ಉಡುಪಿ : ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ

Thursday, March 5th, 2020
charan-shetty

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಕಾಲೇಜಿನ ಪ್ರಾಧ್ಯಾಪಕರು ನೀಡಿದ ಮಾನಸಿಕ ಕಿರುಕುಳಕ್ಕೆ ಬೆಸತ್ತು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಾಲೇಜಿನವರ ಮೇಲೆ ಆರೋಪವಿದೆ. ಬ್ರಹ್ಮಾವರ ಮಂದಾರ್ತಿ ಸಮೀಪದ ಮೈರಕೊಮೆ ನಿವಾಸಿ ಚರಣ್ ಶೆಟ್ಟಿ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹೆಬ್ರಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಂದು ನಡೆದ ಘಟನೆಗೆ […]

ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣ; ಆರೋಪಿ ಬಂಧನ

Tuesday, March 3rd, 2020
uppinangady

ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ಗೈಯಲಾದ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ಮೂಡಬೈಲು ಬರಮೇಲು ಮನೆ ನಿವಾಸಿ ವಿನಯ (25)ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಸತೀಶ್ ಗೌಡ ಎಂಬವರು ಫೆ.28ರಂದು ತನ್ನ ಬೈಕ್ ಅನ್ನು ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಫೆ.29ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ […]

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಕಾವೂರು ಪೊಲೀಸರಿಂದ ಬಂಧನ

Tuesday, March 3rd, 2020
mohammad

ಮಂಗಳೂರು : ತಾಲೂಕಿನ ಪಡುಶೆಡ್ಡೆ ಗ್ರಾಮದ ಮಂಜಲಪಾದೆ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೂಡುಶೆಡ್ಡೆಯ ಪಿಲಿಕುಳ ನಿವಾಸಿ ಮುಹಮ್ಮದ್ ಮುಸ್ತಫಾ (22) ಬಂಧಿತ ವ್ಯಕ್ತಿ. ಬಂಧಿತನಿಂದ 26 ಸಾವಿರ ರೂ. ಮೌಲ್ಯದ 1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆ ಸಂದರ್ಭ ಮತ್ತೋರ್ವ ಆರೋಪಿ ವಾಮಂಜೂರಿನ ಮಹಮ್ಮದ್ ರಾಯಿಫ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಮುಹಮ್ಮದ್ ಮುಸ್ತಫಾ ವಿರುದ್ಧ ಉಳ್ಳಾಲ ಮತ್ತು ಬರ್ಕೆ […]

ಕುಂದಾಪುರ : ಪಾಕಿಸ್ಥಾನ ಪರ ಘೋಷಣೆ ಕೂಗಿದ ಆರೋಪಿಯ ಬಂಧನ

Monday, March 2nd, 2020
kundapur

ಕುಂದಾಪುರ : ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ವ್ಯಕ್ತಿಯೋರ್ವ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಸೋಮವಾರ ನಡೆದಿದೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (43) ಘೋಷಣೆ ಕೂಗಿದ ವ್ಯಕ್ತಿ. ಇಂದು ಬೆಳಿಗ್ಗೆ ಈತ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದ. ಈ ಬಗ್ಗೆ ತಹಶೀಲ್ದಾರ್ ದೂರು ನೀಡಿದ್ದು, ಎಸ್ ಐ ಹರೀಶ್ ಆರ್ ನಾಯ್ಕ್ ತಕ್ಷಣ ಆರೋಪಿಯನ್ನು ಬಂಧಿಸಿದ್ದು, ದೇಶದ್ರೋಹ ಪ್ರಕರಣ ದಾಖಲಾಗಿದೆ. […]

ಮಂಗಳೂರು : ರೈಲಿನಡಿಗೆ ತಲೆ ಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

Friday, February 28th, 2020
sammad

ಮಂಗಳೂರು : ಬೆಳಗಾವಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಂಗಳೂರಿಗೆ ಬಂದು ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳಗಾವಿ ನಿವಾಸಿ ಸಮ್ಮದ್ ರಾಯಗೌಡ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಾಯಗೌಡ ಬಿ.ಇ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು. ರಾಯಗೌಡ ಮಂಗಳೂರಿನ ಉಳ್ಳಾಲ ಸೋಮೇಶ್ವರ ರೈಲ್ವೇ ನಿಲ್ದಾಣದಲ್ಲಿ ರೈಲು ಬರುವ ಮೊದಲೇ ಬಂದು ಕೂತಿದ್ದನು. ನಂತರ ರೈಲು ಬರುತ್ತಿದ್ದಂತೆ ಹಳಿಗೆ ಹಾರಿ ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಉಳ್ಳಾಲ […]

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರ ಬಂಧನ

Friday, February 28th, 2020
quta-note

ಬಜಪೆ : ಖೋಟಾ ನೋಟನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ನೀರುಮಾರ್ಗದ ಕೆಲರಾಯ್‌ಯಲ್ಲಿ ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಲರ್‌ ಪ್ರಿಂಟರ್‌, ಖೋಟಾನೋಟು, ಎರಡು ಮೊಬೈಲ್‌ ಮತ್ತು ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕು ಕಾಂಜಿಲ ಕೋಡಿ ಮನೆಯ ಧೀರೇಂದ್ರ (45) ಹಾಗೂ ಅಡ್ಯಾರ್‌ ವಳಬೈಲಿನ ಸುಧೀರ್‌ ಪೂಜಾರಿ (44) ಬಂಧಿತರು. ಇವರಿಂದ 500 ರೂ. ಮುಖಬೆಲೆಯ ಮೂರು ಹಾಗೂ 200 ರೂ. ಮುಖಬೆಲೆಯ ಏಳು ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ. 23ರಂದು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ […]

ಪುತ್ತೂರು : ವಿವಾಹ ದಿನದಂದೇ ನಾಪತ್ತೆಯಾದ ವಧು

Thursday, February 27th, 2020
vadhu

ಪುತ್ತೂರು : ಮದರಂಗಿ ಶಾಸ್ತ್ರ ಕಾರ್ಯಕ್ರಮ ಮುಗಿಸಿ ವಿವಾಹಕ್ಕೆ ತಯಾರಾಗಿದ್ದ ಮದುಮಗಳು ನಾಪತ್ತೆಯಾಗಿ ವಿವಾಹ ಕಾರ್ಯಕ್ರಮವೇ ರದ್ದಾದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆಯಲ್ಲಿ ನಡೆದಿದೆ. ಪುಲ್ಲಾಜೆ ನಿವಾಸಿ ಬ್ಯಾಂಕ್‌‌‌ ಉದ್ಯೋಗಿಯೊಬ್ಬರ ಮಗಳ ವಿವಾಹವು ಕುಂಬ್ರದ ಶಿವಕೃಪಾ ಸಭಾ ಭವನದಲ್ಲಿ ಫೆ.26ರಂದು ನಿಗದಿಯಾಗಿತ್ತು. ಫೆ.25ರಂದು ರಾತ್ರಿ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ಸಂಭ್ರಮವೂ ನಡೆದಿತ್ತು. ರಾತ್ರಿ ಸುಮಾರು 12 ಗಂಟೆಯ ತನಕ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ನಡೆದಿತ್ತು. ಸಂಬಂಧಿಕರೆಲ್ಲರೂ ಬುಧವಾರ ನಡೆಲಿದ್ದ ಮದುವೆಯ ಸಿದ್ದತೆಯಲ್ಲಿದ್ದರು. […]

ದೆಹಲಿ ಹಿಂಸಾಚಾರ : ಮೋರಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಯ ಶವ ಪತ್ತೆ

Wednesday, February 26th, 2020
Ankith-Sharma

ನವದೆಹಲಿ : ಪೌರತ್ವದ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಹೊತ್ತು ಉರಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗಾಗಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ನಡುವೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಶವವೊಂದು ದೆಹಲಿಯ ಮೋರಿಯಲ್ಲಿ ಪತ್ತೆಯಾಗಿದೆ. ಅಂಕಿತ್ ಶರ್ಮಾ ಸಾವನ್ನಪ್ಪಿದ ಅಧಿಕಾರಿಯಾಗಿದ್ದಾರೆ. ಉತ್ತರ ದೆಹಲಿಯ ಚಾಂದಭಾಗ್ನಲ್ಲಿ ಬೆಳಗ್ಗೆ ಇವರ ಶವ ಪತ್ತೆಯಾಗಿದೆ. ಮಂಗಳವಾರ ಅಂಕಿತ್ ಶರ್ಮಾ ಮನೆಗೆ ಹಿಂದಿರುಗುವಾಗ ಅವರ ಮೇಲೆ ಗುಂಪು ದಾಳಿ ನಡೆಸಿದೆ. ಈ ವೇಳೆ ಹಲ್ಲೆ ನಡೆಸಿ ಅವರನ್ನು ಹತ್ಯೆಗಯ್ಯಲಾಗಿದೆ. ಬಳಿಕ ದೇಹವನ್ನು ಮೋರಿಗೆ ಎಸೆಯಲಾಗಿದೆ […]

ಸರ್ಕಾರಿ ಶಾಲೆಯ ಶಿಕ್ಷಕ ಕ್ಲಾಸ್​ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Wednesday, February 26th, 2020
lal-bhagh

ಉತ್ತರಪ್ರದೇಶ : ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ ಶಾಲೆಯ ಕ್ಲಾಸ್ ರೂಮಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಲಾಲ್ಬಾಗ್ನಲ್ಲಿ ನಡೆದಿದೆ. ರವೀಂದ್ರ ಕುಮಾರ್ ಶುಕ್ಲಾ(49) ಹೆಸರಿನ ಶಿಕ್ಷಕ ಕೆಲವು ವರ್ಷಗಳಿಂದ ಲಾಲ್ಬಾಗ್ನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರದಂದು ಸರಿಯಾದ ಸಮಯಕ್ಕೆ ಶಾಲೆಗೆ ಬಂದಿದ್ದ ಅವರು ಪ್ರತಿದಿನದಂತೆ ತರಗತಿಗಳನ್ನು ನಡೆಸಿ, ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ಮನೆಗೆ ತೆರಳಿದ ನಂತರ ತರಗತಿಗಳ ಬಾಗಿಲನ್ನು ಹಾಕಿ ಬಂದಿದ್ದಾರೆ. ಆದರೆ ಮತ್ತೆ ತರಗತಿಯೊಳಗೆ […]

ದೆಹಲಿ ಹಿಂಸಾಚಾರದಲ್ಲಿ 76 ಮಂದಿಗೆ ಗಾಯ, ಸೆಕ್ಷನ್ 144 ಜಾರಿ

Tuesday, February 25th, 2020
dehali-himsachara

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ 76 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ದಿಲ್ಲಿಯ ಅತೀ ಸೂಕ್ಷ್ಮ ಪ್ರದೇಶಗಳಾದ ಜಾಫ್ರಾಬಾದ್, ಮೌಜ್ ಪುರ್, ಬಾಬರ್ ಪುರ್, ಗೋಕುಲ್ ಪುರಿ, ಜೋಹ್ರಿ ಎನ್ ಕ್ಷೇವ್ ಮ್ತು ಶಿವ ವಿಹಾರ್ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ವಿವರಿಸಿದೆ. ಅಮೆರಿಕ […]