ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿಯಾಗಿರಬೇಕು : ರೇಖಾ ಸುದೇಶ್ ರಾವ್

Sunday, December 1st, 2024
Rekha-Sudesh

ಮೈಸೂರು : ಮೈಸೂರಿನ ಲೇಖಕ , ಸಾಮಾಜಿಕ ಚಿಂತಕ ಎನ್.ವಿ. ರಮೇಶ್ ಅವರ 74 ರ ಜನ್ಮ ದಿನಾಚರಣೆ ಅಂಗವಾಗಿ ಮೈಸೂರಿನ ನಮನ ಕಲಾ ಮಂಟಪದಲ್ಲಿ ರಾಜ್ಯದ ಲೇಖಕರಿಗೆ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಲೇಖಕರಿಗೆ “ನಾನೇಕೆ ಬರೆಯುತ್ತೇನೆ ” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣ 1/12/2024 ರ ಅದಿತ್ಯವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಲೇಖಕಿ , ಕವಯತ್ರಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಮಾತನಾಡಿ ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು […]

ಮಂಗಳಾ ಈಜು ಕ್ಲಬ್ ನ ಚಿಂತನ್ ಎಸ್. ಶೆಟ್ಟಿಗೆ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ 5 ಚಿನ್ನದ ಪದಕ

Sunday, December 1st, 2024
ಮಂಗಳಾ ಈಜು ಕ್ಲಬ್ ನ ಚಿಂತನ್ ಎಸ್. ಶೆಟ್ಟಿಗೆ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ 5 ಚಿನ್ನದ ಪದಕ

ಮಂಗಳೂರು: ಗುಜರಾತ್ ನ ರಾಜ್ ಕೋಟ್ ನಲ್ಲಿ ನವೆಂಬರ್ ೩೦ ರಂದು ಮುಕ್ತಾಯಗೊಂಡ 68ನೇ ಎಸ್ ಜಿ ಎಫ್ಐ (ಸ್ಕೂಲ್ ಗೇಮ್ಸ್) ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅಂಡರ್ 19 ಬಾಲಕರ ವಿಭಾಗದ 50 ಮತ್ತು 100 ಮೀಟರ್ ಬಟರ್ ಫ್ಲೈ, 50 ಮೀಟರ್ ಫ್ರಿಸ್ಟೈಲ್, 4 x 100 ಫ್ರಿಸ್ಟೈಲ್ ರಿಲೇ, 4 x 100 ಮಿಡ್ಲೆ ರಿಲೇ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ ನ ಸದಸ್ಯ ಚಿಂತನ್ ಎಸ್. ಶೆಟ್ಟಿ ಇವರು 5 […]

ಆಸ್ಪತ್ರೆಗಳಿಗೆ ಬ್ಲಾಕ್ ಮೇಲ್ ಮಾಡಿ ಹಣದ ಬೇಡಿಕೆ: ಉಪ್ಪಳ ಮೂಲದ ವ್ಯಕ್ತಿಯ ಬಂಧನ

Sunday, December 1st, 2024
ಆಸ್ಪತ್ರೆಗಳಿಗೆ ಬ್ಲಾಕ್ ಮೇಲ್ ಮಾಡಿ ಹಣದ ಬೇಡಿಕೆ: ಉಪ್ಪಳ ಮೂಲದ ವ್ಯಕ್ತಿಯ ಬಂಧನ

ಮಂಗಳೂರು: ಬೇಡಿಕೆಯ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕ ಮಾನಹಾನಿ ಮಾಡುವುದಾಗಿ ಮಂಗಳೂರು ಇಂಡಿಯಾನಾ ಆಸ್ಪತ್ರೆಯವರಿಗೆ ಬೆದರಿಕೆ ಹಾಕಿದ್ದ ಉಪ್ಪಳದ ಸಮಾಜ ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಂಡಿಯಾನಾ ಆಸ್ಪತ್ರೆ ಈ ಹಿಂದೆ ದೂರು ದಾಖಲಿಸಿತ್ತು. ಈತನ ವಿರುದ್ಧ ಕಂಕನಾಡಿ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಕೊಂಡಿದ್ದರು. ಮೂರು ವಾಟ್ಸ್ ಆ್ಯಪ್ ಗ್ರೂಪ್ ಗಳ ಮೂಲಕ ಆಸ್ಪತ್ರೆ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ. ಈ ಗುಂಪುಗಳ ಮೂಲಕ […]

ಧರ್ಮಸ್ಥಳ ಲಕ್ಷದೀಪೋತ್ಸವ : ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ

Sunday, December 1st, 2024
Dharmasthala-Deepotsava

ಉಜಿರೆ: ಭಾರತ ಜನನನಿಯ ತನುಜಾತೆಯಾದ ಕರ್ನಾಟಕದಲ್ಲಿ ಶ್ರಮಸಂಸ್ಕೃತಿಯ ಲೋಪದಿಂದಾಗಿ ಕನ್ನಡ ಸೊರಗುತ್ತಿದೆ. ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು ಶತಾವಧಾನಿ ಆರ್. ಗಣೇಶ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 92ನೆ ಅಧಿವೇಶನ […]

ಬಸವಣ್ಣನವರ ತತ್ವ ಆದರ್ಶಗಳಲ್ಲಿ ನಂಬಿಕೆ ಇದ್ದರೆ ಮೊದಲು ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿ: ಸಚಿವ ಎನ್‌ ಎಸ್‌ ಭೋಸರಾಜು

Sunday, December 1st, 2024
Bosuraju

ಮಡಿಕೇರಿ : ಸಮ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರರು, ಸಮಾಜ ಸುಧಾರಕರಾದ ಬಸವಣ್ಣನವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುತ್ತಿದೆ. ಮೇಲು-ಕೀಳು ಎಂಬ ಅಸಮಾನತೆಯ ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರನ್ನು ಓರ್ವ ಹೇಡಿ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವಮಾನಿಸಿರುವುದು ನಿಜಕ್ಕೂ ಖಂಡನೀಯ. ನಿಜಕ್ಕೂ ಬಿಜೆಪಿ ನಾಯಕರು ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದಾದರೆ ತಕ್ಷಣ ಯತ್ನಾಳ್‌ ಅವರನ್ನು […]

ಒತ್ತಡ ಮತ್ತು ಆತಂಕ ನಿಯಂತ್ರಣಕ್ಕೆ ಯೋಗ – ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

Saturday, November 30th, 2024
Ramakrishna-Mission-Yoga

ಮಂಗಳೂರು : ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ನವಂಬರ ತಿಂಗಳ ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪಗೊಂಡಿತು. ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಮುದ್ರೆಗಳ ಪ್ರಯೋಜನಗಳನ್ನು ತಿಳಿಸಿದರು. ಆಧುನಿಕ ಯೋಗವು ಸಾಮಾನ್ಯವಾಗಿ ಆಸನದ ದೈಹಿಕ ಅಭ್ಯಾಸದೊಂದಿಗೆ ಸಂಬAಧಿಸಿದೆ. ವಿನ್ಯಾಸದ ಹರಿವು ಅಥವಾ ಅಷ್ಟಾಂಗದAತಹ ಶೈಲಿಗಳಲ್ಲಿ ಸಾಮಾನ್ಯವಾಗಿ ಒಟ್ಟಿಗೆ ನೇಯ್ದ ಭಂಗಿಗಳ ಸರಣಿ. ಆಸನ ಅಭ್ಯಾಸವು ಸಾಮಾನ್ಯವಾಗಿ ಶಕ್ತಿ ಮತ್ತು ತ್ರಾಣವನ್ನು ನಿರ್ಮಿಸಲು, ನಮ್ಯತೆ, ಸಮನ್ವಯ […]

ಹಿರಿಯ ವೈದ್ಯ, ರಮಾನಂದ ಬನಾರಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ

Friday, November 29th, 2024
Ramananda-Banari

ಕಾಸರಗೋಡು :ಕೇರಳ ಕಾಸರಗೋಡು ಮಂಜೇಶ್ವರದ ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಕಲಾವಿದರಾದ ಡಾ. ರಮಾನಂದ ಬನಾರಿ ಬಗ್ಗೆ ವಾಟ್ಸಾಪ್ ಗ್ರೂಪ್, ಸ್ಟೇಟಸ್, ಹಾಗೂ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಾವಿನ ಸುದ್ದಿ ಸತ್ಯಕ್ಕೆ ದೂರವಾದುದೆಂದು ಸ್ವತಃ ಡಾ. ರಮಾನಂದ ಬನಾರಿಯವರು ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳಿಗೆ ಯಾರು ತಲೆಗೂಡಬಾರದು ನಾನು ಆರೋಗ್ಯವಾಗಿ ಕ್ಷೇಮವಾಗಿ ಇದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಂಜೆಯಿಂದ ಇಲ್ಲಸಲ್ಲದ ಊಹಾಪೋಹಗಳು […]

ಧರ್ಮಸ್ಥಳವೆಂದರೆ ಸರ್ವಧರ್ಮ ಸಮನ್ವಯದ ಕ್ಷೇತ್ರ : ಡಾ. ವೀರೇಂದ್ರ ಹೆಗ್ಗಡೆ

Friday, November 29th, 2024
Dharmasthala

ಬೆಳ್ತಂಗಡಿ: ಸರ್ವಧರ್ಮ ಸಮನ್ವಯದ ಕ್ಷೇತ್ರವೆಂಬ ಮನ್ನಣೆ ಪಡೆದ ಶ್ರೀ ಕ್ಷೇತ್ರದಲ್ಲಿ ನಮ್ಮ ಹಿರಿಯರಾದ ಕೀರ್ತಿಶೇಷ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು 1933 ರಲ್ಲಿ ಪ್ರಾರಂಭಿಸಿದ ಈ ಸರ್ವಧರ್ಮ ಸಮ್ಮೇಳನವನ್ನು ಕೀರ್ತಿಶೇಷ ಶ್ರೀ ಡಿ. ರತ್ನಮ್ಮವರ್ಮ ಹೆಗ್ಗಡೆ ಮುಂದುವರಿಸಿಕೊಂಡು ಬಂದರು. ಇದೀಗ ಈ ಸಮ್ಮೇಳನವು 91 ವಸಂತಗಳನ್ನು ಪೂರೈಸಿದೆ. ನಾನು ಪೀಠವನ್ನು ಅಲಂಕರಿಸಿದ ದಿನದಿಂದ ವಿವಿಧ ಧರ್ಮಗಳ ಮಹತ್ ಸಂದೇಶಗಳನ್ನು, ಸದ್ವಿಚಾರಗಳನ್ನು, ನಮ್ಮ ಪರಂಪರೆಯನ್ನು ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಮ್ಮನ್ನು ನಿರ್ಬಂಧಿಸಿಕೊಳ್ಳದೆ ಲೌಕಿಕ ಹಾಗೂ ಪಾರಮಾರ್ಥಿಕ ಎರಡು […]

ಲಕ್ಷಾಂತರ ಮನೆಗಳನ್ನು, ಮನಗಳನ್ನು ಬೆಳಗುವ ಧರ್ಮಸ್ಥಳ ಲಕ್ಷದೀಪೋತ್ಸವ

Friday, November 29th, 2024
kerekatte-Utsava

ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಅಂದರೆ ಉತ್ಸವಗಳ ಪರ್ವಕಾಲ. ಲಕ್ಷದೀಪೋತ್ಸವವು ಭಕ್ತಿ ಭಾವೈಕ್ಯದ ಮಿಲನ. ನಾಡಿನೆಲ್ಲೆಡೆಯಿಂದ ಬರುವ ಭಕ್ತಾದಿಗಳಿಗೆ ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಮನೋರಂಜನೆಯ ಸೊಗಡನ್ನು ಆಸ್ವಾದಿಸಿ, ಆನಂದಿಸುವ ಸಂತಸದ ಸಮಯ. ಸರ್ವಧರ್ಮ ಸಮನ್ವಯ ಕೇಂದ್ರ: ಧರ್ಮಸ್ಥಳದ ಮುಖ್ಯ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ. ಅರ್ಚಕರು ವೈಷ್ಣವ ಸಂಪ್ರದಾಯದವರು. ದೇವಸ್ಥಾನದ ಆಡಳಿತ ನಡೆಸುವ ಧರ್ಮಾಧಿಕಾರಿಗಳು ಜೈನ ಧರ್ಮದವರು. ಹಿಂದೂಗಳು, ಜೈನರು, […]

ಕ್ರೀಡೆಯಿಂದ ಸೌಹಾರ್ದತೆಯ ವಾತಾವರಣ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್

Friday, November 29th, 2024
ಕ್ರೀಡೆಯಿಂದ ಸೌಹಾರ್ದತೆಯ ವಾತಾವರಣ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್

ಮಂಗಳೂರು : ಪರಸ್ಪರ ಉತ್ತಮ ಬಾಂಧವ್ಯ ಹಾಗೂ ಸೌಹಾರ್ದತೆಯ ವಾತಾವರಣ ಮೂಡಿಸಲು ಕ್ರೀಡೆ ಪೂರಕವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಸಮಯ ಮೀಸಲಿಡುವುದು ಅತೀ ಅಗತ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು. ದಕ್ಷಿಣ ಕನ್ನಡ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಗುರುವಾರ ನಗರದ ನೆಹರು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹಾಗೂ ಪತ್ರಕರ್ತರ ತಂಡದ ಸೌಹಾರ್ದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. […]