ಹೆದ್ದಾರಿಯಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಮಹಿಳೆ ಮೃತ್ಯು

Wednesday, November 27th, 2019
priya suvarna

ಮಂಗಳೂರು : ಕುಂಟಿಕಾನ ಹೆದ್ದಾರಿಯ ಖಾಸಗಿ ಹೋಟೆಲ್ ಸಮೀಪ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ  ಬುಧವಾರ ನಡೆದಿದೆ. ಕಾವೂರು ನಿವಾಸಿ ಪ್ರಿಯಾ ಸುವರ್ಣ (42) ಮೃತರು ಎಂದು ಗುರುತಿಸಲಾಗಿದೆ. ಅವರು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಕೆಪಿಟಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ರಸ್ತೆಗೆಸೆಯಲ್ಪಟ್ಟ ಪ್ರಿಯಾ ಸುವರ್ಣ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು […]

ಪಂಚಾಯತ್ ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ವಿದ್ಯಾರ್ಥಿಗಳ ಮೃತ್ಯು

Thursday, April 4th, 2019
Putturu Water tank

ಪುತ್ತೂರು: ನೀರಿನಲ್ಲಿ ಆಟವಾಡಲೆಂದು ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿಗೆ ಇಳಿದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ನಡೆದಿದೆ. ಸಾವಿಗೀಡಾದ ಮಕ್ಕಳನ್ನು ವಿಶ್ಮಿತಾ (13), ಚೈತ್ರಾ (10) ಹಾಗೂ ಜಿತೇಶ್ (13) ಎಂದು ಗುರುತಿಸಲಾಗಿದೆ. ಮೃತಪಟ್ಟ ಮಕ್ಕಳೆಲ್ಲಾ ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಹಿನ್ನಲೆಯಲ್ಲಿ ಆಟವಾಡಲು ತೆರಳಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೋಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಬೆಳ್ತಂಗಡಿ ಕೆಎಸ್ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Monday, August 6th, 2018
Belthangady Accident

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಬಳಿ ಬೆಂಗಳೂರು ಕಡೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಧರ್ಮಸ್ಥಳ ನಿವಾಸಿಗಳಾದ ದಿನೇಶ್(32) ಹಾಗೂ ಸಂದೇಶ್(30) ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಈ ಇಬ್ಬರು ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಅವರನ್ನು ಸ್ಥಳೀಯ ಯುವಕರು ಹರಸಾಹಸಪಟ್ಟು ಕಾರಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ದಿನೇಶ್ ಮತ್ತು ಸಂದೇಶ ಅಸುನೀಗಿದ್ದಾರೆ. […]

ಮುಲ್ಕಿಯಲ್ಲಿ ಲಾರಿ ಢಿಕ್ಕಿ ಹೊಡೆದು ಬಾಲಕ ಮೃತ್ಯು

Monday, May 21st, 2018
Mulki Bus accident

ಮುಲ್ಕಿ :  ಮಿನಿಬಸ್ ಮತ್ತ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಹೆದ್ದಾರಿ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಬಾಲಕ ಮೃತಪಟ್ಟು ಕುಟುಂಬದ ಸದಸ್ಯರು ಗಾಯಗೊಂಡ ಘಟನೆ ರವಿವಾರ ರಾತ್ರಿ ಮುಲ್ಕಿಯ ಬಪ್ಪನಾಡು ದೇವಸ್ಥಾನದ ಎದುರು ನಡೆದಿದೆ. ಮೃತ ಬಾಲಕನನ್ನು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ನಿವಾಸಿ ರಕ್ಷಿತ್ ಕುಮಾರ್ (12) ಎಂದು ಗುರುತಿಸಲಾಗಿದೆ. ಮುಲ್ಕಿಯ ಬಪ್ಪನಾಡು ಬಳಿಯ ಅಪಾರ್ಟ್‌ಮೆಂಟ್ ಒಂದರ ವಾಚ್ ಮ್ಯಾನ್ ಮುತ್ತು ಎಂಬವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಲ್ಕಿಯ ಬಪ್ಪನಾಡು […]

ಕಾರ್ಕಳ ಭೀಕರ ಅಪಘಾತ : ಬೆಂಗಳೂರು ಡಿಸಿಪಿ ಪತ್ನಿ ಹಾಗು ಚಾಲಕ ಬಲಿ

Thursday, April 3rd, 2014
Police Jeep

ಕಾರ್ಕಳ: ಪೊಲೀಸ್‌ ಬೊಲೆರೋ ಜೀಪ್‌ ಹಾಗೂ ಸರಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀಪ್‌ನಲ್ಲಿದ್ದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್‌ ಅವರ ಪತ್ನಿ ಗಾಯತ್ರಿ (35) ಹಾಗೂ ಜೀಪ್‌ ಚಾಲಕ ನಟರಾಜ್‌ ಸಾವಿಗೀಡಾಗಿ, ಉಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬೊಲೇರೊ ಪೊಲೀಸ್‌ ಜೀಪ್‌ ಧರ್ಮಸ್ಥಳದಿಂದ ಕಾರ್ಕಳ ಮೂಲಕ ಉಡುಪಿಗೆ ಸಾಗುತ್ತಿದ್ದು ಅದರಲ್ಲಿ 5 ಜನ ಪ್ರಯಾಣಿಕರಿದ್ದರು. ಬಸ್‌ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಮಧ್ಯಾಹ್ನ 1.30ರ […]

ಮದುವೆಗೆ ಬಂದಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Monday, September 9th, 2013
Praveen

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ರವಿವಾರ ಕಟೀಲಿನಲ್ಲಿ  ತನ್ನ ಸ್ನೆಹಿತ ಹರೀಶ್ ಎಂಬವರ ಮದುವೆಗೆ ಬಂದಿದ್ದ ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್(20) ನೀರುಪಾಲಾದ ದುರ್ದೈವಿ.  ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

Sunday, July 21st, 2013
Vinay Vaz

ಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. […]

ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನ ಡಕ್ಕಿ ಹೊಡೆದು ವೈದ್ಯ ಮೃತ್ಯು

Saturday, July 20th, 2013
Doctor

ಮಂಗಳೂರು : ಮಂಗಳೂರು-ಮೂಡಬಿದಿರೆಯ ಹೆದ್ದಾರಿಯಲ್ಲಿರುವ  ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನವೊಂದು ಬೈಕ್ ನಲ್ಲಿ ಹೋಗುತ್ತಿದ್ದ  ಪಾಂಡೇಶ್ವರದ ವೈದ್ಯರೊಬ್ಬರಿಗೆ  ಡಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ  ಮೃತ  ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿನ ಪಾಂಡೇಶ್ವರದ ನಿವಾಸಿ  ಡಾ.ಹರ್ಷವರ್ಧನ ಗಣೇಶ್ ಉಳ್ಳಾಲ್ ಮೃತಪಟ್ಟ ದುರ್ದೈವಿ.  ಗುರುವಾರ ಹರ್ಷವರ್ಧನ್ ತನ್ನ ಮೂವರು ಗೆಳೆರೊಂದಿಗೆ ಗಂಜಿಮಠದಲ್ಲಿರುವ ಗೆಳೆಯನ ಮನೆಗೆ ಹೊಗಿದ್ದರು. ಶುಕ್ರವಾರ ಮುಂಜಾನೆ ಮೂರು ಮಂದಿ ಗೆಳೆಯರು ಕಾರಿನಲ್ಲಿ ಹೊರಟರು, ಹರ್ಷವರ್ಧನ್ ಮಾತ್ರ ಗಂಜಿಮಠದಿಂದ ಮಂಗಳೂರಿಗೆ ಬೈಕ್ ನಲ್ಲೇ ತೆರಳಿದರು. ಮಂಗಳೂರು-ಮೂಡಬಿದಿರೆ […]

ಹೂವಿನ ವ್ಯಾಪಾರಿ ದಂಪತಿಗಳ ಬೈಕಿಗೆ ಟೆಂಪೋ ಡಿಕ್ಕಿ, ಪತ್ನಿ ಸಾವು, ಪತಿ ಗಂಭೀರ

Wednesday, July 17th, 2013
Flower Merchants Killed

ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ. ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ತಲಪಾಡಿ ನದಿ ತಟದಲ್ಲಿ ಮಗುವಿನ ಮೃತ ದೇಹ ಪತ್ತೆ

Thursday, July 11th, 2013
Talapady Infant Killed

ಮಂಗಳೂರು : ಕೆಲವೇ ದಿನಗಳ ಹಿಂದಷ್ಟೇ ಜನಿಸಿರಬಹುದಾದ ಪುಟ್ಟ ಮಗುವೊಂದು ತಲಪಾಡಿ ನದಿಯಲ್ಲಿ ಸತ್ತುಬಿದ್ದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಸ್ಥಳೀಯರು ಇಂದು ಬೆಳಿಗ್ಗೆ  ನದಿ ತಟದಲ್ಲಿ ಮೃತ ಮಗುವನ್ನು ಪತ್ತೆ ಹಚ್ಚಿದರು. ಬಳಿಕ ಪಂಚಾಯತ್ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಮಗು ಗಂಡಾಗಿದ್ದು,  ಮಗುವಿನ ದೇಹದ ಮೇಲೆ ಕೆಲವು ಗಾಯದ ಗುರುತುಗಳಿದ್ದು ಅದು ಸಾವಿನ ನಂತರ ಉಂಟಾಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ. ಇದೀಗ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ, ಮೃತ ಮಗುವಿನ ಹೆತ್ತವರ ಬಗ್ಗೆ ಯಾವುದೇ ಸುಳಿವಿಲ್ಲ. ಈ […]