ಮನೆಯೊಳಗೆ ನುಗ್ಗಿ ನಾಲ್ವರ ಭೀಕರ ಹತ್ಯೆ, ನಾಲ್ಕು ಬಾರಿ ವಾಹನ ಬದಲಿಸಿ ಕೊಲೆಗಾರ ತಪ್ಪಿಸಿಕೊಂಡಿದ್ದ

Tuesday, November 14th, 2023
Udupi-Murder

ಉಡುಪಿ : ನೇಜಾರುವಿನ ತೃಪ್ತಿ ನಗರದಲ್ಲಿ ಮನೆಯೊಳಗೆ ನುಗ್ಗಿ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಚಾಲಾಕಿ ಹಂತಕ ತಪ್ಪಿಸಿಕೊಳ್ಳಲು ನಾಲ್ಕು ಬಾರಿ ವಾಹನ ಬದಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಭಾನುವಾರ ನವೆಂಬರ್ 12 ರಂದು ಒಂದೇ ಕುಟುಂಬದ ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಗಳಾದ ಹಸೀನಾ (48) ಮತ್ತು ಅವರ ಮಕ್ಕಳಾದ ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) […]

ದಪ್ಪ ಆಗಿದ್ದೇನೆ ಎಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮಹಡಿಯಿಂದ ಜಿಗಿದು ಆತ್ಮಹತ್ಯೆ

Tuesday, November 14th, 2023
Prakruti Shetty

ಮಂಗಳೂರು : ಎಷ್ಟೇ ಪ್ರಯತ್ನ ಪಟ್ಟರು ತೂಕ ಇಳಿಸಲು ಸಾಧ್ಯವಾಗದೆ ವೈದ್ಯಕೀಯ ವಿದ್ಯಾರ್ಥಿನಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ ನಲ್ಲಿ ನಡೆದಿದೆ. ಬೆಳಗಾವಿಯ ಅಥಣಿ ಮೂಲದ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಪ್ರಕೃತಿ ಶೆಟ್ಟಿ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕಾಲೇಜಿನ ಹಾಸ್ಟೆಲ್‌ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ” ನಾನು ತುಂಬಾ ದಪ್ಪಾ […]

ಮಂಗಳೂರು : ಲಕ್ಷ್ಮೀ ಪ್ಯಾನ್ಸಿ ಸೆಂಟರ್ ನಲ್ಲಿ ದೀಪಾವಳಿ ಗೂಡು ದೀಪಗಳ ಮಾರಾಟ

Saturday, November 11th, 2023
Laxmi-Fancy

ಮಂಗಳೂರು : ವರ್ಷಕ್ಕೊಮ್ಮೆ ಬರುವ ದೀಪಾವಳಿ ಯನ್ನು ಆಚರಿಸಲು ಜನ ಸಿದ್ದರಾಗಿದ್ದಾರೆ. ಮನೆ ಯನ್ನು ಬಣ್ಣದ ದೀಪಗಳಿಂದ ಅಲಂಕರಿಸಲು ಗೂಡು ದೀಪಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ ಅಕಾರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅತೀ ಕಡಿಮೆ ಬೆಲೆ ಎಂದರೆ […]

ಮೋಸ, ವಂಚನೆ ಮಾಡಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಕೊಲೆ, ಆರೋಪಿಗೆ ಒಂದು ವರ್ಷ ಜೈಲುಶಿಕ್ಷೆ

Saturday, November 11th, 2023
Padmapriya

ಉಡುಪಿ : 2008 ರಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ 2008 ಜೂನ್ 10ರಂದು ನಾಪತ್ತೆಯಾಗಿದ್ದರು, ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಆತುಲ್ […]

ನವೆಂಬರ್ 21ರಂದು ಪತ್ರಕರ್ತರ ದ.ಕ ಜಿಲ್ಲಾ ಸಮ್ಮೇಳನ : ಲಾಂಛನ ಬಿಡುಗಡೆ

Saturday, November 11th, 2023
Sammelana

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿ ಯಿಂದ ನವೆಂಬರ್ 21ರಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿರುವ 4 ನೆ ಜಿಲ್ಲಾ ಸಮ್ಮೇಳನದ ಲಾಂಛನ ವನ್ನು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾಸ ದಸ್ಯರಾದ ಶ್ರೀ. ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ […]

ಸುಳ್ಯ ದ ಅಂತಾರಾಜ್ಯ ರಸ್ತೆಯಲ್ಲಿ ಕಾಡಾನೆ ಓಡಾಟ, ತಪ್ಪಿಸಿಕೊಂಡ ಬೈಕ್ ಸವಾರರು

Friday, November 10th, 2023
Sullia-Elephant

ಸುಳ್ಯ : ಜಾಲ್ಸೂರು – ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಎದುರಿನಿಂದ ಬಂದ ಬೈಕ್ ಸವಾರರು ಕೂದಳೆಲೆ ಅಂತರದಿಂದ ಪಾರಾದ ಘಟನೆ ಪಂಜಿಕಲ್ಲಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಶುಕ್ರವಾರ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷಗೊಂಡಿದೆ. ಅಂತರ್‌ ರಾಜ್ಯ ರಸ್ತೆಯಲ್ಲಿ ಆನೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ರಸ್ತೆಯಾಗಿ ಬಂದ ಬೈಕ್ ಸವಾರರು ತಿರುವಿನಲ್ಲಿ ಕೂದಳೆಲೆ ಅಂತರದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಿದ್ದಾರೆ. ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಪರಿಸರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು […]

ದಕ್ಷಿಣ ಕನ್ನಡ : ಬ್ಯಾಂಕಿಂಗ್ ತೊಟ್ಟಿಲುವಿನಿಂದ ಬ್ಯಾಂಕಿಂಗ್ ವಂಚನೆಯ ಮಜಲುವರೆಗೆ

Friday, November 10th, 2023
bank-fraud

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ನ್ಯಾಯಾಲಯ, ಬ್ಯಾಂಕಿಂಗ್ ವಂಚನೆಯ ಪ್ರಕರಣಗಳಿಗೆ ನೀರೆರೆಯುವಂತೆ ಸಾಗುತ್ತಿದ್ದು, ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆ ಅರ್ಜಿಗಳನ್ನು ಸುಸ್ಥಿದಾರರಿಗೆ ನೋಟೀಸು ಜ್ಯಾರಿಗೊಳಿಸದೆಯೇ ಮತ್ತು ಕನಿಷ್ಟ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸದೆ, ಬ್ಯಾಂಕ್ ವಂಚನೆಯ ಬಗ್ಗೆಗಿನ ಪೂರಕ ಧಾರಾಳ ಸಾಕ್ಸ್ಯಧಾರಗಳ ಲಭ್ಯತೆಯ ಹೊರತಾಗಿಯೂ ಕೂಡಾ ಪೊಲೀಸ್ ಇಲಾಖೆ ಪ್ರಥಮ ವರ್ತಮಾನವಾದ ಪ್ರಕರಣಗಳಲ್ಲಿ ದೋಷ ನಿರಾರೋಪಣ, ಬಿ. ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುವ ಮಟ್ಟಿಗೆ ಇಳಿದಿದೆ. ದ.ಕ ಮಂಗಳೂರು ಪೀಪಲ್ಸ್ ಯೂನಿಯನ್ ಪಾರ್ ಸಿವಿಲ್ ಲಿಬರ್ಟೀಸ್ […]

ಸಹಜ್ ಕೆ.ವಿ. ಅವರಿಗೆ ಎನ್ಐಟಿಕೆ ಯಿಂದ ಡಾಕ್ಟರೇಟ್ ಪದವಿ

Friday, November 10th, 2023
Sahaj-KV

ಮಂಗಳೂರುಃ ಇಲ್ಲಿನ ಪ್ರತಿಷ್ಠಿತ ನೇಶನಲ್ ಇನ್ಸಿಟ್ಯೂಟ್ ಆಪ್ ಟೆಕ್ನಲಾಜಿ- ಕರ್ನಾಟಕ ( ಎನ್ಐಟಿಕೆ ) ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ. ಜಲ ಸಂಶೋಧನೆ ಮತ್ತು ಸಾಗರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಾರಿಜ ಅವರ ಉಪಸ್ಥಿತಿಯಲ್ಲಿ ನವೆಂಬರ್ 4ರಂದು ಸುರತ್ಕಲ್ ನಲ್ಲಿ ನಡೆದ ಎನ್ಐಟಿಕೆ 21ನೇ ಘಟಿಕೋತ್ಸವದಲ್ಲಿ ಸಹಜ್ ಕೆ.ವಿ. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ […]

ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

Thursday, November 9th, 2023
ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

ಮಂಗಳೂರು: ಕರ್ನಾಟಕ ಬ್ಯಾಂಕ್​ ನ ಪ್ರಧಾನ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ವಾದಿರಾಜ ಕೆ.ಎ(51) ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಹೊಟ್ಟೆ ಮತ್ತುಕುತ್ತಿಗೆ ಮೇಲೆ ಚೂರಿ ಇರಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಗರ ಹೊರವಲಯದ ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಕತ್ತುಕೊಯ್ದ ಸ್ಥಿತಿಯಲ್ಲಿ ಕರ್ನಾಟಕ ಬ್ಯಾಂಕ್​ನ ಜನರಲ್ ಮ್ಯಾನೇಜರ್ ಪತ್ತೆಯಾಗಿದ್ದು, ಇದೊಂದು ಕೊಲೆ ಯತ್ನವೋ ಅಥವಾ ತಾವೇ ಆತ್ಮಹತ್ಯೆ ಮಾಡಿಕೊಂಡರೋ ಎನ್ನುವ ಬಗ್ಗೆ ಸಂಶಯ ಮೂಡಿದೆ. ವಾದಿರಾಜ ಅವರ ಪತ್ನಿ ಮಕ್ಕಳು ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದ್ದು, […]

ಮಹಿಳೆಯರು ನೀರು ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್

Thursday, November 9th, 2023
Jala-Deepavali

ಮಂಗಳೂರು : ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ ನಡೆದ ಜಲ ದೀಪಾವಳಿ “ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿದೆಡೆ ಮಳೆ ಇಲ್ಲದೆ […]