ಕೋವಿಡ್ ಹೆಸರಿನಲ್ಲಿ ರಾಜ್ಯ ಸರಕಾರ ನಡೆಸಿರುವ ಭ್ರಷ್ಟಾಚಾರ ತಿಳಿಸಲು ಕಾಂಗ್ರೆಸ್ನಿಂದ ಲೆಕ್ಕಕೊಡಿ ಅಭಿಯಾನ

Sunday, September 13th, 2020
saleem

ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನದೊಂದಿಗೆ ರಾಜ್ಯ ಸರಕಾರ ಕೋವಿಡ್ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ವನ್ನು ಜನರಿಗೆ ತಿಳಿಸುವ ಅಭಿಯಾನ ವನ್ನು ಹಮ್ಮಿಕೊಂಡಿದೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. ರಾಜ್ಯಕ್ಕೆ ಜಿ.ಎಸ್ ಟಿ ಮೂಲಕ ಬರಬೇಕಾದ ಪಾಲು ಬಂದಿಲ್ಲ, ನೆರೆ ಪರಿಹಾರ ವಾಗಿ ಕಳೆದ ವರ್ಷ ಬರಬೇಕಾದ 50 ಸಾವಿರ ಕೋಟಿ ರೂ ನಷ್ಟ ಆಗಿತ್ತು. ಕೇಂದ್ರ ಸರಕಾರದಿಂದ ಕೇವಲ 1800 ಕೋಟಿ ನೆರವು ಮಾತ್ರ ಬಂದಿದೆ. ಈ ಬಾರಿ 10 ಸಾವಿರ […]

ಸ್ಕೂಟಿ – ಲಾರಿ ಅಪಘಾತ ಸ್ಕೂಟಿ ಚಾಲಕ ಮೃತ್ಯು

Sunday, September 13th, 2020
scooty accident

ಬೆಳ್ತಂಗಡಿ : ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಮೃತ ಸ್ಕೂಟಿ ಚಾಲಕನನ್ನು ಗರ್ಡಾಡಿ ನಿವಾಸಿ ಗಿರೀಶ್‌ ಮೂಲ್ಯ ಎಂದು ಗುರುತಿಸಲಾಗಿದೆ. ಲಾರಿಯು ಅಳದಂಗಡಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಸ್ಕೂಟಿ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೈಕಾಡಿ ಜನಾರ್ದನ ಆಚಾರ್ ನಿಧನ

Sunday, September 13th, 2020
Baikady Janardhana-Achar

ಮಂಗಳೂರು : ಆದರ್ಶ ಶಿಕ್ಷಕ, ಶಿಕ್ಷಣ ತಜ್ಞ ಬೈಕಾಡಿ ಜನಾರ್ದನ ಆಚಾರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು. ಅವರು ಕೆನರಾ ಹೈ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನರಾಯಣ ಪಟ್ಟಣದ ಮಲನಾಡು ಪಿಯು ಕಾಲೇಜು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ವಿಶ್ವ ಹಿಂದೂ ಪರಿಷತ್‌ನಲ್ಲೂ ಗುರುತಿಸಿಕೊಂಡಿದ್ದರು. ಎಸ್‌ಕೆಜಿಐ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿದ್ದ ಅವರು ಆಗಸ್ಟ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಶಾಲಾ ದಿನಗಳಿಂದಲೇ ಅನೇಕರಿಗೆ […]

ಮದುವೆಯ ಶುಭ ಕಾರ್ಯದಲ್ಲಿ ವಿಳಂಬ ಉಂಟಾಗಿದ್ದರೆ ಈ ರೀತಿ ನಡೆದುಕೊಳ್ಳಿ

Sunday, September 13th, 2020
Lalitha Sahaasranama

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಕೆಲವರು ಹೇಳಿದರು ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು, ಹೌದು ಋಣನುಬಂದ ರುಪೇನಾ ಪಶು ಪತ್ನಿ ಸುತಾಲಯ ಎಂಬ ಮಾತು ನಿಜ. ಋಣ ಸಂಕಲ್ಪದಿಂದ ಮಾತ್ರವೇ ಎಲ್ಲ ಸಂಬಂಧಗಳು ಮೂಡುತ್ತದೆ. ಆದರೆ ಕೆಲವೊಮ್ಮೆ ಇರುವ ಜಾತಕ ದೋಷಗಳು ನಮ್ಮ ಪೂರ್ವಾರ್ಜಿತ ಅಥವಾ ಪ್ರಸ್ತುತ ಕರ್ಮಾಧಾರಿತವಾಗಿ ಗೋಚರವಾಗುತ್ತದೆ. ಶುಭ ಕಾರ್ಯದಲ್ಲಿ ಅಡೆತಡೆ ಉಂಟಾಗಾಲು ಬಹಳಷ್ಟು ಕಾರಣಗಳಿರುತ್ತದೆ. ಉದಾಹರಣೆಗೆ […]

ದಿನ ಭವಿಷ್ಯ : ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ

Sunday, September 13th, 2020
Narasimha swamy

ಶ್ರೀ ನರಸಿಂಹ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ. ಸಂಗಾತಿಯೊಡನೆ ಪ್ರೇಮದಿಂದ ಇರುವುದನ್ನು ರೂಡಿಸಿಕೊಳ್ಳಿ, ಇದು ನಿಜಕ್ಕೂ ಸಂತೋಷ ನೀಡುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ […]

ಪ್ಲಾಸ್ಮಾ ದಾನಮಾಡಿ ಕೋವಿಡ್ -19 ರೋಗಿಯ ಜೀವ ಉಳಿಸಿದ ಪೊಲೀಸ್

Saturday, September 12th, 2020
Ranjith Police

ಪುತ್ತೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಡಿ ಆರ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‌ಸ್ಟೆಬಲ್ ರಂಜಿತ್ ಕುಮಾರ್ ರೈ ಅವರು ಪ್ಲಾಸ್ಮಾ ದಾನ ಮಾಡುವ ಮೂಲಕ ಕೋವಿಡ್ -19 ರೋಗಿಯ ಜೀವ ಉಳಿಸಿದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಯ್ಯಾರು ಗ್ರಾಮದ ಮೂಲದ ರಂಜಿತ್ ಕುಮಾರ್, ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾದ ಬ್ರಹ್ಮವಾರ ಮೂಲದ ಪೂರ್ಣಾನಂದ ಎಂಬ ನಿವೃತ್ತ ಬ್ಯಾಂಕ್ ಅಧಿಕಾರಿ ತನ್ನ ರಕ್ತದಲ್ಲಿ ಪ್ಲಾಸ್ಮಾ ಎಣಿಕೆ ಕಡಿಮೆಯಾದ ನಂತರ ಜೀವನಕ್ಕಾಗಿ ಹೋರಾಡುತ್ತಿದ್ದಾರೆ ಎಂದು […]

ವಿವಾಹಿತ ಮಹಿಳೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Saturday, September 12th, 2020
Shilpa

ಮಂಗಳೂರು: ಮಂಗಳೂರು ಹೊರವಲಯದ ಗುರುಪುರದ ಭಜನಾ ಮಂದಿರ ಸಮೀಪದಲ್ಲಿ ವಿವಾಹಿತ ಮಹಿಳೆಯೊಬ್ಬರು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಜ್ಪೆಯ ಜ್ಯುವೆಲ್ಲರಿ ಅಂಗಡಿ ಮಾಲೀಕರ ಪುತ್ರಿಯಾಗಿರುವ ಶಿಲ್ಪಾ (28) ನೇಣಿಗೆ ಶರಣಾದವರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಲಾಕ್ಡೌನ್ ಬಳಿಕ ತವರಿಗೆ ಬಂದು, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಪತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, 11 ತಿಂಗಳ ಮಗು ಇದೆ. ಶುಕ್ರವಾರ ಘಟನೆ ನಡೆದಿದೆ. ಸಾಯುವ ಮುನ್ನ ಈಕೆಯು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ […]

ಸುರಿಯುತ್ತಿರುವ ಭಾರೀ ಮಳೆಗೆ ಒಮ್ನಿ ಕಾರಿನ ಮೇಲೆ ಮುರಿದು ಬಿದ್ದ ಮರ

Saturday, September 12th, 2020
omni car

ಕಡಬ :  ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಚಲಿಸುತ್ತಿದ್ದ ಒಮ್ನಿ ಕಾರಿನ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮುರಿದುಬಿದ್ದಿದೆ. ಕೊಯಿಲದಿಂದ ಆತೂರಿಗೆ ಯೋಗೀಶ್ ಎಂಬ‌ುವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರಿನ ಮೇಲೆ ಮರ ಮುರಿದು ಬಿದ್ದಿದೆ. ಮರ ರಸ್ತೆಗೆ ಮುರಿದು ಬಿದ್ದ ಪರಿಣಾಮ ಸುಮಾರು ಅರ್ಧತಾಸು […]

ರಾಜ್ಯ ಸಾಹಿತ್ಯ ಪರಿಷತ್ ನ ಅಧ್ಯಕ್ಷರನ್ನು ಪದತ್ಯುತಗೊಳಿಸಿಸಲು ಒತ್ತಾಯ

Saturday, September 12th, 2020
Veereshwara Bhat

ಮಂಗಳೂರು : ಕರ್ನಾಟಕ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮನು  ಬಳಿಗಾರ್ ರವರ ಅಧಿಕಾರ ಅವಧಿಯು ಈಗಾಗಲೇ ಮುಗಿದಿದ್ದು ತಕ್ಷಣಕ್ಕೆ ಪದತ್ಯುತಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಗಡಿನಾಡು ಕಾಸರಗೋಡಿನ ಕನ್ನಡ ಹೋರಾಟಗಾರ ಜಿ ವೀರೇಶ್ವರ ಭಟ್ ಕರ್ಮರ್ಕರ್ ಒತ್ತಾಯಿಸಿದ್ದಾರೆ. ಶನಿವಾರ ನಗರದ  ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಸರಗೋಡಿನ ಕನ್ನಡಿಗರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು, ಕಾಸರಗೋಡಿನಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಬೆಂಬಲಿಸಬೇಕು, ಕನ್ನಡಿಗರ ಮೇಲೆ ದೌರ್ಜನ್ಯ ವನ್ನು‌ ನಿಲ್ಲಿಸಬೇಕು, ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕದಲ್ಲಿ ಕಡ್ಡಾಯವಾಗಿ […]

ಜನರ ಕೆಟ್ಟ ದೃಷ್ಟಿಯಿಂದ ಬಿಡುಗಡೆಹೊಂದುವ ತಂತ್ರ

Saturday, September 12th, 2020
Rakshas

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಕಣ್ಣು ದೃಷ್ಟಿ ಅಥವಾ ಕೆಟ್ಟ ದೃಷ್ಟಿ ದೋಷ ಮನುಷ್ಯನ ಆರ್ಥಿಕ ವ್ಯವಹಾರಗಳಿಂದ ಹಿಡಿದು ಅವನ ಆರೋಗ್ಯ ವಿಷಯದ ತನಕ ಸಮಸ್ಯೆ ತಂದೊಡ್ಡುತ್ತದೆ. ಕೆಲವು ವೇಳೆ ನಮ್ಮ ವರ್ತನೆ ಇನ್ನೊಬ್ಬರಲ್ಲಿ ಅಸೂಯೆ ಹುಟ್ಟಿಸುವಂತಹು ದಾಗಿರುತ್ತದೆ, ಅಥವಾ ದುರಹಂಕಾರದಿಂದ ಕೂಡಿರಬಹುದು ಇದು ಸಹ ಜನರ ದೃಷ್ಟಿಗೆ ಬರುವ ಸಾಧ್ಯತೆ ಇದೆ. ಹಾಗೆಯೇ ನಮ್ಮ ಬೆಳವಣಿಗೆ, ಏಳಿಗೆ, ಹಾವಭಾವ, […]