿಯಲ್ಲಿ ಅಂತದೊಂದು ಕ್ಷೇತ್ರವಿದೆ. ಇಲ್ಲಿ ಹತ್ತು ವರ್ಷ ಹಿಂದೆ ದೈವವೊಂದು ರಾತ್ರಿವೇಳೆ ಕಾಯರ್ ಮರದಲ್ಲಿ ಮಾಯದ ಶಕ್ತಿಯ ರೂಪದಲ್ಲಿ ಸತೀಶ್ ಪೂಜಾರಿಯವರಿಗೆ ಕಾಣಿಸಿಕೊಂಡು ತನಗೆ ಆಶ್ರಯಯ ನೀಡುವಂತೆ ಸೂಚಿಸಿದಂತೆ ಭಾಸವಾಗುತ್ತದೆ. ಅದರಂತೆ ಪಂಡಿತರ ಪ್ರಶ್ನಾ ಚಿಂತನೆಯ ಮೂಲಕ ಪಚ್ಚನಾಡಿ ಮೂಡು ಮನೆ ಎಂಬಲ್ಲಿ […]

ಪತ್ನಿ ಜೊತೆ ಮಲಗಿದ್ದ ವ್ಯಕ್ತಿ ನಾಪತ್ತೆ, ಮನೆಯವರಲ್ಲಿ ಆತಂಕ

Sunday, November 19th, 2023
Roshan

ಮಂಜೇಶ್ವರ : ರಾತ್ರಿ ವೇಳೆ ಪತ್ನಿ ಜೊತೆ ಮಲಗಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯರಾತ್ರಿ ವೇಳೆ ನಾಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿರುವ ಅಮನ್ ಕಾಟೇಜ್ ಬಳಿಯ ನಿವಾಸಿಯಾಗಿರುವ ದಿ. ಫೆಲಿಕ್ಸ್ ಮೊಂತೆರೋ – ಅಪೋಲಿನ್ ಲೋಬೋ ದಂಪತಿಯ ಪುತ್ರ ರೋಷನ್ ಮೊಂತೆರೋ (42) ನಾಪತ್ತೆಯಾದ ವ್ಯಕ್ತಿ. ಶನಿವಾರ ರಾತ್ರಿ ಊಟ ಮಾಡಿ ಪತ್ನಿ ರೇಖಾ ಮೊಂತೆರೋ ಜೊತೆ ಮಲಗಿದ್ದ ರೋಷನ್, ಮಧ್ಯರಾತ್ರಿ 2.30 ವೇಳೆ ರೇಖಾರಿಗೆ ಎಚ್ಚರವಾದಾಗ ನಾಪತ್ತೆಯಾಗಿದ್ದರು. ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. […]

ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣೆ ಅಸಿಂಧು: ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಮೇಲ್ಮನವಿ ನ್ಯಾಯಾಲಯ

Saturday, November 18th, 2023
court

ಮಂಗಳೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣಾ ಪ್ರಕ್ರಿಯೆಯು ನಿಯಮಾನಸಾರ ನಡೆದಿಲ್ಲ ಹಾಗೂ ಸಂಘದ ಬೈಲಾ ನಿಯಮಗಳಡಿ ಮತದಾರರ ಪಟ್ಟಿಯನ್ನು ತಯಾರಿಸಿಲ್ಲ ಎಂಬುದಾಗಿ ಮಾನ್ಯ ಮಂಗಳೂರಿನ ಸಿವಿಲ್ ನ್ಯಾಯಾಲಯವು ಘೋಷಿಸಿದ್ದು ಪದಾಧಿಕಾರಿಗಳ ಚುನಾವಣೆಯನ್ನು ನಿಯಮಾನುಸಾರ ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯ ಪ್ರಕ್ರಿಯೆ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ […]

ನಗರದ 5 ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಜೈಲು ವಾಸ, ಒಂದು ಲಕ್ಷ ದಂಡ

Saturday, November 18th, 2023
consumer-court

ಮಂಗಳೂರು : ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗ್ರಹ ವಾಸದ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವನ್ನು ನೀಡುವಂತೆ ಆದ್ದೇಶಿಸಿದೆ. ಮಂಗಳೂರು ರಾಮ್ ಭವನದಲ್ಲಿ ಕಾರ್ಯಾ ಚ ರಿ ಸುತ್ತಿರುವ ನಗರದ ಮಾರಿಯನ್ infra structures ನ ಪಾಲುದಾರಾರಾಗಿರುವ ಉಜ್ವಲ ಡಿಸೋಜ ಮತ್ತು ನವೀನ್ cardoza ಹಾಗೂ ಅವರೊಂದಿಗೆ […]

ಸಹಾಕಾರಿ ಆಂದೋಲನ ಎಲ್ಲರ ಆಂದೋಲನವಾಗಬೇಕು : ಕೆ. ಎನ್. ರಾಜಣ್ಣ

Saturday, November 18th, 2023
sahakari-saptaha

ಮಂಗಳೂರು : ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ.ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ.ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ ಮಂಗಳೂರು, ಸಹಕಾರ ಇಲಾಖೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು […]

ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳದ ಜಮೀರ್ ಸಂವಿಧಾನಕ್ಕೂ ಬೆಲೆ ನೀಡದ ಸಚಿವ : ಡಾ.ಭರತ್ ಶೆಟ್ಟಿ ವೈ

Friday, November 17th, 2023
Bharath Shetty

ಮಂಗಳೂರು : ಎಪಿಜೆ ಅಬ್ದುಲ್ ಕಲಾಂ ಅವರಂತಹ ಶ್ರೇಷ್ಟ ರನ್ನು ರಾಷ್ಟ್ರಪತಿ ಮಾಡಿದ ಬಿಜೆಪಿ, ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಶಾಸಕ ಯು.ಟಿ ಖಾದರ್ ಅವರಿಗೂ, ಭಾರತೀಯ ಜನತಾ ಪಾರ್ಟಿ ಗೌರವವನ್ನು ಕೊಡುತ್ತದೆ. ಜಾತಿ ಮತ ಭೇದವನ್ನು ಪರಿಗಣಿಸಿಲ್ಲ. ಕಾಂಗ್ರೆಸ್ನ ವಲಸೆ ನಾಯಕ ಸಚಿವ ಜಮೀರ್ ಅಹ್ಮದ್ ಸದಾ ತನ್ನ ಕೋಮಿನ ಜನರನ್ನು ಹಿಂದುಗಳ ವಿರುದ್ದ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಎಂದು ಬಹಿರಂಗವಾಗಿದೆ ಎಂದು ಕರೆಯಲು ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ. ಬಿಜೆಪಿ‌ಯು ಶಾನ್ವಾಝ್ ,ಅಬ್ಬಾಸ್ […]

ಅಯ್ನಾಝ್ ಕೊಲೆ ವಿಚಾರ ಪೊಲೀಸರಲ್ಲಿ ಬಾಯಿ ಬಿಟ್ಟಿ ಆರೋಪಿ ಪ್ರವೀಣ ಚೌಗುಲೆ

Friday, November 17th, 2023
Ainaz

ಉಡುಪಿ : ಅಯ್ನಾಝ್ ಮತ್ತು ಕುಟುಂಬದ ಸದಸ್ಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರವೀಣ ಅರುಣ ಚೌಗುಲೆ ಮಹತ್ವದ ಅಂಶವನ್ನು ಬಾಯಿ ಬಿಟ್ಟಿದ್ದಾನೆ. ಮೃತ ಅಯ್ನಾಝ್ ವಿಚಾರದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಆಕೆಯನ್ನು ಬಹಳ ಹಚ್ಚಿಕೊಂಡಿದ್ದನು. ಅಯ್ನಾಝ್ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದನು. ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್​ಳನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಅಯ್ನಾಝ್ ತನ್ನ ಜೊತೆ ಮಾತ್ರ ಮಾತನಾಡಬೇಕು ಎಂಬ ನಿಯಮ ಹಾಕುತ್ತಿದ್ದನು, ನನ್ನ ಜೊತೆ ಮಾತ್ರ ಬೆರೆಯಬೇಕು […]

ಸ್ಪೀಕರ್ ಯು.ಟಿ ಖಾದರ್ ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ : ವೇದವ್ಯಾಸ್ ಕಾಮತ್

Friday, November 17th, 2023
ಸ್ಪೀಕರ್  ಯು.ಟಿ ಖಾದರ್  ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ : ವೇದವ್ಯಾಸ್ ಕಾಮತ್

ಮಂಗಳೂರು : ಮಾನ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್ ಅವರು ಸರ್ಕಾರದ ಈ ಕಾಮಗಾರಿಯ ಉದ್ಘಾಟನೆಯ ಕುರಿತು ಪತ್ರಿಕಾಗೋಷ್ಠಿ ನಡೆಸಲು ಅವರು ಸರ್ಕಾರದ ಭಾಗವೇ? ಮುಖ್ಯಮಂತ್ರಿಗಳು ಉದ್ಘಾಟಿಸಲಿರುವ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನಿತರ ಯಾವುದೇ ಜನಪ್ರತಿನಿಧಿಗಳು ಪತ್ರಿಕಾಗೋಷ್ಠಿ ನಡೆಸಿದ್ದರೆ ಅದನ್ನು ಒಪ್ಪಬಹುದು. ಆದರೆ ಸ್ಪೀಕರ್ ಅವರು ಸರ್ಕಾರದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸುವುದು ಯಾವುದೇ ಕಾರಣಕ್ಕೂ ಸಮ್ಮತವಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ಸ್ಪೀಕರ್ ಆದವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ […]

ನೇಜಾರು ಕೊಲೆ ಪ್ರಕರಣ: ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Friday, November 17th, 2023
Hebbalkar-Udupi

ಉಡುಪಿ : ಉಡುಪಿ ಜಿಲ್ಲೆಯ ನೇಜಾರು ಸಂತ್ರಸ್ತ ಕುಟುಂಬದ ಮನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಭೇಟಿ ನೀಡಿದರು. ಕಳೆದ ಭಾನುವಾರ ತಾಯಿ, ಮಗಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಮೃತ ಹಸೀನಾ ಪತಿ ನೂರ್ ಮೊಹಮದ್ ಹಾಗೂ ಅವರ ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಭೇಟಿಯಾದ ಸಚಿವರು ಅವರಿಗೆ ಸಾಂತ್ವನ ಹೇಳಿದರು. ಕುಟುಂಬ ಸದಸ್ಯರಿಗೆ ನ್ಯಾಯಕುಟುಂಬದ ನಾಲ್ಕ […]

ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಹಾವು ಕಡಿತ

Friday, November 17th, 2023
Sanjeeva-Matandooru

ಪುತ್ತೂರು : ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾವು ಕಡಿತಕ್ಕೊಳಗಾದ ಆಸ್ಪತ್ರೆಗೆ ದಾಖಲಾದ ಘಟನೆ ಘಟನೆ ನ.16 ರಂದು ರಾತ್ರಿ ನಡೆದಿದೆ. ರಾತ್ರಿಯ ಹೊತ್ತು ತನ್ನ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರಿಗೆ ಕಡಂಬಳ (ಕಟ್ಟಮಳಕ್ಕರಿ) ಕಡಿದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವಿನ ಕಡಿತ ತರಚಿದಂತ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ವಾಕಿಂಗ್ ಸಂದರ್ಭ ಅವರ ಜೊತೆಗಿದ್ದ ಹಿರೇಬಂಡಾಡಿ .ಪಂ. ಅಧ್ಯಕ್ಷ ಹಮ್ಮಬ್ಬ […]