ಬಿಬಿಎಂಪಿಯಿಂದ ಸುಮಾರು 8 ಸಾವಿರ ಕೋಟಿ ಬಜೆಟ್ ಮಂಡನೆ

Monday, February 17th, 2014
mahanagara-palike

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2014-2015ನೇ ಸಾಲಿನ ಬಜೆಟ್‌ನ್ನು ಸೋಮವಾರ ಮಂಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಮಾರು 7779.51 ಕೋಟಿ ರುಪಾಯಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್ ಶಿವಪ್ರಸಾದ್ ಅವರು ಮಂಡಿಸಿದ್ದಾರೆ. ಬಿಬಿಎಂಪಿ ಬಜೆಟ್‌ನ ಪ್ರಮುಖ ಅಂಶಗಳು: ಬೆಂಗಳೂರಿನ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂಪಾಯಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ‘ಹಸಿರು’ ಪೊಲೀಸ್ ತಂಡ ರಚನೆ ಹೊಸ […]

ನೆಹರೂ ಮೈದಾನದಲ್ಲಿ 35 ತಳಿಗಳ 250 ಶ್ವಾನ ಪ್ರದರ್ಶನ

Monday, February 17th, 2014
Swana

ಮಂಗಳೂರುಃ  ಮಂಗಳೂರಿನ ನೆಹರೂ ಮೈದಾನದಲ್ಲಿ ಶ್ವಾನ ಪ್ರದರ್ಶನ ಕಾರ್ಯಕ್ರಮವು ಭಾನುವಾರ ನಡೆಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಆರ್‌.ಶ್ರೀಕರ ಪ್ರಭು ಉದ್ಘಾಟಿಸಿದರು, ಈ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು  ಮಂಗಳೂರಿನಲ್ಲಿ  ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮಂಗಳೂರಿನಲ್ಲಿ  ಕೆನೈನ್‌ ಕ್ಲಬ್‌ ಅಯೋಜಿಸಿದ ಈ  ಶ್ವಾನ ಪ್ರದರ್ಶನ ಕಾರ್ಯಕ್ರಮವು ಮಂಗಳೂರಿನ ಕಡೆಗೆ ದೇಶದ ಗಮನ ಸೆಳೆಯುವಲ್ಲಿ ಸಹಾಯಕವಾಗುತ್ತದೆ. ಈ ಶ್ವಾನ ಪ್ರದರ್ಶನದಲ್ಲಿ ದೇಶದ ವಿವಿದೆಡೆಯ ಸುಮಾರು 35 ತಳಿಗಳ 250 ಶ್ವಾನಗಳನ್ನು ತರಲಾಗಿತ್ತು. ಮುಖ್ಯವಾಗಿ ಮಿನಿ ಯೇಚರ್‌ ಪಿಂಚರ್‌, ಜರ್ಮನ್‌ […]

ಸರ್ಕಾರಿ ನೌಕರರಿಗೆ ಶೀಘ್ರ ಆರೋಗ್ಯ ಕಾರ್ಡ್: ಖಾದರ್

Friday, February 14th, 2014
U-T-Khader

ಮಂಗಳೂರು: ಸರ್ಕಾರಿ ನೌಕರರಿಗೆ ಉಪಯುಕ್ತ ಚಿಕಿತ್ಸೆ ಲಭಿಸುವಂತಾಗಲು ರಾಜ್ಯದಲ್ಲಿ ‘ಆರೋಗ್ಯ ಸಂಜೀವಿನಿ’ ಕಾರ್ಯಕ್ರಮ ಇಷ್ಟರಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಇಲಾಖೆಗಳ 72 ಲಕ್ಷ ಸರ್ಕಾರಿ ನೌಕರರು, ಅವರ ಕುಟುಂಬಿಕರು ಈ ಕಾರ್ಯಕ್ರಮದ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಆರೋಗ್ಯಶ್ರೀ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಇದರಿಂದ ಚಿಕಿತ್ಸೆಗೆ ವೆಚ್ಚ ಮಾಡಿದ ಮೊತ್ತವನ್ನು ವಾಪಾಸ್ ನೀಡುವಲ್ಲಿನ […]

ಇಂದು, ನಾಳೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ

Friday, February 14th, 2014
Lyrics-Conference

ಮಂಗಳೂರು: ಇದೇ ಮೊದಲ ಬಾರಿಗೆ ಫೆ. 14 ರಂದು ಬೆಂಗರೆಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ಹೇಳಿದ್ದಾರೆ. ಅಳಿವೆ ಬಾಗಿಲಿನಲ್ಲಿ ಬುಧವಾರ ದೋಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಸಾಹಿತ್ಯ ಪ್ರೇಮಿಗಳ ದಿನಾಚರಣೆ’ ಶೀರ್ಷಿಕೆ ಮತ್ತು ‘ಮಾನವ ಕುಲಂ ತಾನೊಂದೆ ವಲಂ’ ಎಂಬ ಸದಾಶಯದೊಂದಿಗೆ ಸಾಹಿತಿ ನಾ. ಮೊಗಸಾಲೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಫೆ. 14 ರಂದು 5 ರಿಂದ 5.30ವರೆಗೆ ಅಧ್ಯಕ್ಷರೊಂದಿಗೆ ಸಮುದ್ರ ವಿಹಾರ ಕಾರ್ಯಕ್ರಮ ಮೆರವಣಿಗೆಯಂತೆ […]

ಅಮಾಯಕರ ವಿರುದ್ಧದ ಕೇಸು, ಉಪವಾಸ ಸತ್ಯಾಗ್ರಹ: ಪೇಜಾವರಶ್ರೀ

Friday, February 14th, 2014
Pejavara-Shree

ಮಂಗಳೂರು: ಉಳ್ಳಾಲ ಗಲಭೆಗೆ ಸಂಬಂಧಿಸಿ ಅಮಾಯಕರ ಬಂಧನ ನಿಲ್ಲಿಸಬೇಕು, ಈಗಾಗಲೇ ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು, ಸೊತ್ತು ಹಾನಿಗೀಡಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗುರುವಾರ ಉಳ್ಳಾಲದಲ್ಲಿ ನಡೆದ ‘ಸಂತ್ರಸ್ತರ ಕಡೆಗೆ ಸನ್ಯಾಸಿಗಳ ನಡಿಗೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರನ್ನು ಒತ್ತಾಯಿಸಲಾಗಿದೆ. ಶೀಘ್ರವೇ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಉಳ್ಳಾಲದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ಸ್ವಾಮೀಜಿಗಳು ನೀಡಿದ್ದಾರೆ. ಉಳ್ಳಾಲದ ಮೊಗವೀರಪಟ್ಣದಲ್ಲಿ ಗಲಭೆ ಸಂತ್ರಸ್ತರ ಮನೆಗೆ ಭೇಟಿ […]

2014 -15ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

Friday, February 14th, 2014
siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 2014 -15ನೇ ಸಾಲಿನ ರಾಜ್ಯ ಬಜೆಟ್ ನ ಮುಖ್ಯಾಂಶಗಳು. ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರಕ್ಕೆ 5,986 ಕೋಟಿ ರು ಗ್ರಾಮೀಣಆಭಿವೃದ್ಧಿ ಕ್ಷೇತ್ರಕ್ಕೆ 9,361 ಕೋಟಿ ರು ಕಂದಾಯ ಇಲಾಖೆಗೆ 4, 293 ಕೋಟಿ ರು ಜಲ ಸಂಪನ್ಮೂಲ ಕ್ಷೇತ್ರಕ್ಕೆ 11,349 ಕೋಟಿ ರು ಕೃಷಿ ತೋಟಗಾರಿಕೆ ಇಲಾಖೆಗೆ 5,397 ಕೋಟಿ ರು ಇಂಧನ ಕ್ಷೇತ್ರಕ್ಕೆ 11 , 693 ಕೋಟಿ ರು ಶಿಕ್ಷಣ ಕ್ಷೇತ್ರಕ್ಕೆ 21, 305 ಕೋಟಿ ರುಪಾ. […]

ಇಂದು ಧಾರಾಳತನದ ರಾಜ್ಯ ಬಜೆಟ್‌ !

Friday, February 14th, 2014
Siddaramaiah

ಬೆಂಗಳೂರು: ತನ್ನ ಪಾಲಿನ ಸತ್ವ ಪರೀಕ್ಷೆ ಎನಿಸಿದ ಲೋಕಸಭಾ ಚುನಾವಣೆಯ ಸಾಮೀಪ್ಯ ಹಾಗೂ ಇತ್ತೀಚಿನ ವರ್ಷಗಳಿಗೆ ಹೋಲಿಸಿದಾಗ ಕುಸಿದ ರಾಜಸ್ವ ಸಂಗ್ರಹ ಎಂಬ ಎರಡು ಅಲಗಿನ ಕತ್ತಿಯ ಮೇಲೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ 12.30ಕ್ಕೆ 2014-15ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ ಮತಬ್ಯಾಂಕ್‌ ಎನಿಸಿದ ಅಹಿಂದ ವರ್ಗವನ್ನು ಓಲೈಸುವುದರ ಜತೆಗೆ ತಾನೇ ಘೋಷಿಸಿದಂತೆ ಎಲ್ಲರನ್ನೂ ಒಳಗೊಳ್ಳುವ ಬಜೆಟ್‌ ಮಂಡಿಸುವ ಒತ್ತಡಕ್ಕೆ ಸಿಲುಕಿರುವ ಸಿದ್ದರಾಮಯ್ಯಗೆ ಈ ಬಾರಿ ರಾಜಸ್ವ ಸಂಗ್ರಹ ಶೇ. 76ಕ್ಕೆ […]

20ರೊಳಗೆ ಜಿಪಿಎಸ್ ಅಳವಡಿಕೆ ಕಷ್ಟ: ಸಚಿವ ರಾಮಲಿಂಗಾರೆಡ್ಡಿ

Thursday, February 13th, 2014
KSRTC

ಬೆಂಗಳೂರು: ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ ಕಷ್ಟ. ಆ ಬಗ್ಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಸಾರ್ವಜನಿಕ ಸಂಚಾರದ ಅಂತಾರಾಷ್ಟ್ರೀಯ ಸಂಸ್ಥೆ(ಯುಐಟಿಪಿ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಥಮ ಯುಐಟಿಪಿ ಬಸ್ ವಿಚಾರಸಂಕಿರಣ’ ಉಯುಐಟಿಪಿದ್ಘಾಟಿಸಿ ಅವರು ಮಾತನಾಡಿದರು. ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿನ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ […]

ಪ್ರೇಮಾ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ರಾಮದಾಸ್

Thursday, February 13th, 2014
Ramadoss

ಬೆಂಗಳೂರು: ಮಾಜಿ ಸಚಿವ ರಾಮದಾಸ್ ಅವರ ಪ್ರೇಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರು ಪ್ರೇಮಕುಮಾರಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ. ಮಾರ್ಚ್ 10, 2013ರಂದು ರಾಮದಾಸ್ ಅವರು ಸಚಿವರಾಗಿದ್ದ ವೇಳೆ ತಮ್ಮ ಸರ್ಕಾರಿ ಕಾರನ್ನು ಬಿಟ್ಟು, ಖಾಸಗಿ ಕಾರಿನಲ್ಲಿ ಪ್ರೇಮಕುಮಾರಿ ಅವರ ನಿವಾಸಕ್ಕೆ ತೆರಳಿ ಸುಮಾರು 1 ಗಂಟೆಯವರೆಗೆ ಮಾತುಕತೆ ನಡೆಸಿದ್ದಾರೆ. ಪ್ರೇಮಕುಮಾರಿ ಅವರ ಮನೆಯಲ್ಲಿ ನಡೆದ ಸಂಪೂರ್ಣ ‘ರಾಮಾ’ಯಣದ ವಿಡಿಯೋ ಮಾಧ್ಯಮಕ್ಕೆ ದೊರೆತ್ತಿದ್ದು, ವಿಡಿಯೋದಲ್ಲಿ ರಾಮದಾಸ್, ಪ್ರೇಮಕುಮಾರಿ […]

ನಕ್ಸಲರ ಜತೆ ಮಾತುಕತೆ ನಡೆಯುತ್ತಿದೆ, ವಿಫಲವಾದರೆ ಎಎನ್‌ಎಫ್ ಸಮಸ್ಯೆ ಪರಿಹರಿಸಲಿದೆ : ಕೆ.ಜೆ. ಜಾರ್ಜ್

Thursday, February 13th, 2014
KJ-George

ಮಂಗಳೂರು: ನಕ್ಸಲರು ಸಂಧಾನಕ್ಕೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿಯೇ ನಕ್ಸಲರ ಪರವಾಗಿ ಸ್ವಯಂ ಸೇವಾಸಂಸ್ಥೆಗಳು ಸರ್ಕಾರದ ಜತೆ ಮಾತುಕತೆ ನಡೆಸುತ್ತಿವೆ. ಮಾತುಕತೆ ಫಲಪ್ರದವಾಗದೇ ಇದ್ದರೆ ನಕ್ಸಲ್ ನಿಗ್ರಹ ದಳದವರು ಸಮಸ್ಯೆ ಮಟ್ಟ ಹಾಕುತ್ತಾರೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರ ಸಹಾಯಕ ಪೊಲೀಸ್ ಕಮಿಷನರ್ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಅರಣ್ಯ ಪ್ರದೇಶದಲ್ಲಿ ಈಗ ಏಕಾ ಏಕಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಕಾಡಿನ ಮಧ್ಯೆ ಇರುವವರನ್ನು ಕಾಡಿನ ಅಂಚಿನಲ್ಲಿ ಪುನರ್ವಸತಿ ಮಾಡಲು ಅವಕಾಶ ಇದೆ […]