ಒನಕೆ ಓಬವ್ವರ ಸಾಹಸ, ಧೈರ್ಯ ಮಾದರಿ :- ಮಮತಾ ಗಟ್ಟಿ

Monday, November 11th, 2024
Mamatha-gatty-obuva

ಮಂಗಳೂರು : ವೀರ ವನಿತೆ ಒನಕೆ ಓಬವ್ವಳು ಸಾಮಾನ್ಯ ಮಹಿಳೆಯಾಗಿದ್ದರೂ, ಅವಳ ನಾಡ ಪ್ರೇಮದಿಂದ, ಧೈರ್ಯ, ಸಾಹಸ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದು, ಅವರ ಸಾಧನೆಯನ್ನು ನಾವೆಲ್ಲರೂ ತಿಳಿದುಕೊಂಡಿರಬೇಕು ಎಂದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ನಾರಾಯಣಗುರು ಪಿಯು ಕಾಲೇಜಿನಲ್ಲಿ ನಡೆದ ವೀರರಾಣಿ ಒನಕೆ ಓಬವ್ವ […]

ಜೈನ ಸಾಹಿತಿ ಬಂಟ್ವಾಳ ಇರ್ವತ್ತೂರು ಬೀಡಿನ ಶ್ರೀಮತಿ ವಿಜಯ ಜಿ. ಜೈನ್ ನಿಧನ

Monday, November 11th, 2024
Vijaya G jain

ಬಂಟ್ವಾಳ: ಸುರ್ಯ ಗುತ್ತು ಮನೆತನದ ಹಿರಿಯರಾದ ಜೈನ ಸಾಹಿತಿ ಬಂಟ್ವಾಳ ತಾಲೂಕಿನ ಇರುವತ್ತೂರು ಬೀಡಿನ ಶ್ರೀಮತಿ ವಿಜಯ ಜಿ. ಜೈನ್ ಅವರು ಇಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು ಮಕ್ಕಳಾದ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಕುಮಾರ್ ಇರ್ವತ್ತೂರು ಮಾಗಣೆ ಗುರಿಕಾರ ಐ.ಬಿ. ಸಂಜೀತ್ ಕುಮಾರ್ ಮತ್ತು ಮಿಜಾರು ಅನಂತಮ್ ಮನೆಯ ಶಾಲಿನಿ ನವೀನ್ ಕುಮಾರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಜೈನ ‘ಭಕ್ತಿ ಸುಮನಾಂಜಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಡೆ […]

ಸಂಬಂಧಿ ಹುಡುಗಿಯ ಮನೆಗೆ ರಾತ್ರಿ ವೇಳೆ ಬಂದ ಯುವಕನಿಗೆ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ದುಷ್ಕರ್ಮಿಗಳ ತಂಡ

Sunday, November 10th, 2024
Mustafa-Bengre

ಮಂಗಳೂರು : ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ದೂರದ ಸಂಬಂಧಿ ಹುಡುಗಿಯೊಬ್ಬಳ ಮನೆಗೆ ರಾತ್ರಿ ವೇಳೆ ಭೇಟಿಯಾಗಲು ಬಂದ ಯುವಕನೊಬ್ಬನನ್ನು ತಂಡವೊಂದು ಕಂಬಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವಕನನ್ನು ಬೆಂಗರೆಯ ಅಬ್ದುಲ್ ರಜಾಕ್‍ ಎಂಬವರ ಮಗ ಮಹಮ್ಮದ್‍ ಮುಸ್ತಾಪ(21) ಎಂದು ಗುರುತಿಸಲಾಗಿದೆ. ಯುವಕನಿಗೆ ಹಲ್ಲೆನಡೆಸಿದ ಆರೋಪಿಗಳನ್ನು ಮಹಮ್ಮದ್‌ ಸಪ್ವಾನ್ (25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಶಾಕೀರ್‍ (18) ಎಂದು ಗುರುತಿಸಲಾಗಿದ್ದು ಹಲ್ಲೆಗೊಳಗಾದ ಯುವಕ […]

ಡಾನ್ ಬಾಸ್ಕೋ ಸಭಾಂಗಣದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ ನಿಧನ

Sunday, November 10th, 2024
Bonipas-pinoto

ಮಂಗಳೂರು : ಖ್ಯಾತ ಸಾಂಸ್ಕೃತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್ ಬಾಸ್ಕೋ ಸಭಾಂಗಣದ ದೀರ್ಘಕಾಲದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ (62) ಅಲ್ಪಾವಧಿಯ ಆರೋಗ್ಯ ಸಮಸ್ಯೆಯಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಬೋನಿಫಾಸ್ ಪಿಂಟೋ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ 28 ವರ್ಷಗಳ ಕಾಲ ಕೆಎನ್‌ಎಸ್‌ಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಸಂಘಟನಾ ಚಾತುರ್ಯತೆ, ಸಮಯಪ್ರಜ್ಞೆ ಮತ್ತು ಸರಳ ಸ್ವಭಾವದಿಂದಾಗಿ ಜನರ ಮನ್ನಣೆ ಗಳಿಸಿದ್ದರು. ಸ್ಪರ್ಧೆಗಳ ಆಯೋಜನೆ, ರಂಗಭೂಮಿ ವಿನ್ಯಾಸ […]

ನೆಲ್ಲಿಕಾರು ಗ್ರಾ. ಪಂ. ಅಧ್ಯಕ್ಷರ ಜಾತಿ ನಿಂದನೆ: ಆರೋಪಿ ಉಪಾಧ್ಯಕ್ಷರ ದೋಷಮುಕ್ತ

Sunday, November 10th, 2024
Nellikaru GP

ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಬೆದರಿಸಿ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಈ ಆದೇಶ ಹೊರಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ […]

ಎಂ.ಆರ್.ಪಿ.ಎಲ್ ಸಂಸ್ಥೆಯಿಂದ 1500 ಫಲಾನುಭವಿ ಕುಟುಂಬಗಳಿಗೆ 20 ಲಕ್ಷ ಬೆಲೆಯ ಸಿರಿಧಾನ್ಯ ವಿತರಣೆ

Sunday, November 10th, 2024
mrpl-millet

ಸುರತ್ಕಲ್: ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್ ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು. ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಲಳುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ […]

ಕೇಂದ್ರ ಸರ್ಕಾರದಿಂದ ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ

Saturday, November 9th, 2024
Charmadi-Ghat

ಮಂಗಳೂರು: ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ […]

ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ವಿಧ್ಯಾರ್ಥಿನಿ ಸಾವು, ಸಹೋದರಿಗೆ ಗಂಭೀರ ಗಾಯ

Saturday, November 9th, 2024
Rachana-Sullia

ಸುಳ್ಯ : ಸ್ಕೂಟರ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ನಲ್ಲಿದ್ದ ವಿಧ್ಯಾರ್ಥಿನಿ ಸಾವನಪ್ಪಿದ ಘಟನೆ ಸುಳ್ಯದ ಪರಿವಾರಕಾನ -ಉಬರಡ್ಕ ರಸ್ತೆಯ ಸೂಂತೋಡು ಎಂಬಲ್ಲಿ ಸಂಭವಿಸಿದೆ. ಮೃತರನ್ನು ಪುತ್ತೂರಿನ ಖಾಸಗಿ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿನಿ, ಉಬರಡ್ಕ ಮಿತ್ತೂರು ಗ್ರಾಮದ ನಾರಾಯಣ ಕಾಡುತೋಟ ಎಂಬವರ ಪುತ್ರಿ ರಚನಾ (20) ಎಂದು ಗುರುತಿಸಲಾಗಿದೆ. ಆಕೆಯ ಸಹೋದರಿ ಸಹ ಸವಾರೆಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ (16) ಎಂಬವರು […]

“ವಾಗೊಂಚೊ ಖೆಳ್” ನೂತನ ಕೊಂಕಣಿ ಚಿತ್ರದ ಮುಹೂರ್ತ, ಪೋಸ್ಟರ್ ರಿಲೀಸ್

Saturday, November 9th, 2024
Vangoche-khel

ಮಂಗಳೂರು: ಪ್ರವೀಣ್‌ ಫೆರ್ನಾಂಡಿಸ್ ಇವರ ಸನ್ ಶೈನ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ತಯಾರಾಗುತ್ತಿರುವ “ವಾಗೊಂಚೊ ಖೆಳ್” ಕೊಂಕಣಿ ಚಲನಚಿತ್ರದ ಮುಹೂರ್ತ ಮತ್ತು ಪೋಸ್ಟರ್ ರಿಲೀಸ್ ಕಾರ್ಯಕ್ರಮ ಶುಕ್ರವಾರ ಸಂಜೆ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಮಿನಿ ಹಾಲ್ ನಲ್ಲಿ ಜರುಗಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಅರ್ವಿನ್ ಲೋಬೊ ಅವರು, ”ಚಿತ್ರೀಕರಣ ಇದೇ ಬರುವ ನವೆಂಬರ್ 11ರಿಂದ ಶುರುವಾಗಲಿದ್ದು ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಬಿಕರ್ನಕಟ್ಟೆ, ಶಕ್ತಿನಗರ, ಮೂಡುಶೆಡ್ಡೆ, ವಾಮಂಜೂರು, ವಲೆನ್ಸಿಯ, ಬೈತುರ್ಲಿ, […]

ಶ್ರೀನಿವಾಸ್ ಇಂದಾಜೆಗೆ ಪ್ರತಿಷ್ಠಿತ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ!

Saturday, November 9th, 2024
Srinivas-Indaje

ಮಂಗಳೂರು: ನವ ದೆಹಲಿಯ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಒಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಕೇಂದ್ರ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಪ್ರದಾನ ಮಾಡಿದರು. ಮಂಗಳೂರು ನಗರದ ಹೋಟೆಲ್ ಮೋತಿಮಹಲ್ ನಲ್ಲಿ ಪಬ್ಲಿಕ್ ರಿಲೇಶನ್ ಸೊಸೈಟಿ ಒಫ್ ಇಂಡಿಯಾ ಸಂಸ್ಥೆಯ ವಿಶ್ವ ಸ0ವಹನ ಪ್ರಶಸ್ತಿ […]