ವಿವಿ ಕಾಲೇಜು: ಡಾ. ಪಂಕಜ್ ಕುಮಾರ್ ರಿಂದ ಐಪಿಆರ್ ಕುರಿತು ವಿಶೇಷ ಉಪನ್ಯಾಸ

Friday, July 16th, 2021
Pankaj Kumar

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಐಕ್ಯೂಎಸಿ ಮತ್ತು ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗಗಳು ಜಂಟಿಯಾಗಿ ‘ಶಿಕ್ಷಣ ಮತ್ತು ಸ್ಟಾರ್ಟ್ಅಪ್‌ಗಳಲ್ಲಿ ಐಪಿಆರ್ ಮತ್ತು ತಂತ್ರಜ್ಞಾನ ವರ್ಗಾವಣೆ’ ಕುರಿತಂತೆ ಇತ್ತೀಚೆಗೆ ವೆಬಿನಾರ್‌ವೊಂದನ್ನು ಆಯೋಜಿಸಿದ್ದವು. ಸಂಪನ್ಮೂಲ ವ್ಯಕ್ತಿ, ಮಾನವ ಸಂಪನ್ಮೂಲ ಇಲಾಖೆಯ ಆವಿಷ್ಕಾರ ರಾಯಭಾರಿ ಮತ್ತು ಜೈಪುರದ ಐಐಬಿಎಸ್‌ನ ಐಪಿಆರ್ ಫೆಸಿಲಿಟೇಟರ್ ಡಾ.ಪಂಕಜ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ. ಶಿಕ್ಷಕರು ತಮ್ಮ ಆವಿಷ್ಕಾರಗಳಿಗಾಗಿ ಪೇಟೆಂಟ್‌ ಪಡೆಯಬಹುದು, ಅಲ್ಲದೆ ವಿದ್ಯಾರ್ಥಿಗಳನ್ನು ಒಳಗೊಂಡ ಸ್ಟಾರ್ಟ್ಅಪ್‌ಗಳೂ ಪೇಟೆಂಟ್‌ ಪಡೆಯಲು ಅರ್ಹ, […]

ಬಕ್ರೀದ್ ದಿನದಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ, ಪ್ರಾಣಿ ವಧೆ ಮತ್ತು ಬಲಿದಾನ ಮಾಡುವಂತಿಲ್ಲ

Friday, July 16th, 2021
Bakrid

ಮಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ  ರಾಜ್ಯಾದ್ಯಂತ ಜು.21ರಂದು ನಡೆಯುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರವು  ಮಾರ್ಗಸೂಚಿಯನ್ನು ಪ್ರಕಟಿಸಿದೆ. ಬಕ್ರೀದ್ ದಿನದಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಝ್)ಗೆ ನಿರ್ಬಂಧ ಹೇರಲಾಗಿದೆ. ಮಸೀದಿಗಳಲ್ಲಿ 50 ಮಂದಿಗಿಂತ ಹೆಚ್ಚು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಬಹುದಾಗಿದೆ. ಮಸೀದಿಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು, 65 ವರ್ಷ ಮೇಲ್ಪಟ್ಟವರು ಮತ್ತು 10 […]

ಫಳ್ನೀರ್‌ನ ಇಂದಿರಾ ಕಾಲೇಜಿನ ಕಿರಿಯ ವಿದ್ಯಾರ್ಥಿಗೆ ರ್‍ಯಾಗಿಂಗ್‌, ಆರು ವಿದ್ಯಾರ್ಥಿಗಳ ಬಂಧನ

Friday, July 16th, 2021
Indira-College

ಮಂಗಳೂರು :  ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದು, ಕಿರಿಯ ವಿದ್ಯಾರ್ಥಿಯೊಬ್ಬನನ್ನು  ಆರು ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌ ಮಾಡಿದ್ದು ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಫಳ್ನೀರ್‌ನ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್ (20), ಶಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20), ಲಿಮ್ಸ್ (20) ಬಂಧಿತರು. ನಗರದ ಫಳ್ನೀರ್ ರಸ್ತೆಯಲ್ಲಿರುವ ಪಿಲ್ ಪಿಲ್ ಹೋಟೆಲಿಗೆ ರ್‍ಯಾಗಿಂಗ್‌‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು (21) ಎಂಬವರು ತನ್ನ ಸ್ನೇಹಿತರಾದ ಜೋಬಿನ್ ಹಾಗೂ […]

ಕಾಲಿಗೆ ಬಲೆ ಸಿಲುಕಿ ಅಳಿವೆಬಾಗಿಲು ನದಿ ಸಮೀಪ ಮೀನು ಹಿಡಿಯುತ್ತಿದ್ದ ವ್ಯಕ್ತಿ ಸಾವು

Friday, July 16th, 2021
Jaya Putran

ಮಂಗಳೂರು : ನದಿ ನೀರಲ್ಲಿ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಮೀನುಗಾರರೊಬ್ಬರು ಮುಳುಗಿ ಮೃತಪಟ್ಟ ಘಟನೆ ನಗರದ ಅಳಿವೆಬಾಗಿಲು ನದಿ ಸಮೀಪ ನಡೆದಿದೆ. ತೋಟಬೆಂಗ್ರೆ ನಿವಾಸಿ ಜಯ ಪುತ್ರನ್ (55) ಮೃತ ಮೀನುಗಾರ ಎಂದು  ಗುರುತಿಸಲಾಗಿದೆ. ಜಯ ಪುತ್ರನ್  ಮೀನು ಹಿಡಿಯುತ್ತಿದ್ದ ವೇಳೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಈ ವೇಳೆ ಆಕಸ್ಮಿಕವಾಗಿ ಮೀನು ಹಿಡಿಯುವ ಬಲೆ ಕಾಲಿಗೆ ಸಿಲುಕಿದ್ದರಿಂದ ಈಜಲಾಗದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತುಂಬಾ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ […]

ಭಾರಿ ಮಳೆ : ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ತಡೆಗೋಡೆ, ರೈಲುಗಳ ಸಂಚಾರ ಸ್ಥಗಿತ

Friday, July 16th, 2021
Konkan-Rail

ಮಂಗಳೂರು:  ನಗರದ ಕುಲಶೇಖರದಲ್ಲಿ ನಿರ್ಮಾಣ ಹಂತದ ರೈಲ್ವೆ ಸುರಂಗ ಮಾರ್ಗದ ಬಳಿ ತಡೆಗೋಡೆ ಕುಸಿದು ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಮಳೆಯಿಂದಾಗಿ  ಶುಕ್ರವಾರ ಮುಂಜಾನೆ ಘಟನೆ ಸಂಭವಿಸಿದ್ದು, ಕಾಂಕ್ರೀಟ್‌ನಿಂದ ನಿರ್ಮಿಸಲಾದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ಜರಿದು ಹಳಿಯ ಮೇಲೆ ಬಿದ್ದಿದೆ. ಮಂಗಳೂರು ಜಂಕ್ಷನ್‌-ತೋಕೂರು ನಡುವಿನ ಕುಲಶೇಖರ ಬಳಿ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಣ್ಣು ತೆರವು ಕಾರ್ಯ ಆರಂಭವಾಗಿದ್ದು, ಕೊಂಕಣ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.  ಹಳಿಯ ಮೇಲೆ […]

ನಗರದಲ್ಲಿ ಬಸ್ ಸಂಚಾರಿ ಮಾರ್ಗ ಬದಲಾವಣೆ, ಸಾರ್ವಜನಿಕರಿಂದ ದೂರು

Thursday, July 15th, 2021
Bus Route

ಮಂಗಳೂರು  : ನಗರದಲ್ಲಿ ಬಸ್ ಸಂಚಾರಿ ಮಾರ್ಗ ಬದಲಾವಣೆಯ ಕುರಿತು ಸಾರ್ವಜನಿಕವಾಗಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸಿಬ್ಬಂದಿಗಳಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ‌ಶಾಸಕ ಕಾಮತ್, ಬಸ್ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಮಾರ್ಗ ಬದಲಾವಣೆಯ ಕುರಿತು ಒಪ್ಪಿಗೆ ಸೂಚಿಸಿದ ಬಳಿಕವೇ ಬಸ್ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ವರೆಗೆ […]

ಉಚಿತ ಕನ್ನಡಕ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ ಡಾ.ಭರತ್ ಶೆಟ್ಟಿ

Thursday, July 15th, 2021
Kannadaka

ಮಂಗಳೂರು  : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಮತ್ತು ಭಾರತೀಯ ಜನತಾ ಪಾರ್ಟಿ ಎ.ಸ್ ಸಿ ಮೋರ್ಚಾ ಮಂಗಳೂರು ಉತ್ತರ ಮಂಡಲ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲ್ ಲಿಟಿ ಆಸ್ಪತ್ರೆ ಉಡುಪಿ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಅಂಬೇಡ್ಕರ್ ರವರ 130 ವರ್ಷದ ಜಯಂತಿ ಪ್ರಯುಕ್ತ 18ನೇವಾರ್ಡ್ ನ ದ.ಕ.ಜಿ.ಪಂ.ಉನ್ನತೀಕರಿಸಿದ ಮುಲ್ಲಕಾಡಿನ ಶಾಲೆಯಲ್ಲಿ ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಯವರ ನೇತೃತ್ವದಲ್ಲಿ ಉಚಿತ ಕನ್ನಡಕ ಬುಧವಾರ ವಿತರಿಸಲಾಯಿತು. ಈ […]

ಚಾಲಕನ ನಿಯಂತ್ರಣ ತಪ್ಪಿ ಪಂಪ್‌ವೆಲ್ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಇಳಿದ ಕಾರು

Thursday, July 15th, 2021
Pumpwell-Car

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಕಾರು ಪಂಪ್‌ವೆಲ್ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಾರಿದ ಘಟನೆ ಗುರುವಾರ ಸಂಜೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಆಗಮಿಸುಸುತ್ತಿದ್ದ ಕಾರು ಎದುರಿನಿಂದ ವೇಗವಾಗಿ ಬಂದ ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ  ಚಾಲಕನ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರಸ್ತೆಗೆ ಜಾರಿಕೊಂಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಸ್ಥಳೀಯರು ಸಹಕಾರದೊಂದಿಗೆ ಪೊಲೀಸರು ರಸ್ತೆಗೆ ತಳ್ಳಿ ನಿಲ್ಲಿಸಿದರು. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಂಗಳೂರು ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆ ಹಾಗೂ ಕಚೇರಿಗೆ ಎಸಿಬಿ ದಾಳಿ‌

Thursday, July 15th, 2021
ACB-Raid

ಮಂಗಳೂರು : ರಾಜ್ಯದ ಒಂಬತ್ತು ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದು,  ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಜಿಲ್ಲಾ ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ. ಶ್ರೀಧರ್ ಅವರ ಮನೆ ಹಾಗೂ ಕಚೇರಿಗೆ ಎಸಿಬಿ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಜಿ. ಶ್ರೀಧರ್ ಅವರಿಗೆ ಸೇರಿದ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕಕ್ಕೆ ದಾಳಿ‌ ನಡೆಸಿದ ಅಧಿಕಾರಿ ಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಎಸಿಬಿ […]

ಹಿಂದೆ ಕಳ್ಳತನ ಮಾಡಿದ್ದ 252 ಮಂದಿಯನ್ನುವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

Thursday, July 15th, 2021
Old-Thives

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿರುವ 252 ಮಂದಿಯನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಯುಕ್ತ ಹಾಕಲಾದ ಲಾಕ್‌ಡೌನ್’ ಕೊನೆಗೊಂಡ ನಂತರ ಸೊತ್ತುಕಳವು ಪ್ರಕರಣಗಳು ವರದಿಯಾಗಿದ್ದು, ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ವಾಹನ ಕಳವು, ಮನೆಕಳ್ಳತನ, ಸರಕಳ್ಳತನ, ದೇವಸ್ಥಾನ ಕಳವು ದನ ಕಳವು ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಈ ದಿನ […]