ಗಂಡನಿಗೆ ತಿಳಿಸದೆ ಒಡವೆಗಳನ್ನು ಅಡವಿಟ್ಟು ಸ್ನೇಹಿತನಿಗೆ ಹಣ ನೀಡಿ, ಮಹಿಳೆ ಮಕ್ಕಳು ನಾಪತ್ತೆ

Saturday, March 13th, 2021
Jyoti

ಮಂಗಳೂರು  : ಪತಿಯ ಗಮನಕ್ಕೂ ಬಾರದಂತೆ ತನ್ನ ಬಂಗಾರದ ಒಡವೆಗಳನ್ನು ಫೈನಾನ್ಸ್‌ವೊಂದರಲ್ಲಿ ಅಡಮಾನ ಇಟ್ಟು  ಮೂಡುಬಿದಿರೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆ ಸಮೇತ  ಐದು ಮಂದಿ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36), ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ಮನೋರಂಜಿತಂ (56) ನಾಪತ್ತೆಯಾದವರು ಎಂದು ತಿಳಿದುಬಂದಿದೆ. ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ (36) ಎಂಬವರು ಮಾ.10ರಂದು ತನ್ನ ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, […]

ಕನ್ನಡ ಭವನಕ್ಕೆ ಅನುದಾನ ಪಡೆಯಲು ಮನೆ ದಾಖಲೆಪತ್ರ ಅಡಮಾನ ಇಡಬೇಕು: ಕೆ.ಮೋಹನ ರಾವ್ ಅಳಲು

Saturday, March 13th, 2021
Kasapa

ಬಂಟ್ವಾಳ: ರಾಜ್ಯದ ಕೆಲವೊಂದು ತಾಲ್ಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಖಾಯಂ ಉಳಿಸಿಕೊಳ್ಳಲು ಮತ್ತು ಅನಗತ್ಯ ಬದಲಾವಣೆಗೆ ಏಕಸ್ವಾಮ್ಯ ಮೆರೆಯುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಮೇ.9ರಂದು ನಡೆಯುವ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನನಗೆ ಬಹುಮತದ ಗೆಲುವು ನೀಡಿದರೆ ಇದನ್ನು ಜನಸಾಮಾನ್ಯರ ಪರಿಷತ್ತಾಗಿ ಪರಿವರ್ತಿಸುವುದಾಗಿ ನಾಡೋಜ ಡಾ.ಮಹೇಶ ಜೋಶಿ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನಕ್ಕೆ ಶನಿವಾರ ಭೇಟಿ ನೀಡಿ ಅವರು ಮತಯಾಚನೆ ನಡೆಸಿದರು. ರಾಜ್ಯದ ಒಟ್ಟು […]

ದಕ್ಷಿಣ ಕನ್ನಡ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಸದಾನಂದ ಪೂಂಜ

Saturday, March 13th, 2021
Sadananda Poonja

ಬಂಟ್ವಾಳ: ಹಿರಿಯ ಕಾಂಗ್ರೆಸ್ ಮುಖಂಡ, ದ.ಕ. ಜಿ.ಪಂ. ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ(80) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದ ಅವರು ಸಜೀಪಮೂಡ ಗ್ರಾಮದ ಅಭಿವೃದ್ಧಿಯ ರೂವಾರಿಗಳಾಗಿ ಗುರುತಿಸಿಕೊಂಡಿದ್ದರು, ಸಜೀಪ ಮಾಗಣೆಯ ಆಡಳಿತದಾರರಾಗಿದ್ದರು. ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸುಭಾಷ್‌ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಜೀಪಮೂಡದಲ್ಲಿ ಸರಕಾರಿ ಪ.ಪೂ.ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು. ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ […]

ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಎಲೆನ್ ಕೆರಿಯರ್ ಇನ್‍ಸ್ಟಿಟ್ಯೂಟ್

Friday, March 12th, 2021
ALLEN Career Institute

  ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ರಾಜಸ್ಥಾನ ಕೋಟದ ಎಲೆನ್ ಕೆರಿಯರ್ ಇನ್‍ಸ್ಟಿಟ್ಯೂಟ್ ಸಂಸ್ಥೆ ಕೈ ಜೋಡಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಮಾರ್ಚ್ 12, 2021 ರಂದು ಮಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಖ್ಯಾತ ವೈದ್ಯ, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊ. ಚಾನ್ಸೆಲರ್ ಡಾ.ಶಾಂತರಾಮ ಶೆಟ್ಟಿ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಮಂಗಳೂರಿನಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಎಲೆನ್ ತನ್ನ ಕೇಂದ್ರವನ್ನು […]

ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆ, ಸ್ಥಳೀಯರಲ್ಲಿ ಆತಂಕ

Friday, March 12th, 2021
Monkey death

ಬೆಳ್ತಂಗಡಿ : ಕಾಯರ್ತೋಡಿ ಸಮೀಪವಿರುವ ಸೀಟ್ ರಕ್ಷಿತಾರಣ್ಯದಲ್ಲಿ ಇಂದು ಬೆಳಗ್ಗೆ ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಡಾಜೆ ಗ್ರಾಮದಲ್ಲಿ ನಡೆದ  ಘಟನೆಯ  ಕುರಿತು ಸ್ಥಳೀಯರು ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಲಿಪಾಷಾಣ ಸೇವಿಸಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೃತ್ಯು

Friday, March 12th, 2021
Yashashwini

ಮಂಗಳೂರು  : ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಇಲಿಪಾಷಾಣ ಸೇವಿಸಿ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದ ಮಾವಿನಕಟ್ಟೆಯಿಂದ ವರದಿಯಾಗಿದೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆ ಗೆ ಕರೆತರಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳೆನ್ನಲಾಗಿದೆ. ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬವರ ಪುತ್ರಿ ಯಶಸ್ವಿನಿ (13 ) ಎಂಬಾಕೆ ಮೃತ ವಿದ್ಯಾರ್ಥಿನಿ. ಈಕೆ ವಾರದ ಹಿಂದೆ ಅಂಗಡಿಯೊಂದರಿಂದ ಇಲಿಪಾಷಾಣ ಖರೀದಿಸಿ, ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ. ಶಾಲೆಯಲ್ಲಿ ಈಕೆ ಅಸ್ವಸ್ಥಗೊಂಡಾಗ […]

ಉರ್ವ ಶಿರಡಿ ಸಾಯಿ ಬಾಬಾ ಮಂದಿರದಬಳಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಚಿನ್ನಾಭರಣ, ನಗದು ದರೋಡೆ

Friday, March 12th, 2021
Robbery

ಮಂಗಳೂರು : ಉರ್ವ ಶಿರಡಿ ಸಾಯಿ ಬಾಬಾ ಮಂದಿರದ ದ್ವಾರದ ಮುಂಭಾಗ ದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಅದರೊಳಗಿದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಗುರುವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಭಕ್ತರೋರ್ವರು ಇಲ್ಲಿನ ಶಿರಡಿ ಸಾಯಿ ಬಾಬಾ ಮಂದಿರದ ದ್ವಾರದ ಮುಂಭಾಗ ಕಾರು ನಿಲ್ಲಿಸಿ ಮಂದಿರಕ್ಕೆ ತೆರಲಿದ್ದ ವೇಳೆ ದುಷ್ಕರ್ಮಿಗಳ ತಂಡ ಕಾರಿನ‌ ಕಿಟಕಿಯ ಗಾಜು ಹೊಡೆದು ಕಾರಿನಲ್ಲಿದ್ದ ಪಾಸ್ ಪೋರ್ಟ್, ಅಧಾರ್ ಕಾರ್ಡ್ ಎಟಿಎಮ್ ಕಾರ್ಡ್ಹಾಗೂ ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಳವು […]

ಶಿವನ ವಾಸಸ್ಥಾನ ರುದ್ರಭೂಮಿಯಲ್ಲಿ ಶಿವರಾತ್ರಿ ಆಚರಿಸಿದ ಭಕ್ತರು

Thursday, March 11th, 2021
Rudra Bhoomi

ಮಂಗಳೂರು  : ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಸಾಮಾನ್ಯವಾಗಿ ರುದ್ರಭೂಮಿಯೆಂದರೆ ಭಯಪಟ್ಟುಕೊಳ್ಳುತ್ತಾರೆ. ಮಹಿಳೆಯರಂತೂ ಇತ್ತ ಕಾಲಿಡುವುದೇ ಅಪರೂಪ. ಆದರೆ, ಇಲ್ಲಿ ಯಾವುದೇ ಭಯವಿಲ್ಲದೇ ಮಧ್ಯರಾತ್ರಿಯವರೆಗೂ ಗುಂಪುಗುಂಪಾಗಿ ಜನಜಮಾಯಿಸಿ, ದೇವ ಸಂಕೀರ್ತನೆಯಲ್ಲಿ ಪಾಲ್ಗೊಂಡುಬೃಹತ್ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ […]

ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಅವರಿಗೆ ಮಾತೃ ವಿಯೋಗ

Thursday, March 11th, 2021
Sharadha Gatty

ಮಂಗಳೂರು : ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಶ್ರೀಮತಿ ಮಮತಾ ಗಟ್ಟಿಯವರ ಮಾತೃಶ್ರೀ ಶಾರದಾ ಎಸ್. ಗಟ್ಟಿ (75) ಯವರು ಗುರುವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಮಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಧರ್ಮಕ್ಕಿ ಸಂಜೀವ ಗಟ್ಟಿಯವರ ಧರ್ಮ ಪತ್ನಿ ಯಾದ ಅವರು ಎರಡು ಹೆಣ್ಣು ಬಬಿತಾ, ಮಮತಗಟ್ಟಿ ಹಾಗೂ  ಸತೀಶ್, ರಾಜೇಶ್ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.

ಸೂಟರ್ ಪೇಟೆ : ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

Thursday, March 11th, 2021
Suterpete

ಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-6ರಿಂದ 9ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು . ನೇಮೋತ್ಸವದ ಮೊದಲು ಮಾರ್ಚ್ -5ರಂದು ಧರ್ಮದರ್ಶಿ ಶ್ರೀ ಭಾಸ್ಕರ್ […]