ಸಾಮಾಜಿಕ ಜಾಲತಾಣದಲ್ಲಿ ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನಿಸಿದವರ ವಿರುದ್ಧ ದೂರು

Thursday, February 13th, 2020
kadri

ಮಂಗಳೂರು : ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿ ಒಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ತಿನ್ನುವ ವಿಡಿಯೋ ಒಂದನ್ನು ವಾಟ್ಸಾಪ್ ಗಳಲ್ಲಿ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸ್ಟಾಲ್ ಗಳಲ್ಲಿ ಜ್ಯೂಸು ಕುಡಿಯಬಾರದೆಂದು ಈ ವಿಡಿಯೋ ವೈರಲ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸವನ್ನು ಕೆಲವು ವಾಟ್ಸಾಪ್ ವಿಘ್ನ ಸಂತೋಷಿಗಳು ಮಾಡಿರುತ್ತಾರೆ. ಈ ಹುನ್ನಾರವನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಮಹಾನಗರ […]

ಗಮ್‌ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಓರ್ವ ವಶಕ್ಕೆ

Wednesday, February 12th, 2020
gold--paste

ಮಂಗಳೂರು  :  ಗುದದ್ವಾರದ ಮೂಲಕ ಪೇಸ್ಟ್ ರೂಪದ ಚಿನ್ನವನ್ನುಅಕ್ರಮ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಒಬ್ಬನನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ ಕಾಸರಗೋಡು (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 25.57 ಲಕ್ಷ ರೂ. ವೌಲ್ಯದ 633 ಗ್ರಾಂ ಚಿನ್ನ ವಶಪಡಿಸಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಜಾನೆ 4:45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ […]

ಬಸ್ ಢಿಕ್ಕಿ – ಲಾರಿ ಚಾಲಕ ಆಸ್ಪತ್ರೆಯಲ್ಲಿ ಮೃತ್ಯು

Wednesday, February 12th, 2020
Talapady Toll

ಮಂಗಳೂರು : ಲಾರಿ ಚಾಲಕನೊಬ್ಬ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬುಧವಾರ  ಬೆಳಿಗ್ಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳಗಾವಿ ಓಬಳಾಪುರ ಮೂಲದ ಕಿರಣ್ ರಾಥೋಡ್ (22) ಮೃತಪಟ್ಟವರು. ಬೆಳಗಾವಿಯಿಂದ ಸ್ಟೀಲ್ ಲೋಡ್ ಅನ್ನು ಕಾಸರಗೋಡಿಗೆ ತಂದಿದ್ದ ರಾಥೋಡ್, ಮತ್ತೆ ವಾಪಸ್ಸಾಗುವಾಗ ಈ ಘಟನೆ ನಡೆದಿದೆ. ತಲಪಾಡಿ ಟೋಲ್ ಗೇಟ್ ಎದುರುಗಡೆ ಲಾರಿ ನಿಲ್ಲಿಸಿ ಚಹಾ ಕುಡಿಯಲೆಂದು ರಸ್ತೆಯಲ್ಲಿದ್ದ ಸಂದರ್ಭ ಖಾಸಗಿ ಸಿಟಿ ಬಸ್ಸ್ ಢಿಕ್ಕಿ ಹೊಡೆದಿತ್ತು. ತಲಪಾಡಿಯಿಂದ ಮಂಗಳೂರಿಗೆ ತೆರಳಲು ಪ್ರಯಾಣಿಕರನ್ನು ಹತ್ತಿಸುವ ಭರಾಟೆಯಲ್ಲಿ ಒಮ್ಮಿಂದೊಮ್ಮೆಲೇ […]

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿಕೊಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

Wednesday, February 12th, 2020
Jolle

ಬೆಳ್ತಂಗಡಿ  : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಶಶಿಕಲ ಅಣ್ಣಾಸಾಹೇಬ್‌ಜೊಲ್ಲೆಯವರು ಆಗಮಿಸಿ ಸಿರಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಇವರು ಸಿರಿ ಸಂಸ್ಥೆಯು ಒಂದು ಕುಟುಂಬವಿದ್ದಂತೆ, ಪೂಜ್ಯರ ಹಾಗೂ ಮಾತೃಶ್ರೀ ಅಮ್ಮನವರ ಮಾರ್ಗದರ್ಶನದ ಈ ಸಂಸ್ಥೆ ಮಹಿಳಾ ಸಬಲೀಕರಣದದೃಢ ಹೆಜ್ಜೆಯ ಸಂಕಲ್ಪದೊಂದಿಗೆಗ್ರಾಮೀಣ ಮಟ್ಟದಲ್ಲಿಗ್ರಾಮೀಣಜನರಿಗೆಉದ್ಯೋಗವನ್ನು ನೀಡಿ ಸ್ಸ-ಸಹಾಯ ಸಂಘದ ಸದಸ್ಯರು ಘಟಕಗಳಲ್ಲಿ ತಯಾರಿಸಿದ ಉತ್ತಮಗುಣಮಟ್ಟದ ಉತ್ಪನ್ನಗಳನ್ನು ಸಿರಿ ಬ್ರಾಂಡಿನ ಮೂಲಕ ಮಾರುಕಟ್ಟೆ ಮಾಡುತ್ತಿದ್ದು ಈ ಸಂಸ್ಥೆ ಉದ್ಯೋಗವನ್ನು […]

ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು : ವಿವಿ ಕುಲಪತಿ

Tuesday, February 11th, 2020
VV-Kulapati

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರೊಂದಿಗೆ, ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಸಾಕಷ್ಟು ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಮೊತ್ತವನ್ನು ತಂದು ವಿವಿ ಸೇರಿದಂತೆ ಕೊಣಾಜೆ ಗ್ರಾಮದ ಅಭಿವೃದ್ಧಿಗೂ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾ ಸಂವಾದಲ್ಲಿ ಅವರು ಮಾತನಾಡಿದರು. ಪ್ರತಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ […]

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ’ಕೊಡಿಯಡಿ-2020’ ಉದ್ಘಾಟನೆ

Tuesday, February 11th, 2020
kodiyadi

ವಿದ್ಯಾಗಿರಿ : ಸನ್ಮಾರ್ಗದಲ್ಲಿ ಗಳಿಸಿದ ಹೆಸರು, ಕೀರ್ತಿ ಎಂದಿಗೂ ಶಾಶ್ವತ. ಅವಿರತ ಪರಿಶ್ರಮವೊಂದೇ ಸಾಧನೆಯ ಮಾರ್ಗ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹೇಳಿದರು ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಕೊಡಿಯಡಿ-೨೦೨೦ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸನ್ಮಾರ್ಗದಲ್ಲಿ ನಡೆದು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮದಿಂದ ಉನ್ನತ ಮಟ್ಟಕ್ಕೇರಿದ ಹಲವು ಸಾಧಕರನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ತುಳುನಾಡಿಗೆ ಸಲ್ಲುತ್ತದೆ. […]

ಶ್ರೀ ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವಕ್ಕೆ ಇಂದು ತೆರೆ

Tuesday, February 11th, 2020
temple

ಮಡಿಕೇರಿ : ತಾಳತ್ತಮನೆಯ ಪುರಾತನ ಲಿಂಗರೂಪಿ ಶ್ರೀ ದುರ್ಗಾಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವದಲ್ಲಿ ದೇವರಿಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವಹೋಮ, ತತ್ವಕಲಶಪೂಜೆ, ಕಂಭೇಶ ಕರ್ಕರಿ ಪೂಜೆ, ಶಯ್ಯೋಪೂಜೆ, ಆದಿವಾಸ ಹೋಮ ಅಗ್ನಿ ಜನನ, ತತ್ವ ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವ ಕಲಶ, ಶಯ್ಯೋನ್ನಯನ ಪೂಜೆ ನಡೆಯಿತು. ಸಂಜೆ ಮಡಿಕೇರಿಯ ಶ್ರೀರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಕಾಸರಗೋಡಿನ ಶ್ರೀಕ್ಷೇತ್ರ ಕುಂಟಾರು ರವೀಶ್ ತಂತ್ರಿಗಳಿಂದ ನಡೆದ ಉಪನ್ಯಾಸ ಮತ್ತು ಕಲ್ಲಡ್ಕ […]

ದ್ವೇಷ, ವಿಭಜಕ ರಾಜಕಾರಣ ಮಾಡುವವರಿಗೆ ದೆಹಲಿ ಫಲಿತಾಂಶ ತಕ್ಕ ಉತ್ತರ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

Tuesday, February 11th, 2020
mamatha

ಕೋಲ್ಕತಾ : ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದಾಖಲಿಸಿರುವ ಗೆಲುವು ಪ್ರಜಾಪ್ರಭುತ್ವದ ಗೆಲುವು, ದ್ವೇಷದ ಮತ್ತು ವಿಭಜಕ ರಾಜಕಾರಣ ಮೇಲೆ ನಂಬಿಕೆ ಇಟ್ಟಿರುವ ರಾಷ್ಟ್ರೀಯ ನಾಯಕರಿಗೆ ತಕ್ಕ ಉತ್ತರ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಆಮ್ ಆದ್ಮಿ ಪಕ್ಷ ಮೂರನೇ ಭಾರಿಗೆ ಭರ್ಜರಿ ಗೆಲುವು ದಾಖಲಿಸಿದೆ. ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಟ್ವಿಟರ್ನಲ್ಲಿ ಪ್ರಶಂಶೆ ವ್ಯಕ್ತಪಡಿಸಿರುವ […]

ಮೂರನೇ ಏಕದಿನದ ಪಂದ್ಯದಲ್ಲಿ ಕೆ.ಎಲ್​.ರಾಹುಲ್ ಶತಕದ ನೆರವಿನೊಂದಿಗೆ ಟೀಇಂಡಿಯಾ 7 ವಿಕೆಟ್​ಗೆ 296ರನ್

Tuesday, February 11th, 2020
KL-Rahul

ಮೌಂಟ್ ಮೌಂಗನುಯಿ : ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರನೇ ಏಕದಿನದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರ ಶತಕದ ನೆರವಿನೊಂದಿಗೆ ಆತಿಥೇಯ ತಂಡಕ್ಕೆ 297ರನ್ಗಳ ಗೆಲುವಿನ ಗುರಿಯನ್ನು ನಿಗದಿ ಮಾಡಿದೆ. ಕ್ರಿಕೆಟ್ ವೃತ್ತಿ ಬದುಕಿನ ನಾಲ್ಕನೇ ಶತಕ ದಾಖಲಿಸಿದ ರಾಹುಲ್ ಇನ್ನಿಂಗ್ಸ್ನಲ್ಲಿ 113 ಬಾಲ್ ಎದುರಿಸಿ 112 ರನ್ ಸೇರಿಸಿದ್ದರು. ಇದರಲ್ಲಿ ಒಂಭತ್ತು ಫೋರ್, ಎರಡು ಸಿಕ್ಸ್ ಒಳಗೊಂಡಿವೆ. ಟೀಂ ಇಂಡಿಯಾ 13ನೇ ಓವರ್ನಲ್ಲಿ ಮೂರು ವಿಕೆಟ್ ಕಳೆದುಕೊಂಡು 62 ರನ್ ಗಳಿಸಿ ಸಂಕಷ್ಟದಲ್ಲಿ ಇದ್ದಾಗ ರಾಹುಲ್ ಕ್ರೀಸ್ಗೆ […]

ದೆಹಲಿ ಒಂದು ಮಹಾನಗರ ಪಾಲಿಕೆ ಇದ್ದಂತೆ. ಫಲಿತಾಂಶದಿಂದ ಬಿಜೆಪಿಗೆ ಹಿನ್ನಡೆಯಲ್ಲ : ಡಿಸಿಎಂ ಗೋವಿಂದ ಕಾರಜೋಳ

Tuesday, February 11th, 2020
govinda

ಬಾಗಲಕೋಟೆ : ದೆಹಲಿ ಒಂದು ಮಹಾನಗರ ಪಾಲಿಕೆ ಇದ್ದಂತೆ. ದೆಹಲಿ ಒಂದು ಊರಿಗೆ ಸೀಮಿತವಾದ ಆಡಳಿತ ನಡೆಸಿದಂತೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಮಂಗಳವಾರ ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೊಡ್ಡ ಆಡಳಿತ ಮಾಡ್ತಿದ್ದರೆ. ಲೋಕಸಭೆ ಚುನಾವಣೆಯಲ್ಲಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ದೆಹಲಿ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿಲ್ಲ. ಅದೊಂದು ಮಹಾನಗರ […]