ಮೆಸ್ಕಾಂ ಅಧಿಕಾರಿಗಳ ಕಾರಿನ ಮೇಲೆಯೇ ಬಿದ್ದ ಬೃಹತ್ ವಿದ್ಯುತ್ ಟವರ್

Monday, November 6th, 2023
Power-line

ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆ-ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್‌ ಬಳಿ ವಿದ್ಯುತ್‌ ಟವರ್‌ ಉರುಳಿ ಬಿದ್ದು ಅಧಿಕಾರಿಗಳ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಅದೃಷ್ಟವಶತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಭಾನುವಾರ ಸಂಜೆ ಸುರಿದ ಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತವಾಲುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗಕ್ಕೆ ಮಾಹಿತಿ ನೀಡಿದರು. ಕೂಡಲೇ ಮೆಸ್ಕಾಂ ಅಧಿಕಾರಿಗಳು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ […]

ಶತಾಯುಷಿ ಉಡುಪಿಯ ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ನಿಧನ

Monday, November 6th, 2023
Krishna-Bhat

ಉಡುಪಿ : ತುಳು ಲಿಪಿಕಾರ, ಪಂಚಾಂಗ ಕರ್ತ, ಸಾಹಿತಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ಅಂಗಡಿಮಾರ್ ಕೃಷ್ಣ ಭಟ್ (102) ನಿಧನರಾಗಿದ್ದಾರೆ. ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಮತ್ತೋರ್ವ ಪುತ್ರನೊಂದಿಗೆ ವಾಸವಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ ರಚನಕಾರರಾಗಿದ್ದರು. ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ ಸಹಿತ ಅನೇಕ […]

ನವೆಂಬರ್ 5 : ಬುಡನ್‌ಗಿರಿಯಲ್ಲಿ ದತ್ತಮಾಲಾ‌ ಅಭಿಯಾನ‌ : 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ​

Saturday, November 4th, 2023
Datta Peeta

ಚಿಕ್ಕಮಗಳೂರು: ನವೆಂಬರ್ 5 ರಂದು ಗುರು ದತ್ತಾತ್ರೇಯ, ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌ ನಡೆಯಲಿದೆ. ಈ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ‌ ಬಂದೋಬಸ್ತ್ ಮಾಡಲಾಗಿದೆ. ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ‌ ದರ್ಗಾ ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿ 26 ಚೆಕ್‌ಪೋಸ್ಟ್, 49 ಸೆಕ್ಟರ್ ಆಫೀಸರ್ ನೇಮಿಸಲಾಗಿದೆ. ಸೂಕ್ಷ್ಮ‌, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್‌ ಕಣ್ಗಾವಲು ಇರಿಸಿದ್ದು, ಮುನ್ನೆಚ್ಚರಿಕೆಯಿಂದ ಚಿಕ್ಕಮಗಳೂರಿನ […]

ಗಲ್ಫ್ ಉದ್ಯೋಗಿ ಜೊತೆ 19 ದಿನ ಗಳ ಹಿಂದೆ ವಿವಾಹವಾದ ಮಹಿಳೆ ಆತ್ಮಹತ್ಯೆ

Saturday, November 4th, 2023
ಗಲ್ಫ್ ಉದ್ಯೋಗಿ ಜೊತೆ 19 ದಿನ ಗಳ ಹಿಂದೆ ವಿವಾಹವಾದ ಮಹಿಳೆ ಆತ್ಮಹತ್ಯೆ

ಕಾಸರಗೋಡು : ಕೆಲವು ದಿನ ಗಳ ಹಿಂದೆ ವಿವಾಹವಾದ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ದಲ್ಲಿ ನಡೆದಿದೆ. ಪೆರ್ಲ ಉಕ್ಕಿನಡ್ಕ ದ ಮುಹಮ್ಮದ್ ರವರ ಪುತ್ರಿ ಉಮೈರಾ ಬಾನು (22) ಮೃತ ಪಟ್ಟವರು. ಉಮೈರಾ ಬಾನು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಲ್ಫ್ ಉದ್ಯೋಗಿ ಆಗಿರುವ ಉಕ್ಕಿ ನಡ್ಕ ದ ತಾಜುದ್ದೀನ್ ಜೊತೆ 19 ದಿನ ಗಳ ಹಿಂದೆ ವಿವಾಹವಾಗಿತ್ತು. ಕುಟುಂಬಸ್ಥರು ಶುಕ್ರವಾರ ಬೆಳಿಗ್ಗೆ ಸಂಬಂಧಿಕರ […]

ನೇತ್ರಾವತಿ ನದಿಯ ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Saturday, November 4th, 2023
AMR-Dam

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ನೇತ್ರಾವತಿ ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದು, ಎ.ಎಂ‌.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ನೀಡಿದ ಮಾಹಿತಿ ಪ್ರಕಾರ ಶವ ಸಂಪೂರ್ಣ ಕೊಳೆತು ಹೋಗಿದ್ದು ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿ […]

ನವೆಂಬರ್ 24 ರೊಳಗೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ಜಯ ಪ್ರಕಾಶ್ ಹೆಗ್ಡೆ

Saturday, November 4th, 2023
ನವೆಂಬರ್ 24 ರೊಳಗೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ಜಯ ಪ್ರಕಾಶ್ ಹೆಗ್ಡೆ

ಉಡುಪಿ : ವಿವಾದಿತ ಜಾತಿ ಗಣತಿ ವರದಿಯನ್ನು ನವೆಂಬರ್ 24 ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಶನಿವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಡೆ, ಜನಗಣತಿ ಪರ ಅಥವಾ ವಿರೋಧವಾಗಿ ನೀಡಿರುವ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಜಾತಿ ಗಣತಿ ವರದಿಯನ್ನು ಸರ್ಕಾರ ಅಂಗೀಕರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆ ಈ ರೀತಿಯ ಹೇಳಿಕೆ ನೀಡಿದರು. ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದ […]

ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಪತ್ತೆ

Friday, November 3rd, 2023
shashikala

ಉಜಿರೆ : ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಉಜಿರೆ ಬೆಳಾಲುವಿನ ಮಾಚಾರು ಸಮೀಪ ಕೆಂಪನೊಟ್ಟುವಿನಲ್ಲಿ ವರದಿಯಾಗಿದೆ. ಮಾಚಾರು ನಿವಾಸಿ ಸುಧಾಕರವರ ಪತ್ನಿ ಶಶಿಕಲಾ (27 ) ಮೃತ ಮಹಿಳೆ. ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತರಿಗೆ 6 ವರ್ಷದ ಹೆಣ್ಣು ಮಗಳು ಇದ್ದಾಳೆ.

ತುಲಾಭಾರದ ವೇಳೆ ಅವಘಡ, ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Friday, November 3rd, 2023
lakshmi-hebbalkar

ಉಡುಪಿ : ತುಲಾಭಾರದ ವೇಳೆ ಆದ ಅವಘಡದ ಹಿನ್ನೆಲೆಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಆರೋಗ್ಯದ ಕುರಿತಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಆಪ್ತ ಸಹಾಯಕರಿಗೆ ಕರೆ ಮಾಡಿ ಸ್ವಾಮೀಜಿಗಳ ಆರೋಗ್ಯ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದರು. ಶ್ರೀಗಳಿಗೆ ಸಣ್ಣ ಗಾಯವಾಗಿದ್ದನ್ನು, ಗಾಭರಿಪಡುವಂತದ್ದು ಏನಿಲ್ಲ . ಈಗ ಆರೋಗ್ಯವಾಗಿದ್ದು, ನವದೆಹಲಿಯಿಂದ ಅಯೋಧ್ಯೆಯತ್ತ ಶ್ರೀಗಳು ಪ್ರಯಾಣಿಸುತ್ತಿದ್ದಾರೆ […]

ವರದಕ್ಷಿಣೆ ಕಿರುಕುಳ, ಡೈರಿ ರಿಚ್‌ನ ಐಸ್ ಕ್ರೀಂ ಮಾಲಿಕ ಸೇರಿ ಐವರ ಬಂಧನ

Friday, November 3rd, 2023
dairy-rich-rajesh

ಸುಳ್ಯ : ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕ್ಕಿದ್ದು, ಗೋವಿಂದರಾಜನಗರ ಪೊಲೀಸರು ಘಟನೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಭಂದಿಸಿದಂತೆ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡೈರಿ ರಿಚ್‌ನ ಐಸ್ ಕ್ರೀಂ ಮಾಲಿಕ ರಾಜೇಶ್, ಐಶ್ವರ್ಯಾ ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ನ್ನು ಬಂಧಿಸಿದ್ದಾರೆ. ಸಂಸಾರದಲ್ಲಿ ಬಿರುಕಿಗೆ ಪ್ರಚೋದನೆ ನೀಡಿದ್ದ ಸಂಬಂಧಿಕರಾದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ. ಮೃತ […]

ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

Thursday, November 2nd, 2023
citu

ಮಂಗಳೂರು : ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು ಹೊರಟಿದೆ. ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು […]