ಬಜ್ಪೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

Wednesday, October 23rd, 2019
bajpe

ಮಂಗಳೂರು : ರಾಜ್ಯದ ಪ್ರತಿಯೊಂದು ಪ್ರಜೆಯ ಆರೋಗ್ಯ ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬಜ್ಪೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಡೆಸಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಈ ಭಾಗದ ಜನತೆಯ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕು. ಸಿಬ್ಬಂದಿ ಕೊರತೆ, ಲ್ಯಾಬ್ ಇನ್ನಿತರ ಮೂಲಭೂತ ಕೊರತೆಗಳಿದ್ದ್ದರೆ ಅಥವಾ […]

ಸಂಗಬೆಟ್ಟು ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿತ : ಅಪಾಯದಿಂದ ಪಾರಾದ ಮಕ್ಕಳು

Wednesday, October 23rd, 2019
sangha-bettu

ಬಂಟ್ವಾಳ : ಬಂಟ್ವಾಳ ತಾಲೂಕಿನ ಸಂಗಬೆಟ್ಟು ಅಂಗನವಾಡಿ ಕೇಂದ್ರ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಸುಮಾರು 28 ವರ್ಷ ಹಳೆಯದಾದ ಅಂಗನವಾಡಿ ಕೇಂದ್ರ ಕಟ್ಟಡದ ಹೊರಭಾಗದಲ್ಲಿ ಸಿಮೆಂಟ್ ಶೀಟಿನ ಮೇಲ್ಛಾವಣಿ ನಿರ್ಮಿಸಲಾಗಿದ್ದು, ಅದರ ಒಂದು ಭಾಗ ಬುಧವಾರ ಬೆಳಗ್ಗೆ 10.30ರ ವೇಳೆಗೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಅಂಗನವಾಡಿ ಕೇಂದ್ರದಲ್ಲಿ ಸುಮಾರು 25 ಪುಟಾಣೆಗಳಿದ್ದು, ಎಲ್ಲರೂ ಕೇಂದ್ರದ ಒಳಗಿದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮೇಲ್ಛಾವಣಿ ಬೀಳುವ ಶಬ್ದ ಕೇಳುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು […]

ಶ್ರೀಗಂಧ ಮರದ ತುಂಡುಗಳನ್ನು ಅಕ್ರಮ ಕಳ್ಳಸಾಗಣಿಕೆ‌ ಯತ್ನ : ಐವರ ಬಂಧನ

Wednesday, October 23rd, 2019
ಶ್ರೀಗಂಧ ಮರದ ತುಂಡುಗಳನ್ನು ಅಕ್ರಮ ಕಳ್ಳಸಾಗಣಿಕೆ‌ ಯತ್ನ : ಐವರ ಬಂಧನ

ಮಡಿಕೇರಿ : ಪೊನ್ನಂಪೇಟೆ ಅರಣ್ಯ ವಲಯ ವ್ಯಾಪ್ತಿಯ ತೀತರ್ ಮಾಡ ಅರಸು ಹಾಗೂ ಮಹೇಶ್ ಎಂಬುವವರ ನಲ್ಲೂರು ಗ್ರಾಮದ ತೋಟದಿಂದ 8.50ಲಕ್ಷ ಮೌಲ್ಯದ 50ಕೆ.ಜಿ ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಕಡಿದು ಕಳ್ಳಸಾಗಣಿಕೆ‌ಗೆ ಯತ್ನಿಸುತ್ತಿದ್ದ ಸಂಧರ್ಭ ಖಚಿತ ವರ್ತಮಾನದ ಮಾಹಿತಿ ಮೇಲೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿತಿಮತಿ ಉಪವಿಭಾಗದ ಶ್ರೀ ಬಿ.ಎನ್ ಶ್ರೀಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಲಿನಿ ಇವರುಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಮತಿ ತೀರ್ಥ ರವರ […]

ಮಡಿಕೇರಿ : ಸರ್ವೋದಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Wednesday, October 23rd, 2019
madikeri

ಮಡಿಕೇರಿ : ಸರ್ವೋದಯ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಅಂಬೆಕಲ್ಲು ಕೆ.ಕುಶಾಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಐ.ಮುನೀರ್ ಅಹಮ್ಮದ್ ಅವರು ಆಯ್ಕೆಯಾಗಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರುಗಳಾಗಿ ಟಿ.ಎಂ.ಮುದ್ದಯ್ಯ, ಸ್ವರ್ಣಲತಾ, ಕಾರ್ಯದರ್ಶಿಯಾಗಿ ಕೆ.ಟಿ.ಬೇಬಿಮಾಥ್ಯು, ಕೋಶಾಧಿಕಾರಿಯಾಗಿ ಕೋಡಿ ಚಂದ್ರಶೇಖರ್ ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಟಿ.ಪಿ.ರಮೇಶ್, ಕೆ.ಕೆ. ಪೂರ್ಣಯ್ಯ, ಎಂ.ಎನ್. ಸುಬ್ರಮಣಿ, ಎಸ್.ಪಿ. ವಾಸುದೇವ್, ಬಿ.ಎ. ರಾಮಯ್ಯ, ಹೆಚ್.ಕೆ.ಪ್ರೇಮ, ವಿಲ್‌ಫ್ರೆಡ್ ಕ್ರಾಸ್ತಾ, ರೇವತಿ ರಮೇಶ್, ಹೆಚ್.ಪಿ.ಯಶೋಧ, […]

ದೆಹಲಿ ಹೈಕೋರ್ಟಿನಿಂದ ಡಿಕೆ ಶಿವಕುಮಾರ್ ಗೆ ಜಾಮೀನು ಮಂಜೂರು

Wednesday, October 23rd, 2019
DKShi

ನವದೆಹಲಿ : ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ದೆಹಲಿ ಹೈಕೋರ್ಟಿನ ನ್ಯಾ.ಸುರೇಶ್ ಕುಮಾರ್ ಕೈಟ್ ಜಾಮೀನು ಆದೇಶವನ್ನು ಪ್ರಕಟಿಸಿದರು. ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು ಗುರುವಾರ (ಅಕ್ಟೋಬರ್ 17) 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು […]

ಕನ್ನಡದಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯ: ಪ್ರದೀಪಕಲ್ಕೂರ ಆಗ್ರಹ

Wednesday, October 23rd, 2019
Kannada

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ವಾಣಿಜ್ಯ ಮಳಿಗೆ, ವಸತಿ ಸಂಕೀರ್ಣ ವಾಣಿಜ್ಯ ಸಂಕೀರ್ಣ, ಸಂಘ, ಸಂಸ್ಥೆ ಹೀಗೆ ಎಲ್ಲಾ ಸಂಸ್ಥೆಗಳಲ್ಲೂ ನಾಮ ಫಲಕಗಳನ್ನು ಕಡ್ಡಾಯವಾಗಿಕನ್ನಡ ಭಾಷೆಯಲ್ಲೇ ಪ್ರದರ್ಶಿಸುವಂತೆ ಆದೇಶ ಹೊರಡಿದುವಂತೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ. ಈ ಕುರಿತು ಪರಿಷತ್ತಿನಜಿಲ್ಲಾಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಮಂಗಳೂರು ಮಹಾನಗರ ಪಾಲಿಕೆಯಆಯುಕ್ತರಾಗಿರುವ ಶಾನಾಡಿಅಜಿತ್‌ಕುಮಾರ್ ಹೆಗ್ಡೆಯವರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯು ನವೆಂಬರ್ 1 ರೊಳಗೆ ಕನ್ನಡದಲ್ಲೇ ನಾಮಫಲಕಗಳನ್ನು ಪ್ರದರ್ಶಿಸುವ ಕುರಿತುಆದೇಶ ನೀಡಿದ್ದುಇದು ರಾಜ್ಯದಾದ್ಯಂತಜಾರಿಗೆ ಬರುವಂತಾಗಲಿ, ರಾಜ್ಯದ ಪ್ರಮುಖ ನಗರಗಳಲ್ಲೊಂದಾದ […]

ಅ. 24ರಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವ

Wednesday, October 23rd, 2019
veerendra-hegde

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‍ಸೆಟ್ ಮತ್ತಿತರ ಹಲವಾರು ಯೋಜನೆಗಳ ಮೂಲಕ ಜನೋಪಯೋಗಿ ಕಾರ್ಯಗಳನ್ನು ಕಳೆದ ಐದು ದಶಕಗಳಿಂದ ಮಾಡುತ್ತಾ ಬಂದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವವು ಕ್ಷೇತ್ರದಲ್ಲಿ ಅ. 24ರಂದು ನಡೆಯಲಿರುವುದು. ಈ ಸಂದರ್ಭ ಮಹೋತ್ಸವ ಸಭಾಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ […]

ಕಡಬ : ಓಂತ್ರಡ್ಕ ಸರ್ಕಾರಿ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ

Wednesday, October 23rd, 2019
kadaba

ಕಡಬ : ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರ್ಕಾರಿ ಉನ್ನತ ಪ್ರಾಥಮಿಕ ಶಾಲಾ ಕೊಠಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿರುವುದು ಬುಧವಾರ ಬೆಳಕಿಗೆ ಬಂದಿದೆ. ವಾರದ ಹಿಂದೆ ಶಾಲಾ ಶಿಕ್ಷಕರ ಕೊಠಡಿಯ ಬೀಗ ಮುರಿದಿದ್ದ ಕಳ್ಳರು ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ದೋಚಿದ್ದರು. ಬುಧವಾರ ಶಾಲೆ ತೆರೆಯುತ್ತಿದ್ದಂತೆ ಶಾಲಾ ನಲಿ-ಕಲಿ ಕೊಠಡಿಯ ಬೀಗ ಮುರಿದಿರುವುದು ತಿಳಿದು ಬಂದಿದೆ. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಕುಸುಮಾಧರ ಕೆ. ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಕಡಬ […]

ಕೆಎಸ್ಆರ್ ಟಿಸಿ ಬಸ್ – ಲಾರಿ ಡಿಕ್ಕಿ : ಹಲವರಿಗೆ ಗಾಯ

Wednesday, October 23rd, 2019
kambalabettu

ಬಂಟ್ವಾಳ : ಕೆಎಸ್ಆರ್ ಟಿಸಿ ಬಸ್ ಮತ್ತು ವಿಟ್ಲ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ನಡುವೆ ಕಂಬಳಬೆಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿ ಬುಧವಾರ ಸಂಭವಿಸಿದೆ. ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಇನ್ನು ಕೆಲವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  

ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಸೋನಿಯಾ ಗಾಂಧಿ

Wednesday, October 23rd, 2019
sonia-gandhi

ನವದೆಹಲಿ : ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಬುಧವಾರ ಬೆಳಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಅಂಬಿಕಾ ಸೋನಿ ಭೇಟಿಯಾಗಿ ಕುಶಲೋಪರಿ ನಡೆಸಿದರು. ತಿಹಾರ್ ಜೈಲಿಗೆ ಭೇಟಿ ನೀಡಿದ ವೇಳೆ ಸಂಸದ, ಡಿಕೆ ಸಹೋದರ ಡಿಕೆ ಸುರೇಶ್ ಕೂಡಾ ಜತೆಗಿದ್ದರು ಎಂದು ವರದಿ ತಿಳಿಸಿದೆ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತ […]