2019ರ ವಿಶ್ವಕಪ್​ ಟೂರ್ನಿ..ಕೊಹ್ಲಿ ಪಡೆಯಲ್ಲಿ ಇವರೆಲ್ಲ ಸ್ಥಾನ ಪಡೆಯೋ ಸಾಧ್ಯತೆ!

Wednesday, July 25th, 2018
team-india

ಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಬಹುನೀರಿಕ್ಷಿತ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಕೂಡ ಅದರಿಂದ ಹೊರತಾಗಿಲ್ಲ. ಅದಕ್ಕಾಗಿ ಕೆಲವೊಂದು ಪರೀಕ್ಷೆಗೆ ತಂಡ ಒಳಗಾಗಿದೆ. ಈ ಹಿಂದಿನ ಸರಣಿಗಳಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ಎಲ್ಲ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ. ಈಗಾಗಲೇ ಈ ಹಿಂದಿನ ಅನೇಕ ಸರಣಿಗಳಲ್ಲಿ ಉತ್ತಮ ಜೊತೆಯಾಟ ನೀಡಿರುವ ಶಿಖರ್ […]

20 ವರ್ಷಗಳ ಬಳಿಕ 2ನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಫ್ರಾನ್ಸ್​..!

Monday, July 16th, 2018
france

ಮಾಸ್ಕೋ: ಫ್ರಾನ್ಸ್ ತಂಡವು ಫುಟ್ಬಾಲ್ ಜಗತ್ತಿನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಕ್ರೋವೇಶಿಯಾವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಕ್ರೋವೇಶಿಯಾವನ್ನು 4-2 ಅಂತರದ ಗೋಲುಗಳಿಂದ ಮಣಿಸಿದೆ. 20 ವರ್ಷಗಳ ಬಳಿಕ 2ನೇ ಬಾರಿಗೆ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿಂದೆ 1998ರಲ್ಲಿ ಫ್ರಾನ್ಸ್ ತಂಡ ಫುಟ್ಬಾಲ್ ವಿಶ್ವಕಪ್ ಗೆದ್ದಿತ್ತು. ಕ್ರೋವೇಶಿಯಾವು ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿತ್ತು.

ವಿಶ್ವ ಜೂನಿಯರ್​ ಅಥ್ಲೆಟಿಕ್ಸ್..ಚಿನ್ನದ ಪದಕ ಗೆದ್ದ ಹಿಮಾದಾಸ್!

Saturday, July 14th, 2018
hima-das

ಹೈದರಾಬಾದ್: 18 ವರ್ಷದ ತರುಣಿ ಹಿಮಾದಾಸ್ ಫಿನ್ಲ್ಯಾಂಡ್ನಲ್ಲಿ ನಡೆದ 20ರ ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂತನ ಇತಿಹಾಸ ರಚನೆ ಮಾಡಿರುವ ಜತೆಗೆ ಕೋಟಿ ಕೋಟಿ ಭಾರತೀಯರ ಹೃದಯ ಗೆದ್ದಿದ್ದಾಳೆ. 400 ಮೀ. ಓಟವನ್ನ 18ರ ಹರೆಯದ ಹಿಮಾ ಕೇವಲ 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (52.07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 […]

ನಾಳೆ ಫಿಫಾ ವಿಶ್ವಕಪ್ ಫೈನಲ್..ಫ್ರಾನ್ಸ್-ಕ್ರೋವೇಷಿಯಾ ಮುಖಾಮುಖಿ!

Saturday, July 14th, 2018
football-cup

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 21ನೇ ಫಿಫಾ ವಿಶ್ವಕಪ್ 2018 ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾನುವಾರ ಕಾಲ್ಚೆಂಡಿನ ಬಿಗ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್-ಕ್ರೋವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಬಗ್ಗುಬಡಿದು ಫ್ರಾನ್ಸ್ ಉಪಾಂತ್ಯಕ್ಕೆ ತಲುಪಿದೆ. ಇತ್ತ ಮಗದೊಂದು ಜಿದ್ದಾಜಿದ್ದಿನ ಸೆಮೀಸ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ದ ಕ್ರೊಯೇಷ್ಯಾ 2-1ರ ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು. ಫ್ರಾನ್ಸ್ ಎರಡನೇ ಬಾರಿಗೆ ಕಿರೀಟ ಎದುರು ನೋಡುತ್ತಿದ್ದರೆ ಕ್ರೊಯೇಷ್ಯಾ ಇತಿಹಾಸ ರಚಿಸುವ ತವಕದಲ್ಲಿದೆ. ‘ಸಿ’ ಗುಂಪಿನಲ್ಲಿ […]

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯ..ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ!

Friday, July 13th, 2018
india

ನ್ಯಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಈಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದೆ. ಇಲ್ಲಿನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಇಂಗ್ಲೆಂಡ್ ನೀಡಿದ 268 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ 40.1 ಓವರ್ಗಳಲ್ಲಿ 2 ವಿಕೆಟ್ಕಳೆದುಕೊಂಡು 269 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಹಿಟ್ಮ್ಯಾನ್ ರೋಹಿತ್ […]

ಇಂಗ್ಲೆಂಡಿಗೆ ಸೋಲು..ಮೊದಲ ಬಾರಿ ಕ್ರೊವೇಷಿಯಾ ಫೈನಲ್​ಗೆ ಎಂಟ್ರಿ!

Thursday, July 12th, 2018
croatia

ಮಾಸ್ಕೋ: ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಕ್ರೊವೇಷಿಯಾ ತಂಡ ಫೈನಲ್ಗೆ ಎಂಟ್ರಿ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಫೈನಲ್ಗೇರಿ ಇತಿಹಾಸ ನಿರ್ಮಿಸಿದೆ. ರಷ್ಯಾದ ಲುಜ್ನಿಕ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಕ್ರೊವೇಷಿಯಾ 2-1 ಗೋಲುಗಳ ಅಂತರದಿಂದ ಸೋಲಿಸಿತು. ಎರಡೂ ತಂಡಗಳು ಬಲಿಷ್ಠವಾಗಿದ್ದರಿಂದ ಪಂದ್ಯ ತೀವ್ರ ಹಣಾಹಣೆಗೆ ಸಾಕ್ಷಿಯಾಯಿತು. ಪಂದ್ಯದ ಮೊದಲಾರ್ಧದಲ್ಲೇ ಫ್ರೀಕಿಕ್ನಲ್ಲಿ ಕೀರನ್ ಟ್ರಿಪ್ಪಿರ್ ಗೋಲು ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದಿದ್ದರು. ಬಳಿಕ 68ನೇ […]

ಫಿಫಾ ವಿಶ್ವಕಪ್​ 2ನೇ ಸೆಮೀಸ್..ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವೆ ಹಣಾಹಣಿ!

Wednesday, July 11th, 2018
england

ಮಾಸ್ಕೋ: ಒಂದು ತಂಡ 28 ವರ್ಷಗಳ ಬಳಿಕ ಮತ್ತೊಂದು ತಂಡ ಅರ್ಧಶತಕ ವರ್ಷಗಳ ಬಳಿಕ ಫೈನಲ್ಗೇರುವ ಕನಸು ಕಾಣುತ್ತಿವೆ. ಅವು ಬೇರಾರು ಅಲ್ಲ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು. ಅದರಲ್ಲೂ 21 ನೇ ವಿಶ್ವಕಪ್ ಪಂದ್ಯಾವಳಿಯಲ್ಲಂತೂ ಅತಿರಥ ಮಹಾರಥರೇ ಮಣ್ಣುಮುಕ್ಕಿದ್ದಾರೆ. ಅಂದುಕೊಂಡ ಎಲ್ಲ ತಂಡಗಳು ಮನೆಗೆ ಹೋಗಿವೆ. ಅಂತಹದ್ದರಲ್ಲಿ ಇವತ್ತಿನ ಮತ್ತೊಂದು ಸೆಮಿಫೈನಲ್ ಹಣಾಹಣಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. 1966ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್ ಆ ಬಳಿಕ ಪ್ರಶಸ್ತಿಯ ಸನಿಹಕ್ಕೂ ಸುಳಿದಿಲ್ಲ. ಈ ವಿಶ್ವಕಪ್ನಲ್ಲಿ ಗೆದ್ದು […]

ಮಹತ್ವದ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು1-0 ಅಂತರದಿಂದ ಬಗ್ಗುಬಡಿದ ಫ್ರಾನ್ಸ್..ಫೈನಲ್​ಗೆ ಲಗ್ಗೆ!

Wednesday, July 11th, 2018
france-football

ರಷ್ಯಾ: ಮಹತ್ವದ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಬಗ್ಗುಬಡಿದ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ. ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫಿಫಾ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂ 1-0 ಅಂತರದಿಂದ ಸೋತು ನಿರಾಶೆ ಅನುಭವಿಸಿತು. ಫ್ರಾನ್ಸ್ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಫ್ರಾನ್ಸ್ನ ಸ್ಯಾಮ್ಯುಯೆಲ್ ಉಮ್ಟಿಟಿ ಪಂದ್ಯದ 51ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ಆದರೆ ಗೋಲು ಗಳಿಸುವ ಬೆಲ್ಜಿಯಂನ ಎಲ್ಲ ತಂತ್ರಗಳನ್ನು ಫ್ರಾನ್ಸ್ […]

ಫಿಫಾ ವಿಶ್ವಕಪ್ ಸೆಮಿಫೈನಲ್..ಫ್ರಾನ್ಸ್​​ ಹಾಗೂ ಬೆಲ್ಜಿಯಂ ತಂಡಗಳ ನಡುವೆ ಜಿದ್ದಾ ಜಿದ್ದಿನ ಹೋರಾಟ!

Tuesday, July 10th, 2018
belgium

ಫ್ರಾನ್ಸ್: 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಕಿರೀಟ ಮುಡಿಗೇರಿಸಿಕೊಳ್ಳಲು ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು, ಫೈನಲ್ ಪ್ರವೇಶ ಪಡೆದುಕೊಳ್ಳಲು ನಾಲ್ಕು ತಂಡಗಳು ಕಸರತ್ತು ನಡೆಸಿವೆ. ಮೊದಲ ಸೆಮೀಸ್ನಲ್ಲಿ ಇಂದು ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳು ಕಾದಾಡಲಿವೆ. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಕೆಲವೊಂದು ಆಶ್ಚರ್ಯಕರ ಸಂಗತಿಗಳು ನಡೆದಿದ್ದು, ಯಾರೂ ಊಹೆ ಮಾಡದ ರೀತಿಯಲ್ಲಿ ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಇದರ ಮಧ್ಯೆ ಇಂದಿನ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಣೆಸಲಿವೆ. ಟೂರ್ನಿಯಲ್ಲಿ ಬೆಲ್ಜಿಯಂ ಇಲ್ಲಿಯವರೆಗೆ 14 […]

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇಂದು 37ನೇ ವರ್ಷದ ಹುಟ್ಟುಹಬ್ಬ..!

Saturday, July 7th, 2018
m-s-dhoni

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ, ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಇಂದಿಗೆ ಸರಿಯಾಗಿ 37 ವರ್ಷಗಳ ಹಿಂದೆ ಅಂದರೆ ಜುಲೈ 7, 1981ರಲ್ಲಿ ರಾಂಚಿಯಲ್ಲಿ ಜನಿಸಿದವರು. ಧೋನಿ ಡಿಸೆಂಬರ್ 23, 2004ರಂದು ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಾರೆ. ಅದಾದ ಒಂದು ವರ್ಷದ ನಂತರ ಅಂದರೆ, ಡಿಸೆಂಬರ್ 2, 2005ರಲ್ಲಿ ಧೋನಿ […]