ದಕ್ಷಿಣ ಕನ್ನಡ ಡಿಸಿ ಭೇಟಿ ಮಾಡಿದ ಮಂಗಳೂರು ಲಾರಿ ಮಾಲೀಕರ ಯೂನಿಯನ್ : ಬೇಡಿಕೆ ಈಡೇರದಿದ್ದಲ್ಲಿ ಲಾರಿ ಮುಷ್ಕರ

Saturday, September 16th, 2023
Lorry-Union

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘ (ರಿ.) ಇದರ ಪದಾಧಿಕಾರಿಗಳು ಇಂದು ಲಾರಿ ಮಾಲೀಕರ ಸಮಸ್ಯೆಗಳ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರಿಗೆ ಸೆ. 16 ರಂದು ಮನವಿ ಸಲ್ಲಿಸಿದರು. ಸರಕಾರ ನಿಗದಿ ಪಡಿಸಿದ ಬಾಡಿಗೆ ದರ ನೀಡುವಂತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಾರಿಗೆ ಅಧಿಕಾರಿಗಳ ಸಭೆ ನಡೆಸುವಂತೆ ಕೋರಲಾಯಿತು. ವಾರದೊಳಗೆ ಬಾಡಿಗೆ ದರ ನಿಗದಿಪಡಿಸದೇ ಇದ್ದಲ್ಲಿ ಕಲ್ಲಿದ್ದಲು ಸೇರಿದಂತೆ ಇತರ ಎಲ್ಲ ಸರಕು ಸಾಗಾಣಿಕೆಯನ್ನು ಸ್ವಯಂಪ್ರೇರಿತ […]

ನಮ್ಮ ಮಂಗಳೂರನ್ನು ಸ್ವಚ್ಛ, ಸಮೃದ್ಧ, ಸುಂದರ, ಜನಸೇಹಿ ಮಂಗಳೂರನ್ನಾಗಿ ಮಾಡೋಣ : ಸುಧೀರ್ ಶೆಟ್ಟಿ

Saturday, September 16th, 2023
Ramakrishna-Math

ಮಂಗಳೂರು : “ಮಂಗಳೂರು ನಗರವನ್ನು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ನಮಗೆ ರಾಮಕೃಷ್ಣ ಮಠದ ಮಾರ್ಗದರ್ಶನ ಅಗತ್ಯ. ಈ ಮೂಲಕ ನಮ್ಮ ಮಂಗಳೂರನ್ನು ಸ್ವಚ್ಛ, ಸಮೃದ್ಧ, ಸುಂದರ, ಜನಸೇಹಿ ಮಂಗಳೂರನ್ನಾಗಿ ಮಾಡೋಣ” ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಸುಧೀರ್ ಶೆಟ್ಟಿ ಹೇಳಿದರು. ಸ್ವಚ್ಛ ಮಂಗಳೂರು ಅಭಿಯಾನ ಪುನರಾರಂಭಿಸುವ ಬಗ್ಗೆ ಪೂರ್ವಭಾವಿ ಯೋಜನೆಗಳನ್ನು ಚರ್ಚಿಸಲು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ಗಳ ಸಭೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ […]

ಓಝೋನ್ ಪದರ ಸಂರಕ್ಷಿಸುವ ಭರದಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣರಾಗಿದ್ದೇವೆ – ಡಾ. ಸಿದ್ಧರಾಜು ಎಂ.ಎನ್

Saturday, September 16th, 2023
ozone

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ತೃತೀಯ ವರ್ಷದ ಜೀವ ವಿಜ್ಞಾನ ವಿದ್ಯಾರ್ಥಿಗಳು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಅಂತರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ದರಾಜು M N ಅವರು ಮಾಂಟ್ರಿಯಲ್ ಒಪ್ಪಂದ, ಕಿಗಲೀ ಒಪ್ಪಂದ ಹಾಗು CFC, HCFC ಗಳ ಉಪಯೋಗದಿಂದಾಗುವ ಓಜೋನ್ ಪದರ ಸವಕಳಿ ಮತ್ತು ತಾಪಮಾನ ಏರಿಕೆ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿ, CFC ಗಳ ಉತ್ಪಾದನೆ ಮತ್ತು ಬಳಸುವಿಕೆಯನ್ನು […]

ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ತೀರ್ಥ ಸ್ನಾನ

Friday, September 15th, 2023
someshwara-thirtha

ಮಂಗಳೂರು : ಪುರಾಣ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ಶ್ರಾವಣ ಅಮವಾಸ್ಯೆ ಪ್ರಯುಕ್ತ ತೀರ್ಥ ಸ್ನಾನ ಮಾಡಿದರು. ಸಮುದ್ರ ಸ್ನಾನದ ಮೊದಲು ಭಕ್ತಾಧಿಗಳು ಕಡಲಿಗೆ ಅಡಿಕೆ, ವೀಳ್ಯವನ್ನ ಸಮರ್ಪಿಸಿ ತೀರ್ಥ ಸ್ನಾನದ ಬಳಿಕ ಸೋಮನಾಥನಿಗೆ ವಿಶೇಷ ಸೇವೆಗಳನ್ನು ನೀಡಿತ್ತಾರೆ ಸೋಮೇಶ್ವರದ ಸೋಮನಾಥ ದೇವಸ್ಥಾನದ ಉತ್ಸವಗಳಲ್ಲಿ ಶ್ರಾವಣ ಅಮವಾಸ್ಯೆಯ ಪವಿತ್ರ ಸಮುದ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆದಿದೆ. ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರದ ಕಡಲ ತೀರಕ್ಕೆ ಸಹಸ್ರಾರು […]

ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

Friday, September 15th, 2023
football

ಮಂಗಳೂರು : ಪಂದ್ಯಾಟ ದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ, ಕ್ರೀಡಾಕೂಟ ಹಬ್ಬದ ವಾತಾವರಣದಲ್ಲಿ ನಡೆಯುತ್ತಿದ್ದು ಸಂಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಬಿ.ಎಂ. ಶಾಲೆಯ ಸಂಚಾಲಕ ಎಸ್.ಎಸ್.ಸಾಲಿನ್ ಅಭಿಪ್ರಾಯಪಟ್ಟರು. ಉಳ್ಳಾಲ ಬಿ.ಎಂ.ಶಾಲೆಯ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಎರಡು ದಿನ ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ಬಾಲಕ-ಬಾಲಕಿಯರ ಫುಟ್ಬಾಲ್ ಪಂದ್ಯಾಟದ ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಉದ್ಘಾಟಿಸಿ, ಜೀವನದಲ್ಲಿ ಏನೇ […]

ಡೆಂಗ್ಯೂ ಹಾಗೂ ನಿಫಾ ವೈರಸ್ ಕುರಿತು ಆತಂಕ ಬೇಡ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Friday, September 15th, 2023
ಡೆಂಗ್ಯೂ ಹಾಗೂ ನಿಫಾ ವೈರಸ್ ಕುರಿತು ಆತಂಕ ಬೇಡ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು : ಜಿಲ್ಲೆಯಲ್ಲಿ ಡೆಂಗ್ಯೂ, ನಿಫಾ ವೈರಸ್ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳ ಲಕ್ಷಣ, ಹರಡುವಿಕೆ ನಿಯಂತ್ರಣ ಸೇರಿದಂತೆ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣವನ್ನು ನೀಡಿ ಇವುಗಳ ನಿಯಂತ್ರಣಕ್ಕೆ ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಡೆಂಗ್ಯೂ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣದಂತೆ ಡೆಂಗ್ಯೂ ನಿಯಂತ್ರಣ ಮಾಡುವುದು ಅತೀ ಮುಖ್ಯ […]

ಸೆಂಟ್ರಿಂಗ್ ಶೀಟ್, ಜಾಕ್ ಮತ್ತು ಪೈಪ್‌ಗಳನ್ನು ಕದ್ದ ವ್ಯಕ್ತಿಯ ಬಂಧನ

Thursday, September 14th, 2023
padubidre-police

ಮೂಡಬಿದ್ರೆ : ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಮೂಡಬಿದ್ರೆ ಠಾಣಾ ವ್ಯಾಪ್ತಿಯ ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಳವು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ತೋಡಾರು ಗ್ರಾಮ ಇದಾಯತ್ ನಗರ ನಿವಾಸಿ ಮಹಮ್ಮದ್ ಸಾಹಿಲ್ (21) ಬಂಧಿತ ಆರೋಪಿ ಬಂಧಿತ ಆರೋಪಿಯಿಂದ ಸುಮಾರು 2,50,000 ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ಸ್ವಾಧೀನ ಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ […]

ಪಡೀಲ್ ಅಂಡರ್ ಪಾಸ್‌ ನ ಗೋಡೆಗೆ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Thursday, September 14th, 2023
Bike-Accident

ಮಂಗಳೂರು : ನಗರದ ಪಡೀಲ್ ಅಂಡರ್ ಪಾಸ್‌ ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಲ್ಲಿ ಮೂರು ಮಂದಿ ಸವಾರಿ ಮಾಡಿದ್ದು, ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಅಂಡರ್‌ಪಾಸ್‌ನ ಗೋಡೆಗೆ ಬೈಕ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಟಿಕೆಟ್ ಗಾಗಿ ಹಣ ಪ್ರಕರಣ : ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ: ಬಸವರಾಜ ಬೊಮ್ಮಾಯಿ

Thursday, September 14th, 2023
bommai

ಮಂಗಳೂರು : ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರರಿಂದ ವಂಚನೆಯಾಗಿರುವ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಕೇಸ್ ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಟಿಕೆಟ್ ಕೊಡಿಸುತ್ತೇವೆ ಎಂದು ಹಣ […]

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಸ್ಕರ್ ಫನಾರ್ಂಡಿಸ್ ಅವರ ಪುಣ್ಯಸ್ಮರಣೆ

Thursday, September 14th, 2023
Oscar

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಮಾಜಿ ಸಚಿವ ಆಸ್ಕರ್ ಫನಾರ್ಂಡಿಸ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ಲೋಕಸಭಾ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ, ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಆಸ್ಕರ್ ಫನಾರ್ಂಡಿಸ್ ಅವರು ಸಾಮಾನ್ಯ ಕಾರ್ಯಕರ್ತರಂತೆ ಗುರುತಿಸಿಕೊಂಡಿದ್ದರು. ಮೃದು, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ಓರ್ವ ಅಜಾತ ಶತ್ರು. ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಅವರ ಬದುಕು […]